Advertisement

ಆರೋಗ್ಯ ರಕ್ಷಣೆಯ ಬೆನ್ನೆಲುಬು ದಾದಿಯರ ಸೇವೆ

08:53 PM May 11, 2019 | mahesh |

ಎಲ್ಲರನ್ನೂ ಸಮಾನವಾಗಿ ಕಂಡು ಯಾರಿಗೂ ಭೇದ ಭಾವ ಮಾಡದೇ ಇರುವ ದಾದಿಯರನ್ನು ವರ್ಷ ಪೂರ್ತಿ ಗೌರವದಿಂದ ಕಾಣುವ ಉದ್ದೇಶದಿಂದ ಈ ದಿನವನ್ನು ಆಚರಿಸಲಾಗುತ್ತಿದೆ.

Advertisement

ದಾದಿಯರ ಕೆಲಸ ವಿಶ್ವದಲ್ಲೇ ಅತೀ ದೊಡ್ಡ ಆರೋಗ್ಯ ಆರೈಕೆಯಾಗಿದೆ. ಇದೊಂದು ವೃತ್ತಿಯಾಗಿದ್ದರೂ ತಾಯ ಬಳಿಕದ ಸ್ಥಾನದಲ್ಲಿ ನಿಂತು ಜೀವನೋತ್ಸವ ತುಂಬುವ ಮಹಾ ಜವಾಬ್ದಾರಿ ಇವರ ಮೇಲಿದೆ. ಇವರ ಸೇವೆಗೆ ಎಂದೂ ಬೆಲೆ ಕಟ್ಟಲಾಗದು. ದಾದಿಯರ ಸೇವೆಯನ್ನು ಕೃತಜ್ಞತಾ ಪೂರ್ವಕವಾಗಿ ಜ್ಞಾಪಿಸಿಕೊಳ್ಳಲು ಈ ದಿನವನ್ನು ವಿಶ್ವಾದ್ಯಂತ ದಾದಿಯರ ದಿನವನ್ನಾಗಿ ಆಚರಿಸಲಾಗುತ್ತಿದೆ.

ಇತಿಹಾಸ
ಹಲವು ವರ್ಷಗಳಿಂದ ಅಂತಾರಾಷ್ಟ್ರೀಯ ದಾದಿ ಯರ ದಿನ ವನ್ನು ಮೇ 12ರಂದು ಇಂಟರ್‌ನ್ಯಾಶನಲ್‌ ಕೌನ್ಸೆಲ್‌ ಆಫ್ ನರ್ಸೆಸ್‌ ಆಚರಿಸುತ್ತದೆ. ಆಧುನಿಕ ನರ್ಸಿಂಗ್‌ನ ಸ್ಥಾಪಕರಾದ ಫ್ಲಾರೆನ್ಸ್‌ ನೈಟಿಂಗೇಲ್‌ ಅವರ ಜನ್ಮ ದಿನದ ಅಂಗವಾಗಿ ಈ ದಿನವನ್ನು ಆಚರಿಸಲಾಗುತ್ತದೆ. 1974ರಲ್ಲಿ ಈ ದಿನಕ್ಕೆ ಅಧಿಕೃತ ಮಾನ್ಯತೆ ಸಿಕ್ಕಿದ ಬಳಿಕ ಪ್ರಪಂಚಾದ್ಯಂತ ಆಚರಿಸಲಾಗುತ್ತದೆ. ದಾದಿಯರ ಕೆಲಸ ಮಾನವೀಯತೆ ಮೆರೆಯುವ ಕೆಲಸವಾಗಿದ್ದು, ಪ್ರತಿಯೊಬ್ಬರು ಅವರ ವೃತ್ತಿಗೆ ತಲೆ ಬಾಗಲೇಬೇಕು. ಅವರ ಆ ಆರೈಕೆ ಎಷ್ಟೋ ಜನರನ್ನು ಗುಣಮುಖರನ್ನಾಗಿಸಿದೆ. ಇವರು ಆರೋಗ್ಯ ರಕ್ಷಣೆಯ ಬೆನ್ನೆಲುಬಾಗಿದ್ದಾರೆ. ಇದಕ್ಕಾಗಿಯೇ ಇವರಿಗೆ ಗೌರವಸಲ್ಲಿಸುವುದಕ್ಕಾಗಿ ಈ ದಿನವನ್ನು ಆಚರಿಸಲಾಗುತ್ತದೆ.

ಅಂತಾರಾಷ್ಟ್ರೀಯ ಕೌನ್ಸೆಲ್‌ ಆಫ್ ನರ್ಸೆಸ್‌
ಮುಖ್ಯವಾಗಿ ರಾಷ್ಟ್ರೀಯ ದಾದಿಯರ ಸಂಘಗಳು (ಎನ್‌ಎನ್‌ಎಗಳು) ದಾದಿಯರಿಗೆ ಉತ್ತಮ ಮಾಹಿತಿಗಳನ್ನು ನೀಡುವುದಲ್ಲದೆ, ಸಲಹೆ ಸೂಚನೆಗಳನ್ನು ನೀಡಿ ಪ್ರೋತ್ಸಾಹ ಮತ್ತು ಬೆಂಬಲವನ್ನು ನೀಡುತ್ತದೆ. ಇವರಿಗೆ ಆಳವಾದ ಪ್ರಾಯೋಗಿಕ ಜ್ಞಾನ ನೀಡುವಲ್ಲಿಯೂ ಇದು ಕೆಲಸ ಮಾಡುತ್ತದೆ. ಇವು ದಾದಿಯರ ವಿವಿಧ ರೀತಿಯ ಸೌಲಭ್ಯಗಳನ್ನು ಒದಗಿಸಲು ಸರಕಾರ ಮತ್ತು ಸರಕಾರೇತರ ಸಂಸ್ಥೆಗಳೊಂದಿಗೆ ಸೇರಿಕೊಂಡು ಆರೋಗ್ಯ, ಆರೈಕೆ ವ್ಯವಸ್ಥೆಯನ್ನು ಬಲಪಡಿಸುತ್ತದೆ.

ಅಂತಾರಾಷ್ಟ್ರೀಯ ಕೌನ್ಸೆಲ್‌ ಆಫ್ ನರ್ಸೆಸ್‌ ಇವುಗಳು ಈ ದಿನದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದಲ್ಲದೆ. ನರ್ಸಿಂಗ್‌ ಕೋರ್ಸ್‌ಗಳ ಪ್ರಾಮುಖ್ಯದ ಬಗ್ಗೆ ಜನರಿಗೆ ಪ್ರಚುರಪಡಿಸಲು ಸಹಾಯ ಮಾಡುತ್ತದೆ.

Advertisement

ಐಎನ್‌ಸಿ ಅಂಕಿ ಅಂಶಗಳ ಪ್ರಕಾರ 2017ರಲ್ಲಿ 1.9 ಮಿಲಿಯನ್‌ ನೋಂದಾಯಿತ ದಾದಿಯರು ಮತ್ತು 786,796 ಮಿಲಿಯನ್‌ ಸಹಾಯಕ ನರ್ಸ್‌ಗಳು ಭಾರತದಲ್ಲಿದ್ದಾರೆ, ಆದರೆ ಪ್ರತಿ ವರ್ಷ ಸಾವಿರಕ್ಕೂ ಮಿಕ್ಕಿ ನರ್ಸ್‌ಗಳ ಸಂಖ್ಯೆ ಕಡಿಮೆಯಾಗಿದ್ದು, ಇದಕ್ಕೆ ಕೆಲಸದ ಒತ್ತಡ ಮತ್ತು ಅರ್ಧದಲ್ಲಿಯೇ ಕೆಲಸ ಬಿಡುವುದು, ಕಡಿಮೆ ನೇಮಕಾತಿ ಇವೆಲ್ಲವೂ ಕಡಿಮೆಯಾಗಿದೆ ಎಂದು ತಿಳಿದು ಬಂದಿದೆ.

ವಿವಿಧೆಡೆ ಆಚರಣೆ
ಈ ದಿನವನ್ನು ಲಂಡನ್‌ನಲ್ಲಿ ಆಚರಿಸುತ್ತಿದ್ದು, ಒಂದು ಮೇಣದ ಬತ್ತಿಯನ್ನು ಹಚ್ಚಿ ಒಬ್ಬ ದಾದಿಯಿಂದ ಇನ್ನೊಬ್ಬರು ದಾದಿಗೆ ಆ ಮೇಣದ ಬತ್ತಿಯನ್ನು ದಾಟಿಸುತ್ತಾ ಹೋಗುವುದು. ಇದರ ಅರ್ಥ-ಜ್ಞಾನವನ್ನು ಇನ್ನೊಬ್ಬರಿಗೆ ಹಂಚುವುದು ಎಂದು. ಅದಲ್ಲದೆ ಸೈಂಟ್‌ ಮಾರ್ಗರೇಟ್‌ ಚರ್ಚಿನಲ್ಲಿರುವ ಫ್ಲಾರೆನ್ಸ್‌ ನೈಟಿಂಗೇಲ್ಸ್‌ ಸಮಾಧಿ ಸ್ಥಳದಲ್ಲಿ ಒಂದು ದೊಡ್ಡ ಸಮಾರಂಭವನ್ನು ಆಚರಿಸಲಾಗುತ್ತದೆ. ಯುಎಸ್‌ ಮತ್ತು ಕೆನಡಾದಲ್ಲಿ ಇಡೀ ವಾರ ಈ ದಿನವನ್ನು ನರ್ಸಿಂಗ್‌ ವೀಕ್‌ ಎಂದು ಆಚರಿಸಲಾಗುತ್ತದೆ. ಆಸ್ಟ್ರೇಲಿಯದಲ್ಲಿಯೂ ಶುಶ್ರೂಷಕ ದಿನದ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಅದಲ್ಲದೆ ಇವರಿಗಾಗಿಯೇ ವಿವಿಧ ಶೈಕ್ಷಣಿಕ ಚಟುವಟಿಕೆಗಳು, ಚರ್ಚೆಗಳು, ಸ್ಪರ್ಧಾ ಕೂಟಗಳನ್ನು ನಡೆಸಲಾಗುತ್ತದೆ. ಜತೆಗೆ ಹೂವು, ಉಡುಗೊರೆ ನೀಡುವುದು, ಔತಣ ಕೂಟಗಳನ್ನು ಸಂಘಟಿಸಲಾಗುತ್ತದೆ.

ಥೀಮ್‌
ಈ ವರ್ಷದ ರಾಷ್ಟ್ರೀಯ ದಾದಿಯರ ದಿನದ ಥೀಮ್‌, ನರ್ಸಿಂಗ್‌: ಮನಸ್ಸು ಮತ್ತು ದೇಹಗಳ ಸಮತೋಲನವಾಗಿದೆ. ಇದರ ಪ್ರಕಾರ ಈ ವರ್ಷ ವಿವಿಧ ಭಾಗಗಳಲ್ಲಿ ಬೇರೆ ಬೇರೆ ರೀತಿಯ ಕಾರ್ಯಕ್ರಮಗಳು ನಡೆಯುತ್ತಿದ್ದು, ದಾದಿಯರಿಗೆ ವಿಶೇಷ ರೀತಿಯ ಗಿಫ್ಟ್, ಕಾರ್ಡ್‌ಗಳನ್ನು ನೀಡಿ ಗೌರವಿಸಲಾಗುವುದು.

-  ಪ್ರೀತಿ ಭಟ್‌ ಗುಣವಂತೆ

Advertisement

Udayavani is now on Telegram. Click here to join our channel and stay updated with the latest news.

Next