Advertisement

ಇಂದು ಉತ್ತರ ಪ್ರದೇಶದಲ್ಲಿ ಕೊನೇ ಹಂತದ ಮತ

11:54 PM Mar 06, 2022 | Team Udayavani |

ಲಕ್ನೋ: ಉತ್ತರ ಪ್ರದೇಶದ ವಾರಾಣಸಿ ಸೇರಿದಂತೆ ಒಂಭತ್ತು ಜಿಲ್ಲೆಗಳ 54 ಕ್ಷೇತ್ರಗಳಲ್ಲಿ ಏಳನೇಯ ಮತ್ತು ಕೊನೇ ಹಂತದ ಮತದಾನ ಸೋಮವಾರ ನಡೆಯಲಿದೆ.

Advertisement

ಒಟ್ಟು 613 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದು ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಈ ಮೂಲಕ ಫೆ.10ರಿಂದ ಶುರುವಾಗಿದ್ದ ಐದು ರಾಜ್ಯಗಳ ಮತದಾನ ಸೋಮವಾರ ಮುಕ್ತಾಯವಾಗಲಿದೆ.

ಮಾ.10ರಂದು ಮತ ಎಣಿಕೆ ನಡೆಯಲಿದೆ. ಈ ಐದು ರಾಜ್ಯಗಳ, ವಿಶೇಷವಾಗಿ ಉತ್ತರ ಪ್ರದೇಶದಲ್ಲಿ ಯಾವ ಪಕ್ಷ ಅಥವಾ ಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ ಎನ್ನುವುದು 2024ರಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಯ ಮೇಲೆ ಪರಿಣಾಮ ಬೀರಲಿದೆ.

ಬೆಳಗ್ಗೆ 7 ಗಂಟೆ ಯಿಂದ ಸಂಜೆ ಆರು ಗಂಟೆಯ ವರೆಗೆ ಮತದಾನದ ಸಮಯ ನಿಗದಿ ಮಾಡಲಾಗಿದೆ. ಪಂಜಾಬ್‌, ಗೋವಾ, ಉತ್ತರಾಖಂಡಗಳಲ್ಲಿ ಒಂದೇ ಹಂತದ ಮತ ದಾನ ನಡೆದಿತ್ತು. ಮಣಿಪುರದಲ್ಲಿ ಎರಡು ಹಂತಗಳ ಮತದಾನ ನಡೆದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next