Advertisement
ರೈತರಿಗೆ ಪ್ರೋತ್ಸಾಹ ಕೊಡುವ ನಿಟ್ಟಿ ನಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ವಿವಿಧ ಯೋಜನೆಗಳನ್ನು ಹಾಕಿಕೊಂಡಿ ವೆಯಾದರೂ ರೈತರಿಗೆ ಇದರಿಂದ ಹೆಚ್ಚಿನ ಪ್ರಯೋಜನವೇನೂ ಆಗುತ್ತಿಲ್ಲ. ರೈತರ ಮಕ್ಕಳ ಉನ್ನತ ವಿದ್ಯಾಭ್ಯಾಸ ಹಾಗೂ ಆರೋಗ್ಯ ವಿಮೆ ಯಂತಹ ಯೋಜನೆ ಗಳಿಗೂ ಇನ್ನೂ ಪೂರ್ಣವಾಗಿ ಕೈಗೂ ಡಿಲ್ಲ. ಒಟ್ಟಿನಲ್ಲಿ ರೈತರ ಬಗ್ಗೆ ಕಾಳಜಿಯ ಕೊರತೆ ಎಲ್ಲೆಲ್ಲೂ ಕಾಣುವುದು ಎಲ್ಲರೂ ಒಪ್ಪಬೇಕಾದ ವಿಚಾರ.
Related Articles
Advertisement
ಇನ್ನಾದರೂ ಸರಕಾರಗಳು ಪಕ್ಷ ಭೇದ ಮರೆತು ಪ್ರಯತ್ನಿಸಿದರೆ ರೈತರಿಗೆ ಅವರಲ್ಲಿರುವ ನಂಬಿಕೆ ಉಳಿಸಲು ಸಾಧ್ಯ. ಕಾಡು ಪ್ರಾಣಿಗಳಿಂದ ಯಾವುದೇ ಬೆಳೆ ಬೆಳೆಯಲು ಸಾಧ್ಯವಾಗದಂತಹ ಪರಿಸ್ಥಿತಿ ಇದ್ದರೂ ರೈತ ಇದನೆಲ್ಲ ಸಹಿಸಿ ಕೊಂಡು ತನ್ನ ಜಾಣ್ಮೆಯಿಂದ ಕೃಷಿ ಮಾಡುತ್ತಿ ರುವುದು ಪ್ರಶಂಸನೀಯ. ಕೆಲವೊಂದು ಸಂದರ್ಭದಲ್ಲಿ ಪ್ರಕೃತಿ ವಿಕೋಪದಿಂದ ಬೆಳೆ ನಷ್ಟ ಹೊಂದು ವುದರ ಜತೆಗೆ ಮಾನಸಿಕ ನೆಮ್ಮದಿಯನ್ನು ಕಳೆದು ಕೊಂಡು ಬದುಕು ಸಾಗಿಸಬೇಕಾದ ಅನಿವಾರ್ಯ ಪರಿಸ್ಥಿತಿ ರೈತನದ್ದಾಗಿದೆ.
ರೈತರು ತಮ್ಮ ಉತ್ಪನ್ನಗಳಿಗೆ ಸಿಗುವ ಅನಿಶ್ಚಿತ ಬೆಲೆಗಳಿಂದ ಧೃತಿಗೆಡದೆ ಇದು ವರೆಗೂ ಕೃಷಿ ಮುಂದುವರಿಸುವುದು ಪ್ರಶಂಸನೀಯ. ಇದನ್ನು ಸರಕಾರಗಳು ಇನ್ನಾದರೂ ಎಚ್ಚೆತ್ತುಕೊಂಡು ದಿಟ್ಟ ಹೆಜ್ಜೆ ಇಡಬೇಕಾದುದು ಆವಶ್ಯಕ. ರೈತರು ಇಂದು ಎದುರಿಸುತ್ತಿರುವ ಪ್ರಕೃತಿ ವಿಕೋಪ, ಕೀಟ ರೋಗದ ಬಾಧೆ, ಬೆಲೆಯ ಏರಿಳಿತ ಮತ್ತು ವಿಮಾ ಮೊತ್ತ ಪಡೆಯುವಲ್ಲಿನ ಸವಾಲುಗಳು ಕೂಲಿ ಕಾರ್ಮಿಕರ ಸಮಸ್ಯೆ ಇವೆಲ್ಲವೂ ರೈತರ ನಿದ್ದೆ ಕೆಡಿಸಿದೆ. ಇವೆಲ್ಲದಕ್ಕೂ ಪರಿಹಾರ ದೊರಕದಿದ್ದಲ್ಲಿ ಮುಂದಿನ ದಿನ ಕೃಷಿ ಉಳಿಯುವುದು ಅನುಮಾನವೇ ಸರಿ. ತಮ್ಮೆಲ್ಲ ನೋವುಗಳನ್ನು ನುಂಗಿ ಕೊಂಡು ಕೇವಲ ಕೃಷಿ ಉಳಿವಿಗಾಗಿ ಇಟ್ಟಿರುವ ಹೆಜ್ಜೆಗಾಗಿ ಪ್ರತಿಯೊಂದು ರೈತರನ್ನು ಬೆನ್ನು ತಟ್ಟಬೇಕು. ಇದು ರೈತ ದಿನದ ಮೊದಲ ಆದ್ಯತೆಯಾಗಲಿ.ಆ ಮೂಲಕ ದೇಶದಲ್ಲಿ ಕೃಷಿಯ ಉಳಿವಿಗಾಗಿ ನಾವೆಲ್ಲರೂ ಪ್ರಯತ್ನಶೀಲರಾಗೋಣ. -ಕುದಿ ಶ್ರೀನಿವಾಸ ಭಟ್