Advertisement
ಈ ಸರಣಿಯಲ್ಲಿ 3 ಏಕದಿನ ಮುಖಾಮುಖೀ ನಡೆಯಲಿದ್ದು, ಶುಕ್ರವಾರದ ಮೊದಲ ಪಂದ್ಯ ಲಸಿತ ಮಾಲಿಂಗ ಪಾಲಿನ “ವಿದಾಯ ಪಂದ್ಯ’ವಾಗಲಿದೆ.
ಮಾಲಿಂಗ 2004ರಲ್ಲಿ ಯುಎಇ ವಿರುದ್ಧ ಡಂಬುಲದಲ್ಲಿ ಏಕದಿನಕ್ಕೆ ಪದಾರ್ಪಣೆ ಮಾಡಿ ದ್ದರು. ಈ 15 ವರ್ಷಗಳ ಅವಧಿಯಲ್ಲಿ ಬಹಳಷ್ಟು ಸಲ ಗಾಯಾಳಾಗಿ ಹೊರಗುಳಿದುದರಿಂದ ಅವರ ವಿಕೆಟ್ ಬೇಟೆಗೆ ಭಾರೀ ಹಿನ್ನಡೆಯಾದದ್ದು ಸುಳ್ಳಲ್ಲ. ಮಾಲಿಂಗ ವಿದಾಯದಿಂದ ಶ್ರೀಲಂಕಾ ಸ್ಟಾರ್ ಆಟಗಾರನೊಬ್ಬನ ಸೇವೆಯನ್ನು ಕಳೆದುಕೊಳ್ಳಲಿದೆ, ಜತೆಗೆ “ವಿಕೆಟ್ ಟೇಕರ್’ ಬೌಲರ್ ಒಬ್ಬನನ್ನೂ. ದಾಳಿ ಬಳಿಕ ಮೊದಲ ಸರಣಿ
“ಈಸ್ಟರ್ ಸಂಡೇ’ಯಂದು ನಡೆದ ಭೀಕರ ಭಯೋತ್ಪಾದಕ ದಾಳಿ ಬಳಿಕ ಇದು ಶ್ರೀಲಂಕಾದಲ್ಲಿ ನಡೆಯಲಿರುವ ಮೊದಲ ಅಂತಾರಾಷ್ಟ್ರೀಯ ಕ್ರಿಕೆಟ್ ಸರಣಿ. ಬಿಗಿ ಭದ್ರತೆ ನಡುವೆ ಬಾಂಗ್ಲಾದೇಶ ತಂಡ ಇಲ್ಲಿಗೆ ಆಗಮಿಸಿದೆ.
Related Articles
Advertisement
ಲಂಕೆಯ 3ನೇ ಸಾಧಕ35ರ ಹರೆಯದ “ಸೆಪರಮಡು ಲಸಿತ ಮಾಲಿಂಗ ಸ್ವರ್ಣಜಿತ್’ ಪಾಲಿಗೆ ಇದು 226ನೇ ಏಕದಿನ ಅಂತಾರಾಷ್ಟ್ರೀಯ ಪಂದ್ಯ. ಒಟ್ಟು 335 ವಿಕೆಟ್ ಹಾರಿಸಿ ಲಂಕಾ ಬೌಲಿಂಗ್ ಸಾಧಕರ ಯಾದಿಯಲ್ಲಿ 3ನೇ ಸ್ಥಾನ ಅಲಂಕರಿಸಿದ್ದಾರೆ. ಮುತ್ತಯ್ಯ ಮುರಳೀಧರನ್ (523), ಚಮಿಂಡ ವಾಸ್ (399) ಹೊರತುಪಡಿಸಿದರೆ ಮಾಲಿಂಗ ಅವರೇ ಲಂಕೆಯ ಶ್ರೇಷ್ಠ ಬೌಲರ್. ಇನ್ನು 3 ವಿಕೆಟ್ ಉರುಳಿಸಿದರೆ ಅನಿಲ್ ಕುಂಬ್ಳೆ (337) ಅವರನ್ನು ಹಿಂದಿಕ್ಕಿ ವಿಶ್ವ ಮಟ್ಟದಲ್ಲಿ 9ನೇ ಸ್ಥಾನ ಅಲಂಕರಿಸಲಿದ್ದಾರೆ. 2004-2010ರ ಅವಧಿಯಲ್ಲಿ 30 ಟೆಸ್ಟ್ ಗಳನ್ನಾಡಿದ ಲಸಿತ ಮಾಲಿಂಗ, 5 ದಿನಗಳ ಪಂದ್ಯದಲ್ಲಿ ವಿಶೇಷ ಸಾಧನೆ ಮಾಡದಿದ್ದರೂ ವಿಕೆಟ್ ಶತಕ ದಾಖಲಿಸುವಲ್ಲಿ ಯಶಸ್ವಿಯಾಗಿದ್ದಾರೆ (101).