Advertisement

ಇಂದು ಪ್ರಶಸ್ತಿ ಪುರಸ್ಕೃತರ ಹೆಸರು ಘೋಷಣೆ

07:21 AM Jul 08, 2019 | Team Udayavani |

ಬೆಂಗಳೂರು: ಕರ್ನಾಟಕ ಯಕ್ಷಗಾನ ಅಕಾಡೆಮಿ, ಇಂದು (ಜುಲೈ 8) 2018ನೇ ಸಾಲಿನ ಅಕಾಡೆಮಿ ಪ್ರಶಸ್ತಿ ಪುರಸ್ಕೃತರ ಹೆಸರುಗಳನ್ನು ಘೋಷಣೆ ಮಾಡಲಿದೆ. ಯಕ್ಷಗಾನ ಕ್ಷೇತ್ರದಲ್ಲಿನ ಜೀವಮಾನ ಸಾಧನೆಗೆ ನೀಡಲಾಗುವ “ಪಾರ್ತಿಸುಬ್ಬ’ ಪ್ರಶಸ್ತಿ,” ಗೌರವ ಪ್ರಶಸ್ತಿ’ ,”ಯಕ್ಷಸಿರಿ ವಾರ್ಷಿಕ’ ಮತ್ತು “ಪುಸ್ತಕ ಬಹುಮಾನ’ ಪ್ರಶಸ್ತಿಗಳನ್ನು ಅಕಾಡೆಮಿ ಅಧ್ಯಕ್ಷ ಪ್ರೊ.ಎಂ.ಎ.ಹೆಗಡೆ ಘೋಷಣೆ ಮಾಡಲಿದ್ದಾರೆ.

Advertisement

ಪಾರ್ತಿಸುಬ್ಬ ಪ್ರಶಸ್ತಿ 1ಲಕ್ಷ ರೂ.ನಗದು ಮತ್ತು ಫ‌ಲಕ ಒಳಗೊಂಡಿದೆ. ಹಾಗೆಯೇ ಗೌರವ ಪ್ರಶಸ್ತಿ 50 ಸಾವಿರ ರೂ.ನಗದು ಮತ್ತು ಫ‌ಲಕ, ಯಕ್ಷಸಿರಿ ವಾರ್ಷಿಕ ಪ್ರಶಸ್ತಿ ಮತ್ತು ಪುಸ್ತಕ ಬಹುಮಾನ ಪ್ರಶಸ್ತಿ ತಲಾ 25 ಸಾವಿರ ರೂ.ನಗದು ಮತ್ತು ಫ‌ಲಕವನ್ನು ಒಳಗೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next