Advertisement
ಕೊವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಲಸಿಕೆಗಳು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ತಲುಪಿವೆ. ಬೆಳಗ್ಗೆ 10.30ಕ್ಕೆ ಪ್ರಧಾನಿ ಮೋದಿ ಅವರು ವಚ್ಯುìವಲ್ ಮೂಲಕ ವಿತರಣೆಯನ್ನು ಉದ್ಘಾಟಿಸಲಿದ್ದಾರೆ. ಬಳಿಕ ದೇಶಾದ್ಯಂತ ಲಸಿಕೆ ನೀಡಿಕೆಯನ್ನು ಆರಂಭಿಸಲಾಗುತ್ತದೆ.
Related Articles
Advertisement
ಲಸಿಕೆ ಪಡೆದ ತತ್‌ಕ್ಷಣ ಕೆಲವರಿಗೆ ತಲೆ ಸುತ್ತು, ಕೈ ಊತ ಉಂಟಾಗಬಹುದು. ಅದು ಸ್ವಲ್ಪ ಸಮಯದ ಅನಂತರ ತಾನಾಗಿಯೇ ಕಡಿಮೆಯಾಗುತ್ತದೆ. ಈ ಬಗ್ಗೆ ಅತಂಕ ಪಡಬೇಕಿಲ್ಲ. ಲಸಿಕೆ ನೀಡಿದ ಅರ್ಧ ತಾಸು ಲಸಿಕಾ ಕೇಂದ್ರದಲ್ಲಿಯೇ ಉಳಿಸಿ ನಿಗಾ ವಹಿಸ ಲಾಗುತ್ತದೆ ಎಂದು ಡಾ| ಸುಧಾಕರ್ ಹೇಳಿದರು.
ಸರಕಾರಿ ಮಾಹಿತಿ ಮಾತ್ರ ನಂಬಿ :
ಲಸಿಕೆಯಿಂದ ಅಡ್ಡಪರಿಣಾಮ ಉಂಟಾದರೆ, ಸ್ಥಳದಲ್ಲೇ ತುರ್ತು ಚಿಕಿತ್ಸೆ ವ್ಯವಸ್ಥೆ ಇದೆ. ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಮಾಹಿತಿ ಹರಡಲಾಗುತ್ತಿದೆ. ಸರಕಾರದಿಂದ ಬಿಡುಗಡೆ ಮಾಡುವ ಮಾಹಿತಿ ಮಾತ್ರ ಅಧಿಕೃತ ಹಾಗೂ ಸತ್ಯ ಎಂದು ಡಾ| ಸುಧಾಕರ್ ಸ್ಪಷ್ಟಪಡಿಸಿದರು.
ಮೊದಲ ದಿನ 3 ಲಕ್ಷ ಲಸಿಕೆ :
ಮೊದಲ ದಿನವೇ 3 ಲಕ್ಷ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗುತ್ತದೆ. ಇದಕ್ಕಾಗಿ 3,006 ಲಸಿಕಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಪ್ರತೀ ಕೇಂದ್ರದಲ್ಲೂ ದಿನಕ್ಕೆ 100 ಮಂದಿಗೆ ಲಸಿಕೆ ನೀಡಲಾಗುತ್ತದೆ. ಮುಂದಿನ ದಿನಗಳಲ್ಲಿ 5,000 ಕೇಂದ್ರಗಳನ್ನು ಸ್ಥಾಪಿಸುವ ಗುರಿ ಇದೆ.
ಕೇಂದ್ರದ ನಿಯಮಾವಳಿಗಳು :
- 18 ವರ್ಷ ಮೇಲ್ಪಟ್ಟವರಿಗೆ ಮಾತ್ರ ಲಸಿಕೆ.
- ಗರ್ಭಿಣಿಯರು, ಬಾಣಂತಿಯರಿಗೆ ಲಸಿಕೆ ನೀಡಲಾಗುವುದಿಲ್ಲ.
- ಒಮ್ಮೆ ಕೊವಿಶೀಲ್ಡ್ , ಮಗದೊಮ್ಮೆ ಕೊವ್ಯಾಕ್ಸಿನ್ ನೀಡುವುದಿಲ್ಲ.
- 2 ಡೋಸ್‌ಗಳ ನಡುವಿನ ಅಂತರ 14 ದಿನಗಳು.
- ಲಸಿಕೆ ಪಡೆಯುವುದು ಕಡ್ಡಾಯವಲ್ಲ.