Advertisement
ರಾಜ್ಯ ಸಂಸ್ಥೆಗಳ ಚುನಾವಣೆಗೆ ಅಧಿಕಾರಿಗಳನ್ನು ನೇಮಿಸುವುದಕ್ಕೆ ಆರಂಭದಲ್ಲಿ ನೀಡಲ್ಪಟ್ಟಿದ್ದ ಗಡುವು ಜು. ಒಂದು. ಆದರೆ ಅದನ್ನು ಜು. 25ಕ್ಕೆ ವಿಸ್ತರಿಸಲಾಗಿತ್ತು. ಈ ಬಗ್ಗೆ ಆಗಿರುವ ಬೆಳವಣಿಗೆಗಳನ್ನು ಗಮನಿಸ ಲಾಗುತ್ತದೆ. ಲೋಧಾ ಸಮಿತಿ ಶಿಫಾರ ಸನ್ನು ಯಾವ ಸಂಸ್ಥೆಗಳು ಪೂರ್ಣ ಅಳವಡಿಸಿಕೊಂಡಿವೆ ಎಂಬುದನ್ನು ಪರಿಶೀಲಿಸಲಾಗುತ್ತದೆ. ಒಂದು ವೇಳೆ ಅಳವಡಿಸಿಕೊಳ್ಳದಿದ್ದರೆ, ಅಕ್ಟೋಬರ್ 22ರಂದು ನಡೆಯುವ ಬಿಸಿಸಿಐ ಚುನಾವಣೆಯಲ್ಲಿ ಸಂಬಂಧಪಟ್ಟ ರಾಜ್ಯಸಂಸ್ಥೆಯ ಪದಾಧಿಕಾರಿಗಳು ಸ್ಪರ್ಧಿಸಲು ಸಾಧ್ಯವಿಲ್ಲ. ಅದೂ ಅಲ್ಲದೇ ಆ ಸಂಸ್ಥೆಗೆ ಬಿಸಿಸಿಐ ಮಾನ್ಯತೆಯೂ ಇರುವುದಿಲ್ಲ, ಅದಕ್ಕೆ ಯಾವುದೇ ಆರ್ಥಿಕ ನೆರವು ಸಿಗುವುದಿಲ್ಲ.
2 ವರ್ಷಗಳಿಂದ ಸರ್ವೋಚ್ಚ ನ್ಯಾಯಾಲಯದ ಆಡಳಿತಾಧಿಕಾರಿಗಳ ನೇತೃತ್ವದಲ್ಲಿ ನಡೆಯುತ್ತಿರುವ ಬಿಸಿಸಿಐಗೆ ಅ. 22ರಂದು ಚುನಾವಣೆ ನಡೆಯಲಿದೆ. ಅದಕ್ಕೂ ಮುನ್ನ ಸೆ. 14ರಂದೇ ರಾಜ್ಯ ಕ್ರಿಕೆಟ್ ಸಂಸ್ಥೆಗಳು ಚುನಾವಣೆಗಳನ್ನು ಮುಗಿಸಬೇಕು ಎಂದು ತೀರ್ಮಾನಿಸಲಾಗಿದೆ. ಈ ಹಿನ್ನೆಲೆಯಲ್ಲಿ ದೇಶದ 36 ರಾಜ್ಯ ಕ್ರಿಕೆಟ್ ಸಂಸ್ಥೆಗಳ ಪೈಕಿ 20 ಸಂಸ್ಥೆಗಳು ಚುನಾವಣಾಧಿಕಾರಿಯನ್ನು ನೇಮಿಸಿ, ಚುನಾವಣೆಗೆ ಸಿದ್ಧತೆ ಮಾಡಿಕೊಂಡಿವೆ. ಅಧಿಕಾರಿಯನ್ನು ನೇಮಿಸದ ಸಂಸ್ಥೆಗಳು ಚುನಾವಣೆ ನಡೆಸುವ ಅಧಿಕಾರವನ್ನೇ ಕಳೆದುಕೊಳ್ಳಲಿವೆ. ಸಭೆಯಲ್ಲಿ ಈ ಎಲ್ಲ ಸಂಗತಿಗಳು ಚರ್ಚೆಯಾಗಲಿವೆ.