Advertisement
ಕೃಷಿ ವಿವಿ ಅಂತಾರಾಷ್ಟ್ರೀಯ ಅತಿಥಿ ಗೃಹದಲ್ಲಿ ಸೋಮವಾರ ಸುದ್ದಿಗೋಷ್ಠಯಲ್ಲಿ ಮಾತನಾಡಿ, ನವದೆಹಲಿಯ ಭಾರತೀಯ ಕೃಷಿ ಅನುಸಂಧಾನ ಪರಿಷತ್ ಉಪ ಮಹಾನಿರ್ದೇಶಕ ಡಾ| ನರೇಂದ್ರ ಸಿಂಗ್ ರಾಠೊರೆ ಘಟಿಕೋತ್ಸವ ಮುಖ್ಯ ಭಾಷಣ ಮಾಡುವರು. ಕೃಷಿ ಸಚಿವ ಎನ್. ಎಚ್. ಶಿವಶಂಕರ ರೆಡ್ಡಿ ಆಗಮಿಸುವರು. ರಾಜ್ಯಪಾಲ ಹಾಗೂ ವಿವಿ ಕುಲಾಧಿ ಪತಿ ವಜುಭಾಯಿ ವಾಲಾ ಅಧ್ಯಕ್ಷತೆ ವಹಿಸುವರು ಎಂದು ವಿವರಿಸಿದರು.
Related Articles
Advertisement
ಅಧಿಕ ಇಳುವರಿಯ ಭತ್ತದ ನೂತನ ತಳಿ ಜಿಎನ್‌ವಿ 10-89, ಹತ್ತಿ ತಳಿ ಬಿಜಿಡಿಎಸ್-1063, ಮೆಣಸಿನಕಾಯಿ ಹೈಬ್ರಿಡ್ ಜೆಸಿಎಚ್-42 ಹಾಗೂ ಸಿಒ-06027 ಕಬ್ಬಿನ ತಳಿ ಸಂಶೋಧಿಸಿ ಪ್ರಯೋಗ ಮಾಡಲಾಗಿದೆ. ತಂತ್ರಜ್ಞಾನ ಅಭಿವೃದ್ಧಿ ಮತ್ತು ವಿವಿಧ ಬೆಳೆಗಳ ಉತ್ಪಾದಕತೆ ಹೆಚ್ಚಿಸುವ ನಿಟ್ಟಿನಲ್ಲಿ ಕೃಷಿ ವಿವಿಯು ಹಲವಾರು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸಂಸ್ಥೆಗಳಿಂದ ಒಟ್ಟು 2056.04ಲಕ್ಷ ಮೌಲ್ಯದ ಹೊಸ ಯೋಜನೆ ಪಡೆದಿದೆ ಎಂದು ತಿಳಿಸಿದರು.
ವಿವಿಯ ಸಾಕಷ್ಟು ವಿದ್ಯಾರ್ಥಿಗಳು ನವದೆಹಲಿಯ ಭಾರತೀಯ ಕೃಷಿ ಅನುಸಂಧಾನ ಪರಿಷತ್‌ನ ಜ್ಯೂನಿಯರ್ ಫೆಲೋಶಿಪ್‌ಗೆ ಆಯ್ಕೆಯಾಗಿದ್ದಾರೆ. ಇಬ್ಬರು ಐಸಿಎಆರ್ ಜೆಆರ್‌ಎಫ್ ಹಾಗೂ ವಿದ್ಯಾರ್ಥಿ ಗೇಟ್ ಶಿಷ್ಯವೇತನ ಪಡೆದಿದ್ದಾರೆ. ಎಸ್‌ಆರ್‌ಎಫ್ ಶಿಷ್ಯವೇತನ ಮೂವರಿಗೆ, ನವದೆಹಲಿಯ ವಿಜ್ಞಾನ ತಂತ್ರಜ್ಞಾನ ಇಲಾಖೆಯಿಂದ ಆರು ಸಂಶೋಧನಾ ವಿದ್ಯಾರ್ಥಿಗಳು ಇನ್‌ಸ್ಪೇರ್ ಫೆಲೋಶಿಪ್, ಒಬ್ಬ ವಿದ್ಯಾರ್ಥಿಗೆ ಇಕ್ರಿಸ್ಯಾಟ್ ಫೆಲೋಶಿಪ್, ಮೂರು ವಿದ್ಯಾರ್ಥಿಗಳಿಗೆ ಯುಜಿಸಿ ಸಂಸ್ಥೆಯ ರಾಜೀವಗಾಂಧಿ ಫೆಲೋಶಿಪ್, ಐವರು ವಿದ್ಯಾರ್ಥಿಗಳಿಗೆ ಮೌಲಾನಾ ಆಜಾದ್ ಫೆಲೋಶಿಪ್ ಹಾಗೂ ಒಬ್ಬ ವಿದ್ಯಾರ್ಥಿಗೆ ಡೌವ್ ಅಗ್ರೊ ಸೈನ್ಸ್ ಫೆಲೋಶಿಪ್ ಲಭಿಸಿದೆ. ಒಬ್ಬ ವಿದ್ಯಾರ್ಥಿಗೆ ಐಸಿಆರ್ ಎಸ್‌ಆರ್‌ಎಫ್ ಹಾಗೂ ಒಬ್ಬ ವಿದ್ಯಾರ್ಥಿಗೆ ಸಿಎಸ್‌ಐಆರ್ ಫೆಲೋಶಿಪ್ ಲಭಿಸಿದೆ ಎಂದು ವಿವರಿಸಿದರು.
ಕುಲಸಚಿವ ಡಾ| ಎಂ.ಬಿ.ಪಾಟೀಲ, ಕೃಷಿ ವಿಸ್ತರಣಾ ನಿರ್ದೇಶಕ ಡಾ| ಬಿ.ಎಂ.ಚಿತ್ತಾಪುರ, ಶಿಕ್ಷಣ ನಿರ್ದೇಶಕ ಡಾ| ಎಸ್.ಕೆ.ಮೇಟಿ, ಸಂಶೋಧನಾ ನಿರ್ದೇಶಕ ಡಾ| ಬಿ.ಕೆ.ದೇಸಾಯಿ, ಸಾರ್ವಜನಿಕ ಸಂಪರ್ಕಾಧಿಕಾರಿ ಡಾ| ಪ್ರಮೋದ ಕಟ್ಟಿ, ವ್ಯವಸ್ಥಾಪನಾ ಮಂಡಳಿ ಸದಸ್ಯ ಡಾ| ಎಂ.ಶೇಖರಗೌಡ ಇತರರು ಇದ್ದರು.
ಶಿಕ್ಷಣ ಸಂಶೋಧನೆಗೆ ಬಜೆಟ್‌ನಲ್ಲಿ 26.5 ಕೋಟಿ ಶಿಕ್ಷಣ ಸಂಶೋಧನೆ ಮತ್ತು ವಿಸ್ತರಣೆಗಾಗಿ ಸರ್ಕಾರಕ್ಕೆ 155 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ, ಈಚೆಗೆ ಮಂಡನೆಯಾದ ಬಜೆಟ್‌ನಲ್ಲಿ 26.5 ಕೋಟಿ ರೂ. ಮಾತ್ರ ನೀಡಲಾಗಿದೆ. ಅದರಲ್ಲಿ 11 ಕೋಟಿ ರೂ. ಸಂಶೋಧನೆಗೆ ಹಾಗೂ 15.5 ಕೋಟಿ ಶಿಕ್ಷಣಕ್ಕೆ ಮೀಸಲಿಡಲಾಗಿದೆ. ಸಿರಿಧಾನ್ಯಗಳ ಉತ್ತೇಜನಕ್ಕೆ ವಿಶೇಷ ಒತ್ತು ನೀಡಲಾಗಿದೆ. ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಸರ್ಕಾರದಿಂದ 3.75 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಕಲಬುರಗಿ,