Advertisement

ಇಂದು International Literacy Day- ದೇಶದ ಅಭಿವೃದ್ಧಿ ಪಥದ ಅಡಿಗಲ್ಲು

11:40 PM Sep 07, 2023 | Team Udayavani |

ಬರೆಯುವುದು, ಓದುವುದು ಮತ್ತುಅದನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯವನ್ನು ಸಾಕ್ಷರತೆ ಎಂದು ಕರೆಯಲಾಗುತ್ತದೆ. ಒಂದು ದೇಶದ ಅಭಿವೃದ್ಧಿಗೆ ಅತೀ ಅಗತ್ಯವಾದುದು ಸಾಕ್ಷರತೆ.

Advertisement

ಆಚರಣೆಯ ಹಿನ್ನೆಲೆ
ಶಿಕ್ಷಣದ ಮಹತ್ವವನ್ನು ವಿಶ್ವದ ಮೂಲೆ ಮೂಲೆಗೂ ತಲುಪಿಸುವ ಉದ್ದೇಶ ದಿಂದ ಯುನೆಸ್ಕೋ 1966ರ ಅಕ್ಟೋಬರ್‌ 26ರಂದು ತನ್ನ ಸಾಮಾನ್ಯ ಸಮ್ಮೇಳನದಲ್ಲಿ ಪ್ರತೀ ವರ್ಷ ಸೆಪ್ಟಂಬರ್‌ 8ನ್ನು ಅಂತಾರಾಷ್ಟ್ರೀಯ ಸಾಕ್ಷರತಾ ದಿನವಾಗಿ ಆಚರಿಸುವ ನಿರ್ಧಾರ ಕೈಗೊಂಡಿತು. ಅದರಂತೆ 1967ರಿಂದ ಇದು ಜಾರಿಗೆ ಬಂತು.

ಈ ವರ್ಷದ ಧ್ಯೇಯ
“ಪರಿವರ್ತನೆ ಪಥದಲ್ಲಿರುವ ಜಗತ್ತಿನಲ್ಲಿ ಸಾಕ್ಷರತೆಯನ್ನು ಉತ್ತೇಜಿಸುವುದು, ಸುಸ್ಥಿರ ಮತ್ತು ಶಾಂತಿಯುತ ಸಮಾಜಕ್ಕೆ ಅಡಿಪಾಯ ಹಾಕುವುದು’ ಎನ್ನುವ ಧ್ಯೇಯದೊಂದಿಗೆ ಈ ಬಾರಿ ಅಂತಾರಾಷ್ಟ್ರೀಯ ಸಾಕ್ಷರತಾ ದಿನವನ್ನು ಆಚರಿಸಲಾಗುತ್ತಿದೆ.

ಭಾರತದಲ್ಲಿ ಸಾಕ್ಷರತೆ
ಭಾರತದ ಸಾಕ್ಷರತಾ ಪ್ರಮಾಣ ಶೇ. 77.7. ಶೇ. 84.70 ಪುರುಷರು, ಶೇ.70.30 ಮಹಿಳೆಯರು ಸಾಕ್ಷರರಾಗಿದ್ದಾರೆ. ಕೇರಳ,ದೇಶದ‌ಲ್ಲಿ ಅತೀ ಹೆಚ್ಚು ಅಂದರೆ ಶೇ. 94ರಷ್ಟು ಸಾಕ್ಷರತೆಯನ್ನು ಹೊಂದಿದೆ. ಶೇ. 61.80ರಷ್ಟು ಅಕ್ಷರಸ್ಥರನ್ನು ಹೊಂದಿರುವ ಬಿಹಾರ ದೇಶದಲ್ಲಿ ಅತೀ ಕಡಿಮೆ ಸಾಕ್ಷರತಾ ಪ್ರಮಾಣ ಹೊಂದಿರುವ ರಾಜ್ಯ. ಕರ್ನಾಟಕದ ಸಾಕ್ಷರತಾ ಪ್ರಮಾಣ ಶೇ. 75.36. ಶೇ. 82.47 ಪುರುಷರು, ಶೇ. 68.08 ಮಹಿಳೆಯರು ಅಕ್ಷರಸ್ಥರಾಗಿದ್ದಾರೆ.

ಸಾಕ್ಷರತೆ ಹೆಚ್ಚಳಕ್ಕೆ ಹಲವು ಕ್ರಮಗಳು

Advertisement

ಸ್ವಾತಂತ್ರ್ಯ ಲಭಿಸಿದ ಸಂದರ್ಭದಲ್ಲಿ ದೇಶದ ಸಾಕ್ಷರತಾ ಪ್ರಮಾಣ ಶೇ. 12. ಅಂದಿನಿಂದಲೂ ದೇಶದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯವನ್ನು ನೀಡುತ್ತಾ ಬರಲಾಗಿದೆ. ವಯಸ್ಕರ ಶಿಕ್ಷಣ, ರಾಷ್ಟ್ರೀಯ ಸಾಕ್ಷರತಾ ಅಭಿಯಾನ, ಬಡ ಮತ್ತು ದುರ್ಬಲ ಮಕ್ಕಳನ್ನು ಶಾಲೆಗಳತ್ತ ಆಕರ್ಷಿಸಲು ಉಚಿತ ಶಿಕ್ಷಣ, ಸಮವಸ್ತ್ರ ಮತ್ತು ಪಠ್ಯಪುಸ್ತಕ ವಿತರಣೆ, ಪೌಷ್ಟಿಕ ಆಹಾರ ವಿತರಣೆ , ಉಚಿತ ಮಧ್ಯಾಹ್ನದ ಬಿಸಿ ಊಟ ಹೀಗೆ ಹಲವಾರು ಕಾರ್ಯಕ್ರಮ, ಯೋಜನೆಗಳನ್ನು ಸರಕಾರ ಅನುಷ್ಠಾನಕ್ಕೆ ತರುವ ಮೂಲಕ ಮಕ್ಕಳನ್ನು ಶಾಲೆಗಳತ್ತ ಸೆಳೆಯುವ ಪ್ರಯತ್ನಗಳನ್ನು ನಡೆಸಲಾಗಿದೆ. 2002ರಲ್ಲಿ 6ರಿಂದ 14 ವರ್ಷದೊಳಗಿನ ಮಕ್ಕಳಿಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣ ನೀಡುವುದನ್ನು ಮೂಲಭೂತ ಹಕ್ಕಿನಡಿ ಸೇರಿಸಲಾಗಿದೆ. 2009ರಲ್ಲಿ ಶಿಕ್ಷಣ ಹಕ್ಕು ಕಾಯಿದೆ (ಆರ್‌ಟಿಇ)ಯನ್ನು ಜಾರಿಗೊಳಿಸಲಾಗಿದೆ.

 ಸುಶ್ಮಿತಾ ನೇರಳಕಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next