Advertisement

ನಿಮ್ಮ ಗ್ರಹಬಲ: ಈ ರಾಶಿಯ ಉದ್ಯೋಗಿಗಳಿಗೆ ಇಂದು ಮುಂಭಡ್ತಿ ಯೋಗ

08:53 AM Dec 08, 2020 | keerthan |

08-12-2020

Advertisement

ಮೇಷ: ಆದಾಯ ಕೊರತೆ ಇಲ್ಲವಾದರೂ ಖರ್ಚು- ವೆಚ್ಚಗಳು ನಿರಂತರ ಇವೆ. ಹಿಡಿತ ಬಲವಿರಲಿ. ಸಾಂಸಾರಿಕ ಸುಖ ಸಮಾಧಾನ ತಂದೀತು. ಬಂಧುಮಿತ್ರರ ಸಹಕಾರ, ಶುಭ ಸಂದೇಶ, ಸಂತೋಷಾಧಿಕ್ಯದಿಂದ ವಾರಾಂತ್ಯ ಮುಗಿದದ್ದೇ ಗಮನಕ್ಕೆ ಬಾರದು.

ವೃಷಭ: ಅವಿವಾಹಿತರು ಪ್ರಯತ್ನ ಹೆಚ್ಚಿಸುವಂತಾದೀತು. ನಿರೀಕ್ಷಿತ ಕಾರ್ಯಗಳು ಮನಸ್ಸಿನಂತಾಗುತ್ತವೆ. ನೆಮ್ಮದಿ ಕಡಿಮೆ ಇದ್ದರೂ ಆರ್ಥಿಕವಾಗಿ ಚಿಂತೆ ಇರದು. ಸಾಮಾಜಿಕ ಚಟುವಟಿಕೆಗಳಲ್ಲಿ ನಿಮ್ಮ ವರ್ಚಸ್ಸು ಹೆಚ್ಚಲಿದೆ. ವಾರಾಂತ್ಯ ಶುಭವಿದೆ.

ಮಿಥುನ: ವಿದ್ಯಾರ್ಥಿಗಳಿಗೆ ವಿದ್ಯಾಭಿವೃದ್ಧಿ, ಗೃಹದಲ್ಲಿ ಬಂಧುಗಳಾಗಮನದಿಂದ ಶಾಂತಿ, ಸಮಾಧಾನ ಸಿಕ್ಕೀತು. ಯಾವುದಕ್ಕೂ ಎಚ್ಚರಿಕೆಯಿಂದ ಮುಂದಡಿ ಇಡಿ. ಅವಿವಾಹಿತರಿಗೆ ಮಾಂಗಲ್ಯ ಭಾಗ್ಯಕ್ಕೆ ಯೋಗ್ಯ ಸಂಬಂಧಗಳು ಒದಗಿ ಬಂದಾವು.

ಕರ್ಕ: ದೇವತಾ ಕಾರ್ಯಗಳಿಂದ ಮನಶಾಂತಿ ಸಿಗಲಿದೆ. ಆಗಾಗ ಆರೋಗ್ಯದಲ್ಲಿ ಏರುಪೇರು ಕಂಡು ಬರಲಿದೆ. ವಾಯು ಪ್ರಕೋಪದಿಂದ ಕಿರಿಕಿರಿ ತೋರಿ ಬಂದರೂ ಕಾರ್ಯದಲ್ಲಿ ಉತ್ಸಾಹ ಹಾಗೂ ಧನಾಗಮನ ವೃದ್ಧಿಯಾಗಲಿದೆ.

Advertisement

ಸಿಂಹ: ಮಿತ್ರರ ಸಹಯೋಗ, ಸಹಕಾರ, ನಿರಂತರ ಧನಾಗಮನ ಬದುಕನ್ನು ಹಸನಾಗಿಸೀತು. ದೇವತಾ ಕಾರ್ಯಗಳಿಂದ ಮನಶಾಂತಿ ಸಿಗಲಿದೆ. ಅಪವಾದ ಭೀತಿಗೆ ಒಳಗಾಗದಿರಿ. ಪತ್ನಿ, ಪುತ್ರರಿಂದ ಸಮಾಧಾನದ ಮಾತುಗಳು ನೆಮ್ಮದಿ ತಂದಾವು.

ಕನ್ಯಾ: ದೈವಾನುಗ್ರಹದಿಂದ ಗುರು, ದೇವರ ಸೇವೆ, ಧಾರ್ಮಿಕ ಕಾರ್ಯಗಳು ನಡೆಯಲಿವೆ. ನಿಮ್ಮ ಕಾರ್ಯಭಾಗವು ಕೈಗೂಡುವಂತಿದ್ದರೂ ಚಿಂತೆ ತಪ್ಪದೆನ್ನುವಂತಿದೆ. ಹಿರಿಯರ ಭರ್ತ್ಯನೆ ಮನಸ್ಸಿಗೆ ನೋವಾಗಲಿದೆ. ಹೆಚ್ಚಿನ ಜಾಗ್ರತೆ ವಹಿಸಬೇಕು.

ತುಲಾ: ಆರೋಗ್ಯ ಹಂತಹಂತವಾಗಿ ಸುಧಾರಣೆಯಾಗುತ್ತದೆ. ನಿರುದ್ಯೋಗಿ, ಅವಿವಾಹಿತರಿಗೆ ಸಂತಸ ತರಲಿದೆ. ಆರ್ಥಿಕ ಲಾಭ ಉತ್ತಮಗೊಂಡು ಮನ ಮುದಗೊಂಡೀತು. ಉದ್ಯೋಗಿಗಳಿಗೆ ಹೊಸ ವೃತ್ತಿ ಹೊಳಹು ಆಕಸ್ಮಿಕ ದನಾಭಿವೃದ್ಧಿ ಗೋಚರಕ್ಕೆ ಬಂದಾವು.

ವೃಶ್ಚಿಕ: ಕಹಿ ನೆನಪೆಲ್ಲಾ ಕಳೆದು ಶುಭ, ಸಂತೋಷ ತರುವ ಕಾಲವಿದು. ಮನೆಯಲ್ಲಿ ಶುಭಮಂಗಲ ಕಾರ್ಯಗಳು ನಡೆದಾವು. ಸಾಂಸಾರಿಕವಾಗಿ ಮಮತೆ, ಶಿಸ್ತು ಸಮತೋಲನವಿರಲಿ. ಸುಖಭೋಗ ವೃದ್ಧಿ ಇದೆ.

ಧನು: ನಿರುದ್ಯೋಗಿಗಳಿಗೆ ಜೀವನ ಕಹಿ ಎನಿಸೀತು. ಷೇರು, ಬ್ಯಾಂಕಿಂಗ್‌ ವ್ಯವಹಾರಗಳಲ್ಲಿ ಹೆಚ್ಚಿನ ಪ್ರಗತಿ ಇರದು. ಕಾರ್ಯಶೀಲರಾದ ನಿಮಗೆ ನಿಮ್ಮ ಪ್ರಯತ್ನ ಬಲವನ್ನು ಒರೆಗಲ್ಲಿಗೆ ತಿಕ್ಕಿ ನೋಡುವ ಅವಕಾಶಗಳು ಒದಗಿ ಬರಲಿವೆ.

ಮಕರ: ವಾರಾಂತ್ಯದಲ್ಲಿ ಶುಭವಾರ್ತೆಗಳು ಕಾರ್ಯಾನುಕೂಲಕ್ಕೆ ಪೂರಕ. ಧೈರ್ಯೋತ್ಸಾಹದ ಅನುಭವವಾಗಲಿದೆ. ಅವಿವಾಹಿತರು ಬಾಳಸಂಗಾತಿಯನ್ನು ಪಡೆಯಲಿದ್ದಾರೆ. ಉದ್ಯೋಗಿಗಳಿಗೆ ಮುಂಭಡ್ತಿಯ ಜತೆಗೆ ವರ್ಗಾವಣೆಯ ಬವಣೆ.

ಕುಂಭ: ಕಿರು ಸಂಚಾರದಲ್ಲಿ ಕಾರ್ಯಸಿದ್ಧಿ. ರಾಜಕೀಯ ರಂಗದಲ್ಲಿಯೂ ಹಣಾಹಣಿಯ ಸ್ಪರ್ಧೆಗೆ ಇಳಿಯ ಬೇಕಾಗುತ್ತದೆ. ಮಾತು ಕಡಿಮೆ ಮಾಡಿರಿ. ತಾಳ್ಮೆ, ಸಮಾಧಾನವಿರಲಿ. ಕಿರು ಸಂಚಾರದಲ್ಲಿ ಕಾರ್ಯಸಿದ್ಧಿ. ವಾರಾಂತ್ಯ ಶುಭವಿದೆ.

ಮೀನ: ಹಿರಿಯರಿಂದ ತೀರ್ಥಯಾತ್ರೆ, ಧರ್ಮ ಕಾರ್ಯಗಳು ನಡೆದಾವು. ಉದ್ಯೋಗಿಗಳಿಗೆ ಮುಂಭಡ್ತಿ ಇದೆ. ಸದ್ಯದಲ್ಲೇ ಮಂಗಲಕಾರ್ಯಗಳ ವೀಕ್ಷಣೆ ಆನಂದವಿದೆ. ಉದ್ಯೋಗಿಗಳಿಗೆ ಮುಂಭಡ್ತಿ ಇದೆ.

ಎನ್‌.ಎಸ್‌. ಭಟ್‌

Advertisement

Udayavani is now on Telegram. Click here to join our channel and stay updated with the latest news.

Next