ಬರೆಯುತ್ತಿದೆ. ಕ್ಷೇತ್ರದ ಧರ್ಮಾಧಿ ಕಾರಿಯವರಾದ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ರಾಜ್ಯ ಸಭೆಗೆ ಪ್ರವೇಶಿಸುವ ಮೂಲಕ ರಾಜಧರ್ಮ ಪರಿಪಾಲನೆಯ ಮತ್ತೊಂದು ಅಧ್ಯಾಯ ಬರೆಯಲಿದ್ದಾರೆ.
Advertisement
ಜನಸಾಮಾನ್ಯರ ಏಳಿಗೆಗಾಗಿ ಹಲವು ಸೇವೆಗಳನ್ನು ಸಲ್ಲಿಸಿರುವ ಧರ್ಮಾಧಿಕಾರಿಗಳ ಅಗ್ರಮಾನ್ಯ ಸೇವೆ ಯನ್ನು ಗುರುತಿಸಿ ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯಸಭೆಗೆ ನಾಮ ನಿರ್ದೇಶನಗೊಳಿಸಿದ ಕ್ಷಣದಿಂದ ನಾಡಿನಾದ್ಯಂತ ಅಭಿನಂದನೆಯ ಮಹಾಪೂರವೆ ಹರಿದುಬಂದಿತ್ತು. ಇದೀಗ ಮತ್ತೊಂದು ಐತಿಹಾಸಿಕ ಕ್ಷಣ ಕಣ್ತುಂಬಿಕೊಳ್ಳಲು ಭಕ್ತಕೋಟಿ ಸಜ್ಜಾಗಿದೆ.
Related Articles
Advertisement
ಶ್ರೀ ಮಂಜುನಾಥ ಸ್ವಾಮಿಗೆ ಪ್ರಾರ್ಥನೆಎಂಟು ಶತಮಾನಗಳಿಂದ ಧರ್ಮಸ್ಥಳ ಮಂಜುನಾಥ ಸ್ವಾಮಿಯನ್ನು ಆರಾಧಿಸುತ್ತಾ ಬಂದಿರುವ ಪೆರ್ಗಡೆ ಕುಟುಂಬದ ಸಂಪ್ರದಾಯಗಳನ್ನು ಉಳಿಸಿಕೊಂಡು ಆಡಳಿತದಲ್ಲಿ ಆಧುನಿಕತೆಯನ್ನು ತಂದಿರುವ ಧರ್ಮಾಧಿಕಾರಿಗಳನ್ನು ಈ ನಾಡಿನ ಅಷ್ಟ ದಿಕ್ಕುಗಳಲ್ಲೂ ಸಾಕ್ಷಾತ್ ನಡೆದಾಡುವ ಮಂಜುನಾಥನೆಂದೇ ಆರಾಧಿಸುತ್ತಾ ಬಂದಿದ್ದಾರೆ. ರಾಜ್ಯಸಭೆಗೆ ಪ್ರವೇಶಿಸುವ ಕ್ಷಣದಿಂದ ಆಯುಷ್ಯಪೂರ್ಣ ದೇಶಸೇವೆಗೆ ಸಮಯ ಮೀಸಲಿ ರಿಸುವೆ ಎಂದು ಅವರು ಈಗಾಗಲೇ ನುಡಿದಿದ್ದಾರೆ. ಹಾಗಾಗಿ ಪ್ರಮಾಣವಚನಕ್ಕೂ ಮುನ್ನಾದಿನ ಬುಧವಾರ ಮುಂಜಾನೆ ತಾನು ಆರಾಧಿಸುವ ಮಂಜುನಾಥ ಸ್ವಾಮಿಗೆ ಶಿರಬಾಗಿ ನಮಿಸಿ ಪ್ರಾರ್ಥನೆ ಸಲ್ಲಿಸಿ ಸ್ವಾಮಿಯ ಆಶೀರ್ವಾದ ಪಡೆದು ಬಳಿಕ ದಿಲ್ಲಿಗೆ ತೆರಳಿದ್ದರು. ಜು. 21ರಂದು 10 – ಸಂಸತ್ ಪ್ರವೇಶ
10.30ರಿಂದ 11 – ಪ್ರಮಾಣವಚನ
11.20ಕ್ಕೆ ಪ್ರಧಾನಿ ಮೋದಿ ಭೇಟಿ