Advertisement
ಪಿತೃ ದೇವೋಭವ ಎಂದು ಉಚ್ಚರಿ ಸುವ ಪ್ರತಿ ಕ್ಷಣವೂ ಅಪ್ಪನೇ ಕಣ್ಮುಂದೆ ಬರುತ್ತಾರೆ. ಹೌದು, ಮಗುವೊಂದಕ್ಕೆ ಅಮ್ಮನಂತೆ ಅಪ್ಪನ ಪೋಷಣೆಯೂ ತುಂಬಾ ಮುಖ್ಯ. ಅವರು ದೇವರೆಂದರೆ ತಪ್ಪಲ್ಲ. ಹುಟ್ಟಿದಾಗಿನಿಂದ ಮಗುವಿನ ಎಲ್ಲ ಸಣ್ಣ , ದೊಡ್ಡ ಬೇಡಿಕೆಗಳನ್ನು ಎಷ್ಟೇ ಕಷ್ಟವಾದರೂ ಯೋಚಿಸದೆ ಪೂರೈಸುವ ಮನಸ್ಸಿರುವುದು ಅಪ್ಪನಿಗೆ ಮಾತ್ರ. ಅಲ್ಲಿ ಸ್ವಾರ್ಥ ಎಂಬ ಪದಕ್ಕೆ ಅರ್ಥವೇ ಇಲ್ಲ.
ಹೆಚ್ಚಿನ ಎಲ್ಲ ದಿನಾಚರಣೆಗಳೂ ಪಾಶ್ಚಾತ್ಯರ ಕೊಡುಗೆಯೇ ಅಧಿಕವಾಗಿರುತ್ತದೆ. ಅಪ್ಪಂದಿರ ದಿನ ಕೂಡ ಪಾಶ್ಚಾತ್ಯ ದೇಶ ದಲ್ಲೇ ಮೊದಲು ಆಚರಣೆಗೆ ಬಂತು. ಸೊನೊರಾ ಲೂಯಿಸ್ ಸ್ಮಾರ್ಟ್ ಡೊಡ್ ಎಂಬ ಮಹಿಳೆಯ 62 ವರ್ಷದ ಹೋರಾಟದ ಫಲವಾಗಿ ಅಮೆರಿಕದಲ್ಲಿ ಮೊದಲು ಅಪ್ಪಂದಿರ ದಿನವನ್ನು ಆಚರಿಸ ಲಾಯಿತು. ಸೊನೊರಾ ಲೂಯಿಸ್ ಸ್ಮಾರ್ಟ್ ಡೊಡ್ 15 ವರ್ಷದ ಹುಡುಗಿಯಾಗಿದ್ದಾಗ ಅವಳ ತಾಯಿ ತೀರಿಕೊಂಡರು. ಹೀಗಾ ಗಿ ಅವಳನ್ನು ಮತ್ತು ಅವಳ 5 ವರ್ಷದ ತಮ್ಮನನ್ನು ಬೆಳೆಸುವ ಜವಾಬ್ದಾರಿ ಅಪ್ಪನ ಮೇಲೆ ಬಿತ್ತು. ಅಮ್ಮಂದಿರ ದಿನದ ಆಚರಣೆಯ ಬಗ್ಗೆ ಅರಿತ ಸೊನೊರಾ ಅಪ್ಪಂದಿರ ದಿನವನ್ನು ಅಥವಾ ತನ್ನ ಅಪ್ಪನ ದಿನವನ್ನು ಆಚರಿಸಲು ನಿರ್ಧರಿಸಿದಳು. ಅದಕ್ಕಾಗಿ ಸಂಬಂಧಪಟ್ಟ ಆಡಳಿತ ವರ್ಗ ಹಾಗೂ ಚರ್ಚ್‌ಗಳಿಗೆ ಪತ್ರವನ್ನು ಬರೆಯಲಾರಂಭಿಸಿದಳು.
Related Articles
Advertisement
ಅಪ್ಪನ ಜವಾಬ್ದಾರಿ ಗೌರವಿಸುವ ದಿನಅಪ್ಪಂದಿರಿಗೆ ಸಮಾಜ ಮತ್ತು ಕುಟುಂಬದಲ್ಲಿರುವ ಜವಾಬ್ದಾರಿ ಮತ್ತು ಹೊಣೆಗಳನ್ನು ಗುರುತಿಸಿ ಗೌರವಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಮೊದಮೊದಲ ಗುಲಾಬಿ ನೀಡಿ ಆಚರಿಸಲ್ಪಡುತ್ತಿದ್ದ ಈ ದಿನ ಇತ್ತೀಚೆಗೆ ಉಡುಗೊರೆಗಳನ್ನು ನೀಡುವಲ್ಲಿಯವರೆಗೆ ಮುಂದುವರಿದಿದೆ.
ಒಂದು ಮಗುವನ್ನು ಹೆತ್ತು ಹೊತ್ತು ಸಾಕುವ ಅಮ್ಮನಷ್ಟೇ ಜವಾಬ್ದಾರಿ ಅಪ್ಪನಿಗೂ ಇದೆ. ಅಪ್ಪ ಒಬ್ಬ ಏಕಪೋಷಕನಾಗಿದ್ದರೆ ಅವರ ಜವಾಬ್ದಾರಿಗಳು ಮತ್ತಷ್ಟು ಹೆಚ್ಚಿ ಅದನ್ನೂ ನಿಭಾಯಿಸಬೇಕಾಗುತ್ತದೆ.
ತನ್ನೆಲ್ಲ ಒತ್ತಡಗಳ ಮಧ್ಯೆಯೂ ಮಕ್ಕಳಿ ಗಾಗಿ ಸಮಯ ಮೀಸಲಿರಿಸಿ ಅವರ ಬೇಕು ಬೇಡಗಳನ್ನು ಪೂರೈಸುವ ಅಪ್ಪಂದಿರು ಕೂಡ ತಾಯಿಯಾಗಿ, ಗುರುವಾಗಿ, ಸ್ನೇಹಿತನಾಗಿ ಮಕ್ಕಳನ್ನು ಬೆಳೆಸಬಲ್ಲ, ಅವರ ಬದುಕಿಗೆ ಸರಿಯಾದ ದಾರಿ ತೋರಬಲ್ಲ ಎಂಬ ಸಂದೇಶವೂ ಇದರಲ್ಲಿ ಅಡಗಿದೆ. ಉತ್ತಮ ಅಪ್ಪನಾಗುವುದು ಸುಲಭವಲ್ಲ
ಪ್ರತಿಯೊಬ್ಬ ಪುರುಷನ ಬಯಕೆ ಒಬ್ಬ ಉತ್ತಮ ಅಪ್ಪನಾಗಬೇಕು ಎನ್ನುವುದಾಗಿರುತ್ತದೆ. ಆದರೆ ಅದು ಅಷ್ಟು ಸುಲಭದ ಕೆಲಸವೇನಲ್ಲ. ಮಕ್ಕಳನ್ನು ಎಲ್ಲ ವಯಸ್ಸಿನಲ್ಲಿಯೂ ಅವರ ಭಾವನೆಗಳಿಗೆ ತಕ್ಕಂತೆ ಅರ್ಥ ಮಾಡಿಕೊಂಡು ತಿದ್ದಿ ತೀಡುವ ಹೊಣೆ ಅವರ ಮೇಲಿರುತ್ತದೆ. ಕೆಲವೊಂದು ಜವಾಬ್ದಾರಿಗಳೇ ಹಾಗೆ, ಕಷ್ಟವೆಂದರೆ ಕಷ್ಟ; ಇಷ್ಟಪಟ್ಟು ಮಾಡಿದರೆ ಸಂತೃಪ್ತಿ. ಅಪ್ಪನದ್ದೂ ಅದೇ ಹೊಣೆಗಾರಿಕೆ. ಸುಶ್ಮಿತಾ ಶೆಟ್ಟಿ ಸಿರಿಬಾಗಿಲು