Advertisement

ಇಂದು ರಾಷ್ಟ್ರೀಯ ಪ್ರವಾಸೋದ್ಯಮ ದಿನ: ದೇಶದ ಪ್ರವಾಸೋದ್ಯಮಕ್ಕೆ ಸಿಗಲಿ ನವಸ್ಪರ್ಶ

01:07 AM Jan 25, 2024 | Team Udayavani |

ಭಾರತದಲ್ಲಿ ಐತಿಹಾಸಿಕ, ಪಾರಂಪರಿಕ,ಧಾರ್ಮಿಕ, ಆಧ್ಯಾತ್ಮಿಕ ಹಾಗೂ ನಿಸರ್ಗ ರಮಣೀಯ ತಾಣಗಳಿವೆ. ಇನ್ನು ವಿಹಾರ, ವ್ಯಾಪಾರ, ಕ್ರೀಡೆ, ಗ್ರಾಮೀಣ, ಶಿಕ್ಷಣ ಮತ್ತು ವೈದ್ಯಕೀಯ ಹೀಗೆ ಪ್ರತಿಯೊಂದು ವಲಯದಲ್ಲಿಯೂ ದೇಶದತ್ತ ಪ್ರವಾಸಿಗರನ್ನು ಸೆಳೆಯಲು ಸಾಧ್ಯವಿದೆ. ಇಷ್ಟೆಲ್ಲ ಅವಕಾಶಗಳಿದ್ದರೂ ಪ್ರವಾಸೋದ್ಯಮದಲ್ಲಿ ಮುಂಚೂಣಿಯಲ್ಲಿರುವ ವಿಶ್ವದ ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಪ್ರವಾಸೋದ್ಯಮ ಒಂದಿಷ್ಟು ಕುಂಟುತ್ತಿದೆ. ಸ್ಥಳೀಯ ಮತ್ತು ರಾಷ್ಟ್ರೀಯ ಆರ್ಥಿಕತೆಗೆ ಮಹತ್ತರ ಕೊಡುಗೆ ಯನ್ನು ನೀಡುವ ಪ್ರವಾಸೋದ್ಯಮಕ್ಕೆ ಮತ್ತಷ್ಟು ಉತ್ತೇಜನ ಲಭಿಸಬೇಕಿದೆ. ದೇಶ ಮಾತ್ರವಲ್ಲದೆ ವಿಶ್ವದ ವಿವಿಧೆಡೆಗಳಿಂದ ನಮ್ಮಲ್ಲಿನ ಪ್ರವಾಸಿ ತಾಣಗಳಿಗೆ ಪ್ರವಾಸಿಗರನ್ನು ಸೆಳೆಯುವ ಮತ್ತು ಈ ತಾಣಗಳ ನೈಜತೆಗೆ ಧಕ್ಕೆಯಾಗದಂತೆ ಪ್ರವಾಸಿಗರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತೀ ವರ್ಷ ಜ. 25ರಂದು ರಾಷ್ಟ್ರೀಯ ಪ್ರವಾಸೋದ್ಯಮ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.

Advertisement

ಪ್ರವಾಸ ಎನ್ನುವುದೇ ರೋಚಕ
ಪ್ರವಾಸ ಎನ್ನುವುದು ವಿಭಿನ್ನ ಸಂಸ್ಕೃತಿಗಳ ನಡುವೆ ತಿಳಿವಳಿಕೆ ಮೂಡಿಸುವುದರ ಜತೆ ಯಲ್ಲಿ ಗೌರವವನ್ನು ಬೆಳೆಸುತ್ತದೆ. ಅಷ್ಟು ಮಾತ್ರವಲ್ಲದೆ ಸ್ನೇಹ, ಸಹಕಾರದ ಸೇತು ವಾಗಿ ಇದು ಕಾರ್ಯನಿರ್ವಹಿಸುತ್ತದೆ. ಇನ್ನು ವೈಯಕ್ತಿಕವಾಗಿ ನಮ್ಮ ಮನಸ್ಸನ್ನು ತೆರೆ ಯುವಂತೆ ಮಾಡಿ ನಮ್ಮ ಊಹೆ, ಕಲ್ಪನೆಗೂ ಮೀರಿದ ರೋಚಕ ಅನುಭವಗಳನ್ನು ನಮಗೆ ಒದಗಿಸಿಕೊಡುತ್ತದೆ. ಈ ಅನುಭವ ಗಳು ನಮ್ಮ ಜೀವನ ಪರ್ಯಂತ ನೆನಪಿನಲ್ಲಿ ಉಳಿಯುತ್ತವೆ. ಹೀಗಾಗಿ ಪ್ರವಾಸವು ವ್ಯಕ್ತಿಗಳು-ಸಂಸ್ಕೃತಿ ಮತ್ತು ಆರ್ಥಿಕತೆ ನಡುವೆ ಕೊಂಡಿಯಾಗಿ, ದೇಶ-ವಿದೇಶಗಳ ಜನರನ್ನು ಬೆಸೆಯುವಂತೆ ಮಾಡುತ್ತದೆ.

ದಿನದ ಇತಿಹಾಸ
ಭಾರತ ಸರಕಾರವು 1948ರಲ್ಲಿ ಮೊದಲ ಬಾರಿಗೆ ರಾಷ್ಟ್ರೀಯ ಪ್ರವಾಸೋದ್ಯಮ ದಿನ ವನ್ನು ಆಚರಿಸಿದ ಬಗೆಗೆ ಒಂದಿಷ್ಟು ಮಾಹಿತಿಗಳು ಲಭಿಸುತ್ತವೆ. ದೇಶದಲ್ಲಿರುವ ಜನಪ್ರಿಯ ಪ್ರವಾಸಿ ತಾಣಗಳ ಕುರಿತಂತೆ ಮಾಹಿತಿ, ಪ್ರಚಾರ ನೀಡುವ ಮೂಲಕ ಅತ್ತ ಪ್ರವಾಸಿಗರನ್ನು ಸೆಳೆಯುವುದು ಮತ್ತು ದೇಶದ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವ ಉದ್ದೇಶದೊಂದಿಗೆ ರಾಷ್ಟ್ರೀಯ ಪ್ರವಾಸೋದ್ಯಮ ದಿನಕ್ಕೆ ಚಾಲನೆ ನೀಡಲಾಗಿತ್ತು.

ದಿನದ ಧ್ಯೇಯ
ಪ್ರವಾಸೋದ್ಯಮದ ವಿವಿಧ ಅಂಶಗಳ ಕುರಿತಂತೆ ಜಾಗೃತಿ ಮೂಡಿಸುವ ಹಿನ್ನೆಲೆ ಯಲ್ಲಿ ಪ್ರತೀವರ್ಷ ಒಂದೊಂದು ಧ್ಯೇಯ ವಾಕ್ಯದೊಡನೆ ರಾಷ್ಟ್ರೀಯ ಪ್ರವಾಸೋದ್ಯಮ ದಿನವನ್ನು ಆಚರಿಸಿಕೊಂಡು ಬರಲಾಗಿದೆ. ಈ ಧ್ಯೇಯವನ್ನು ಪ್ರಧಾನವಾಗಿರಿಸಿಕೊಂಡು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಜನರಲ್ಲಿ ಪ್ರವಾಸಿ ತಾಣಗಳನ್ನು ಪರಿಚಯಿಸಿಕೊಡುವ ಮತ್ತು ಅಲ್ಲಿನ ಮಹತ್ವಗಳ ಬಗೆಗೆ ಅರಿವು ಮೂಡಿಸುವ ಕಾರ್ಯವನ್ನು ಮಾಡುತ್ತ ಬರಲಾಗಿದೆ. ಈ ಮೂಲಕ ದೇಶದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಉತ್ತೇಜನ ನೀಡುತ್ತ ಬರಲಾಗಿದೆ. ಈ ಬಾರಿ “ಸುಸ್ಥಿರ ಪ್ರಯಾಣ, ಕಾಲಾತೀತ ನೆನಪು’ ಎಂಬ ಧ್ಯೇಯ ದೊಂದಿಗೆ ಪ್ರವಾಸೋದ್ಯಮ ದಿನವನ್ನು ಆಚರಿಸಲಾಗುತ್ತಿದೆ. ಪ್ರವಾಸಿಗರು ತಮ್ಮ ಪ್ರಯಾಣದ ವೇಳೆ ಜವಾಬ್ದಾರಿಯುತವಾಗಿ
ಮತ್ತು ಜಾಗರೂಕತೆ ವಹಿಸು ವುದು ಅತೀ ಮುಖ್ಯವಾ ಗಿದ್ದು ಈ ಅಂಶ ವನ್ನೇ ಮುಂದಿ ರಿಸಿಕೊಂಡು ಈ ಬಾರಿಯ ಧ್ಯೇಯ ವಾಕ್ಯವನ್ನು ಆಯ್ದು ಕೊಳ್ಳಲಾಗಿದೆ.

ದಿನದ ಮಹತ್ವ
ಪ್ರವಾಸೋದ್ಯ ಮವು ರಾಷ್ಟ್ರ ಮತ್ತು ಜಾಗತಿಕ ಮಟ್ಟದಲ್ಲಿ ಆರ್ಥಿಕ ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ವಹಿಸು ತ್ತಿರುವ ಪಾತ್ರದ ಕುರಿತಂತೆ ಜನರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಪ್ರವಾಸೋದ್ಯಮ ದಿನಾಚರಣೆ ಅತ್ಯಂತ ಮಹತ್ವದ್ದಾಗಿದೆ. ಪ್ರವಾಸೋದ್ಯಮವು ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ವಲಯದ ಮೇಲೆ ಬೀರುವ ಪ್ರಭಾವದ ಬಗೆಗೆ ಜನರಲ್ಲಿ ತಿಳಿವಳಿಕೆ ಮೂಡಿಸಲು ಈ ದಿನವನ್ನು ಬಳಸಿಕೊಳ್ಳಲಾಗುತ್ತದೆ. ಅಷ್ಟು ಮಾತ್ರವಲ್ಲದೆ ಪ್ರವಾಸಿ ತಾಣಗಳಲ್ಲಿನ ಸ್ಥಳೀಯ ಸಮುದಾಯಗಳಿಗೆ ಪ್ರಯೋಜನ ಕಾರಿಯಾದ ಸುಸ್ಥಿರ ಪ್ರವಾಸೋದ್ಯಮ ಅಭ್ಯಾಸಗಳ ಬಗೆಗೆ ಹೆಚ್ಚಿನ ಪ್ರಾಮುಖ್ಯವನ್ನು ನೀಡುವ ಮೂಲಕ ಪ್ರವಾಸಿಗರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡಲಾಗುತ್ತದೆ.

Advertisement

ಪ್ರವಾಸೋದ್ಯಮಕ್ಕೆ ಬೇಕಿದೆ ಟಾನಿಕ್‌
ದೇಶದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ವಿಪುಲ ಅವಕಾಶಗಳಿವೆ. ದೇಶೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಪ್ರವಾಸೋದ್ಯಮ ವಲಯ ಗುರುತಿಸಿಕೊಳ್ಳುವಂತಾಗಲು ಸರಕಾರದಿಂದ ಇನ್ನಷ್ಟು ಉತ್ತೇಜನ, ಪ್ರೋತ್ಸಾಹ ಲಭಿಸಬೇಕಿದೆ. ವಿಶ್ವದ ಅದ್ಯಾವುದೋ ಮೂಲೆಯಲ್ಲಿರೋ ದೇಶಗಳಿಗೆ ಹೋಗಿ ಅಲ್ಲಿ ಅದು ಇದೆ, ಇದು ಇದೆ ಎಂದು ಸಂಭ್ರಮಪಡುವ ದೇಶದ ಜನರ ಮನಃಸ್ಥಿತಿಯನ್ನು ಬದಲಾಯಿಸಲು ನಮ್ಮಲ್ಲಿರುವ ಪ್ರವಾಸಿ ತಾಣಗಳಿಗೆ ಒಂದಿಷ್ಟು ಕಾಯಕಲ್ಪದ ಆವಶ್ಯಕತೆ ಇದೆ. ಮೂಲಸೌಕರ್ಯದಿಂದ ಹಿಡಿದು ಇಂದಿನ ಅತ್ಯಾಧುನಿಕ ತಂತ್ರಜ್ಞಾನದ ಸೌಲಭ್ಯ, ವ್ಯವಸ್ಥೆಗಳನ್ನು ನಮ್ಮ ಪ್ರವಾಸಿ ತಾಣಗಳು ಹೊಂದಬೇಕಿದೆ. ಇವುಗಳ ಅನುಷ್ಠಾನಕ್ಕೆ ಅಪಾರ ಹೂಡಿಕೆಯ ಆವಶ್ಯಕತೆ ಇದೆಯಾದರೂ ಪ್ರವಾಸಿಗರಿಗೆ ಅತ್ಯಗತ್ಯವಾದ ಸೌಕರ್ಯ, ಸೌಲಭ್ಯಗಳನ್ನು ನಮ್ಮ ಪ್ರವಾಸಿ ತಾಣಗಳಲ್ಲಿ ಒದಗಿಸಿದ್ದೇ ಆದಲ್ಲಿ ಹೂಡಿಕೆ ಮಾಡಿದ ಮೊತ್ತವನ್ನು ಮರಳಿ ಪಡೆಯಲು ವರ್ಷಗಳೇನೂ ಬೇಕಾಗಲಾರದು. ಇದೇ ವೇಳೆ ಅಭಿವೃದ್ಧಿಯ ನೆಪದಲ್ಲಿ ಪ್ರವಾಸಿ ತಾಣಗಳ ಸಹಜ ಸೌಂದರ್ಯಕ್ಕೆ, ಸ್ಥಳೀಯ ಸಂಸ್ಕೃತಿ, ಆಚಾರ-ವಿಚಾರಗಳಿಗೆ ಧಕ್ಕೆಯಾಗದಂತೆ ಎಚ್ಚರಿಕೆ ವಹಿಸುವುದು ಬಲುಮುಖ್ಯ. ಇದೇ ವೇಳೆ ಪ್ರವಾಸಿಗರು ಕೂಡ ಇವೆಲ್ಲದರತ್ತ ಹೆಚ್ಚಿನ ಗಮನ ಹರಿಸಿ, ಪ್ರವಾಸಿ ತಾಣಗಳ ಪರಿಸರ ಹಾನಿಯಾಗದಂತೆ ಎಚ್ಚರ ವಹಿಸಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next