Advertisement

ಇಂದು ಚುಸಾಪ ಮೊದಲ ಸಮ್ಮೇಳನ

10:15 AM May 04, 2019 | Suhan S |

ಬಂಗಾರಪೇಟೆ: ಪಟ್ಟಣದ ಎಸ್‌ಎನ್‌ಆರ್‌ ಕಲ್ಯಾಣ ಮಂಟಪದಲ್ಲಿ ಶನಿವಾರ ತಾಲೂಕು ಚುಟುಕು ಸಾಹಿತ್ಯ ಪರಿಷತ್‌ನಿಂದ ತಾಲೂಕು ಮಟ್ಟದ ಮೊದಲನೇ ಸಮ್ಮೇಳನ ಆಯೋಜಿಸಲು ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಿ, ಹಿರಿಯ ಸಾಹಿತಿ ಮೈ.ಸತೀಶ ಕುಮಾರ್‌ ಅವರನ್ನು ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.

Advertisement

ತಾಲೂಕು ಚುಟುಕು ಸಾಹಿತ್ಯ ಪರಿಷತ್‌ನ ಪದಾಧಿಕಾರಿಗಳು ಸಮ್ಮೇಳನಾಧ್ಯಕ್ಷ ಮೈ.ಸತೀಶ್‌ಕುಮಾರ ಅವರ ಸ್ವಗೃಹಕ್ಕೆ ಆಗಮಿಸಿ ದಂಪತಿಯನ್ನು ಸನ್ಮಾನಿಸಿ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಯಿತು. 62 ವಯಸ್ಸಿನ ಮೈ.ಸತೀಶ್‌ಕುಮಾರ್‌, ಬೆಮಲ್ ಕಾರ್ಖಾನೆ ನಿವೃತ್ತ ನೌಕರರಾಗಿದ್ದು, ಪ್ರಸ್ತುತ ಸಾಹಿತ್ಯದ ಬಗ್ಗೆ ಹೆಚ್ಚಿನ ಆಸಕ್ತಿವಹಿಸಿ ಕೃತಿಗಳನ್ನು ರಚನೆ ಮಾಡುತ್ತಿದ್ದಾರೆ. ಮೈ.ಸತೀಶ್‌ಕುಮಾರ್‌ ಬಿಇ ಪದವಿ ಪಡೆದಿದ್ದು, ಕವನ ಸಂಕಲನಗಳಾಗಿರುವ ಅವಲೋಕನ, ಪಯಣ ಹಾಗೂ ಬಾಲಗಂಗಾಧರ ತಿಲಕರು – ಜೀವನ ಚರಿತ್ರೆಯನ್ನು ಪ್ರಕಟಿತಗೊಂಡಿವೆ. ಕೋಲಾರ ಪತ್ರಿಕೆ, ಕೋಲಾರ ಸೊಬಗು, ಹೊಸ ದಿಗಂತ, ತುಷಾರ, ಕ್ರಮ ಪತ್ರಿಕೆಗಳಲ್ಲಿ ಕಥೆ, ಕವನ, ಹನಿಗವನಗಳು ಪ್ರಕಟಿತಗೊಂಡಿವೆ. ಬೆಮೆಲ್ ಕನ್ನಡ ಸಂಘಗಳ ವಿಶೇಷ ಸಂಚಿಕೆ ಚಂದನ ಮತ್ತು ವಸುಂಧರಾದಲ್ಲಿ ಕವನ, ಹನಿಗವನಗಳು ಪ್ರಕಟಿತಗೊಂಡಿವೆ.

ತಾಲೂಕು ಮತ್ತು ಜಿಲ್ಲಾ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗಳಲ್ಲಿ ಹಾಗೂ ರಾಜ್ಯ ಮಟ್ಟದ ಕವಿಗೋಷ್ಠಿಗಳಲ್ಲಿ ಕವನ ವಾಚನ ಮಾಡಿದಕ್ಕಾಗಿ ಪ್ರಶಸ್ತಿ ಪತ್ರ ಲಭಿಸಿವೆ. ಸಾಹಿತ್ಯ ಸೇವೆಯನ್ನು ಗುರುತಿಸಿ ಸನ್ಮಾನ ಮಾಡಲಾಗಿದೆ. ಕನ್ನಡ ಸಂಘ, ಚುಸಾಪ, ಕಸಾಪ, ಅನಿಕೇತನ ಕನ್ನಡ ಬಳಗ ಹಾಗೂ ಸರ್ವೋದಯ ಮಿತ್ರ ಬಳಗ ಸೇರಿ ಹಲವು ಸಂಘ-ಸಂಸ್ಥೆಗಳಲ್ಲಿ ವಿವಿಧ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ.

ಸಮ್ಮೇಳನಾಧ್ಯಕ್ಷರಾಗಿ ಕಾರ್ಯಕ್ರಮಕ್ಕೆ ಆಹ್ವಾನಿಸುವ ಸಮಯದಲ್ಲಿ ತಾಲೂಕು ಚುಸಾಪ ಅಧ್ಯಕ್ಷ ಎಲ್.ರಾಮಕೃಷ್ಣಪ್ಪ, ಕಾರ್ಯದರ್ಶಿ ಆರ್‌.ಡಿ.ಜನಾರ್ದನ್‌, ಕಾ.ಹು.ಚಾನ್‌ಪಾಷ, ವೆಂಕೋಬರಾವ್‌ ಪಡತಾರೆ, ಪ್ರಸನ್ನ ಕುಮಾರ್‌, ಪ್ರಸಾದ್‌, ಕೃಷ್ಣಪ್ಪ, ಮಾಲಾ ಶ್ರೀವತ್ಸ, ವಿ.ಎಲ್.ಪ್ರಹ್ಲಾದ ರಾವ್‌, ಪದ್ಮಾವತಿ, ಶಿವಪ್ರಸಾದ್‌, ಪ್ರತಿಮಾ, ಸಹನಾ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next