ಉಡುಪಿ: ಶ್ರೀ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ಷಷ್ಟ್ಯಬ್ದ ಅಭಿವಂದನ ಸಮಾರಂಭ ಡಿ.16ರ ಶನಿವಾರ ಉಡುಪಿಯ ಶ್ರೀ ಕೃಷ್ಣ ಮಠ ಮತ್ತು ಶ್ರೀ ಪೇಜಾವರ ಮಠದ ಮುಂಭಾಗ ನಡೆಯಲಿದೆ.
ಉಡುಪಿ ಪರ್ಯಾಯ ಶ್ರೀ ಕೃಷ್ಣಾಪುರ ಮಠದ ಶ್ರೀಪಾದರಾದ ಶ್ರೀ ವಿದ್ಯಾಸಾಗರತೀರ್ಥ ಅವರು ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು ಅದರೊಂದಿಗೆ ಶುಭಾಶೀರ್ವಚನವನ್ನು ನೀಡಲಿದ್ದಾರೆ.
ಶ್ರೀ ಪಲಿಮಾರು ಮಠದ ಶ್ರೀಪಾದರಾದ ಶ್ರೀ ವಿದ್ಯಾಧೀಶತೀರ್ಥ, ಶ್ರೀ ಪೇಜಾವರ ಅಧೋಕ್ಷಜ ಮಠದ ಶ್ರೀಪಾದರಾದ ಶ್ರೀ ವಿಶ್ವಪ್ರಸನ್ನ ತೀರ್ಥ, ಶ್ರೀ ಕಾಣಿಯೂರು ಮಠದ ಶ್ರೀಪಾದರಾದ ಶ್ರೀ ವಿದ್ಯಾವಲ್ಲಭ ತೀರ್ಥ, ಶ್ರೀ ಅದಮಾರು ಮಠ ಕಿರಿಯ ಪಟ್ಟ ಶ್ರೀಪಾದರಾದ ಶ್ರೀ ಈಶಪ್ರಿಯ ತೀರ್ಥ, ಶ್ರೀ ಪಲಿಮಾರು ಮಠ ಕಿರಿಯಪಟ್ಟ ಶ್ರೀಪಾದರಾದ ಶ್ರೀ ವಿದ್ಯಾರಾಜೇಶ್ವರ ತೀರ್ಥ, ಶ್ರೀ ಶೀರೂರು ಮಠ ಶ್ರೀಪಾದರಾದ ಶ್ರೀ ವೇದವರ್ಧನ ತೀರ್ಥರು ದಿವ್ಯ ಸಾನ್ನಿಧ್ಯ ವಹಿಸಲಿದ್ದು, ಶುಭ ಸಂದೇಶ ನೀಡುವರು.
ಮುಖ್ಯ ಅತಿಥಿಗಳಾಗಿ ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಭಾರತ ಸರ್ಕಾರದ ಸಂಸದೀಯ ವ್ಯವಹಾರ ಮತ್ತು ಗಣಿ ಇಲಾಖೆ ಮಂತ್ರಿ ಪ್ರಹ್ಲಾದ್ ಜೋಶಿ, ಗಳು, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ, ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯೂ ಆದ ಲಕ್ಷ್ಮೀ ಹೆಬ್ಟಾಳ್ಕರ್, ಭಾರತ ಸರ್ಕಾರದ ಪ್ರವಾಸೋದ್ಯಮ,ಬಂದರು ಮತ್ತು ಒಳನಾಡು ಸಾರಿಗೆ ರಾಜ್ಯ ಮಂತ್ರಿ ಶ್ರೀಪಾದ್ ಯೆಸ್ಸೋ ನಾಯ್ಕ, ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಮಂತ್ರಿ ಶೋಭಾ ಕರಂದ್ಲಾಜೆ, ವಿಧಾನ ಪರಿಷತ್ ಸದಸ್ಯ ಭೋಜೇಗೌಡ, ಬೆಂಗಳೂರು ಉದ್ಯಮಿ ಮತ್ತು ಸಾಮಾಜಿಕ ಧುರೀಣ ಕೆ. ಬಂಜಾರ ಪ್ರಕಾಶ್ ಶೆಟ್ಟಿ, ಮಂಗಳೂರು ಎಸ್‌ಸಿಡಿಸಿಸಿ ಬ್ಯಾಂಕ್ ಲಿ. ನ ಅಧ್ಯಕ್ಷ ಡಾ|| ಎಮ್ ಎನ್ ರಾಜೇಂದ್ರ ಕುಮಾರ್, ಉಡುಪಿ ಡಾ ಜಿ ಶಂಕರ್ ಫ್ಯಾಮಿಲಿ ಟ್ರಸ್ಟ್ ರಿ. ಇದರ ಮುಖ್ಯಸ್ಥ ಡಾ|| ಜಿ ಶಂಕರ್, ಕೋಟ ಗೀತಾನಂದ ಫೌಂಡೇಶನ್ ನ ಮುಖ್ಯಸ್ಥ ಆನಂದ ಸಿ. ಕುಂದರ್ ಭಾಗವಹಿಸಲಿದ್ದಾರೆ.
ಹೆಬ್ರಿ ಶ್ರೀ ವಿಶ್ವೇಶತೀರ್ಥ ಟ್ರಸ್ಟ್ ಗೋಶಾಲೆಯ ವಿಶ್ವಸ್ಥ ಗುರುದಾಸ್ ಶೆಣೈ, ಉಡುಪಿ ವಿದ್ಯೋದಯ ಟ್ರಸ್ಟ್ ರಿ. ಇದರ ಅಧ್ಯಕ್ಷ ಎನ್. ನಾಗರಾಜ ಬಲ್ಲಾಳ್, ಎಸ್.ಎಮ್.ಎಸ್.ಪಿ. ಮಹಾಸಭಾದ ಕಾರ್ಯದರ್ಶಿ ವಿದ್ವಾನ್ ಗೋಪಾಲ ಜೋಯಿಸ್ ಇರ್ವತ್ತೂರು ಉಪಸ್ಥಿತರಿರುವರು.
ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್, ವಿಧಾನ ಪರಿಷತ್ ಸದಸ್ಯ ಪಿ. ಮಂಜುನಾಥ ಭಂಡಾರಿ, ಕುಂದಾಪುರ ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ, ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಭಾಗವಹಿಸಲಿದ್ದಾರೆ.
ದಿನವಿಡೀ ನಡೆಯುವ ಕಾರ್ಯಕ್ರಮಗಳ ವಿವರ:
ಶ್ರೀ ಕೃಷ್ಣ ಮಠದಲ್ಲಿ ಬೆಳಿಗ್ಗೆ ಲಕ್ಷ ಕೃಷ್ಣಮಂತ್ರ ಜಪ ಸಹಿತ ಯಾಗ ಮತ್ತು ಗೋ ಸೂಕ್ತ ಯಾಗ ನಡೆಯಲಿದೆ.
ಮಧ್ಯಾಹ್ನ 12.30 ರಿಂದ ರಾಜಾಂಗಣದಲ್ಲಿ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದ್ದು, ಬಳಿಕ ರಾಮರಾಜ್ಯ ನಿರ್ಮಾಣದ ಶ್ರೀಗಳ ಕನಸಿನ ವಿವಿಧ ಸಮಾಜ ಸೇವಾ ಕಾರ್ಯಗಳು ನೆರವೇರಲಿದೆ.
ಸಂಜೆ 3 ರಿಂದ ಜೋಡುಕಟ್ಟೆಯಿಂದ ಆಕರ್ಷಕ ಶೋಭಾಯಾತ್ರೆ ನಡೆಯಲಿದೆ. (ಶೋಭಾಯಾತ್ರೆಯಲ್ಲಿ ಭಾಗವಹಿಸುವವರು ಕೇಸರಿ ಶಾಲನ್ನು ಧರಿಸಿ ಬರಬೇಕು)
ಸಂಜೆ 5 ರಿಂದ ರಥಬೀದಿಯ ಶ್ರೀ ಪೇಜಾವರ ಮಠದ ಮುಂಭಾಗದಲ್ಲಿ ಬೃಹತ್ ಅಭಿವಂದನ ಸಮಾರಂಭ ಜರಗಲಿದೆ.
ಸಂಜೆ 7. 30ರಿಂದ ಪ್ರಸಿದ್ಧ ಕಲಾದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಅಂತಾರಾಷ್ಟ್ರೀಯ ಖ್ಯಾತಿಯ ಗಾಯಕ, ಪುಣೆಯ ಮಹೇಶ್ ಕಾಳೆ ಮತ್ತು ಬಳಗ ಇವರಿಂದ ಹಿಂದುಸ್ಥಾನಿ ಸಂಗೀತ ಮತ್ತು ಭಜನ್ಸ್ ಕಾರ್ಯಕ್ರಮ ನಡೆಯಲಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.