Advertisement

ಇಂದು ಬ್ರಹ್ಮರಥೋತ್ಸವ, ಪುತ್ತೂರು ಬೆಡಿ

10:30 PM Apr 16, 2019 | mahesh |

ಪುತ್ತೂರು: ಸೀಮೆಯ ಒಡೆಯ ಇತಿಹಾಸ ಪ್ರಸಿದ್ಧ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಬ್ರಹ್ಮ ರಥೋತ್ಸವ, ಪುತ್ತೂರು ಬೆಡಿ ಎ. 17ರಂದು ಬುಧವಾರ ರಾತ್ರಿ ನಡೆಯಲಿದೆ. ಶ್ರೀ ಮಹಾಲಿಂಗೇಶ್ವರ ದೇವರ ನಡೆ ದೇಗುಲವಾಗಿರುವ ಪತಾಕೆ, ಅಷ್ಟ ದಿಕಾ³ಲ ಕರು, ಶಿಖರ ಕಲಶ, ಶ್ವೇತ ಚಕ್ರ ಮತ್ತು ಸತ್ತಿಗೆ ಅಳವಡಿಸಿದ 70 ಅಡಿ ಎತ್ತರದ ಬ್ರಹ್ಮರಥದಲ್ಲಿ ವರ್ಷದಲ್ಲಿ ಶ್ರೀ ದೇವರು ವಿರಾಜಮಾನರಾಗಲಿದ್ದಾರೆ. ರಾತ್ರಿ 8ರ ಅನಂತರ ದೇವಾಲಯದ ಮುಂಭಾಗದ ರಥ ಬೀದಿಯಲ್ಲಿ 400 ಮೀ. ಉದ್ದಕ್ಕೆ ಬ್ರಹ್ಮರಥ ತೆರಳಿ ದೇವಾಲಯದ ಭಾಗಕ್ಕೆ ಮರಳುತ್ತದೆ.

Advertisement

ಈ ಕ್ಷಣ ಅಪೂರ್ವ
ಬ್ರಹ್ಮವಾಹಕರು ಶ್ರೀ ಮಹಾಲಿಂಗೇಶ್ವರ ದೇವರ ಉತ್ಸವ ಮೂರ್ತಿಯನ್ನು ತಲೆಯ ಮೇಲೆ ಹೊತ್ತು ಬ್ರಹ್ಮರಥವನ್ನು ಏರುವ ಸಮಯ ಅಪೂರ್ವ ಧಾರ್ಮಿಕ ಕ್ಷಣ. ಚೆಂಡೆ ಮೇಳ, ಮಂಗಳವಾದ್ಯ, ಬ್ಯಾಂಡ್‌ ವಾಲಗ, ಶಂಖ, ಜಾಗಟೆ, ಮಂಗಳ ಕರ ನಿನಾದದ ಹಿನ್ನೆಲೆಯಲ್ಲಿ ಶ್ರೀ ದೇವರು ಬ್ರಹ್ಮರಥಾರೂಢರಾಗುತ್ತಾರೆ. ದೇವಾಲ ಯದ ಮುಂಭಾಗದ ಗದ್ದೆಯಲ್ಲಿ ಸೇರಿದ ಸಹಸ್ರಾರು ಭಕ್ತರು ಏಕ ಕಂಠ ದಲ್ಲಿ ಶ್ರೀ ಮಹಾಲಿಂಗೇಶ್ವರ ದೇವರ ಪಾದಾರ ವಿಂದಗಳಿಗೆ ಗೋವಿಂದ ಎನ್ನಿ ಗೋವಿಂದ ಎಂದು ಜಯಘೋಷ ಹಾಕುತ್ತಾರೆ.

ಶ್ರೀ ಮಹಾಲಿಂಗೇಶ್ವರ ದೇವಾಲಯದ ಎದುರುಗದ್ದೆಯಲ್ಲಿ ಬ್ರಹ್ಮರಥೋತ್ಸವದ ಸಂದರ್ಭದಲ್ಲಿ ರಥೋತ್ಸವ ಮತ್ತು ಸುಡುಮದ್ದು ಪ್ರದರ್ಶನಕ್ಕೆ 1 ಲಕ್ಷಕ್ಕೂ ಮಿಕ್ಕಿ ಜನಸಾಗರ ಸೇರುತ್ತದೆ. ಸೀಮಾತೀತವಾಗಿ ದೇಶದಾದ್ಯಂತ ಇರುವ ಭಕ್ತರು ರಥೋತ್ಸ ವವನ್ನು ಕಣ್ತುಂಬಿ ಕೊಳ್ಳುತ್ತಾರೆ. ಎರಡೂ ಕಡೆ ಭಕ್ತರು ನಿಂತು ಬ್ರಹ್ಮ ರಥೋತ್ಸವ ವೀಕ್ಷಿಸಿದರೆ ರಥ ಎಳೆಯುವವರ ಸಂಖ್ಯೆಯೂ ದೊಡ್ಡದಿರುತ್ತದೆ. ಬೆಳಗ್ಗೆ ದೇವಾಲಯದಲ್ಲಿ ದೇವರ ಉತ್ಸವ ಬಲಿ ಮತ್ತು ದರ್ಶನ ಬಲಿ ನಡೆಯುತ್ತದೆ. ಸಂಜೆ 5 ಗಂಟೆಯ ಬಳಿಕ ಒಳಾಂಗಣ, ಹೊರಾಂಗಣ ಮತ್ತು ಜಾತ್ರೆ ಗದ್ದೆಯಲ್ಲಿ ಜನರು ಸೇರಲಾರಂಭಿಸುತ್ತಾರೆ. ಇಲ್ಲಿನ ಭಕ್ತರ ಸಂದಣಿ ತೆರವಾಗುವುದೇ ಶ್ರೀ ದೇವರು ಬ್ರಹ್ಮರಥದಿಂದ ಇಳಿದು ಪೇಟೆ ಸವಾರಿಗೆ ತೆರಳಿದ ಬಳಿಕ.

ವಾಹನ ನಿಲುಗಡೆಗೆ ವ್ಯವಸ್ಥೆ
ಪುತ್ತೂರು ನಗರದ ತೆಂಕಿಲ, ಕೊಂಬೆಟ್ಟು, ಕಿಲ್ಲೆ ಮೈದಾನ, ಎಪಿಎಂಸಿ ರಸ್ತೆ ಬಳಿಯ ಗದ್ದೆಯಲ್ಲಿ ವಾಹನ ನಿಲುಗಡೆ ವ್ಯವಸ್ಥೆ ಮಾಡಲಾಗುತ್ತದೆ. ಸಂಜೆ 4 ಗಂಟೆಯಿಂದ ರಾತ್ರಿ ಬ್ರಹ್ಮರಥೋತ್ಸವ ಮುಗಿಯುವ ತನಕ ಮುಖ್ಯ ರಸ್ತೆಯಲ್ಲಿ ಕೊಂಬೆಟ್ಟು ಕ್ರಾಸ್‌ನಿಂದ ಬಸ್ಸು ನಿಲ್ದಾಣದ ತನಕ ಯಾವುದೇ ವಾಹನ ಸಂಚಾರಕ್ಕೆ ಅವಕಾಶವಿರುವುದಿಲ್ಲ. ಸುರಕ್ಷಾ ಕ್ರಮವಾಗಿ ಗದ್ದೆಯಲ್ಲಿ ಅಗ್ನಿಶಾಮಕದಳದ ವಾಹನ, ಆರೋಗ್ಯ ಇಲಾಖೆಯ ಆ್ಯಂಬುಲೆನ್ಸ್‌ ಮತ್ತು ವೈದ್ಯರು ಇರುತ್ತಾರೆ.

ಬಸ್ಸಿನ ವ್ಯವಸ್ಥೆ
ಈ ಬಾರಿಯೂ ಬ್ರಹ್ಮರಥೋತ್ಸವಕ್ಕೆ ಆಗಮಿಸುವ ಭಕ್ತರಿಗೆ ಕೆಎಸ್‌ಆರ್‌ಟಿಸಿ ವತಿಯಿಂದ ತಾಲೂಕಿನ ವಿವಿಧ ಕಡೆಗಳಿಗೆ ಬಸ್ಸಿನ ವ್ಯವಸ್ಥೆ ಮಾಡಲಾಗುತ್ತದೆ. ಸಂಜೆ ಕೊನೆಯ ಟ್ರಿಪ್‌ ತೆರಳಿದ ಬಸ್ಸುಗಳು ರಾತ್ರಿ ಮರಳಿ ಪುತ್ತೂರಿಗೆ ಬರಲಿವೆ. ರಥೋತ್ಸವ ಮುಗಿದ ಕೂಡಲೇ ಭಕ್ತರನ್ನು ಕರೆದುಕೊಂಡು ಬಸ್ಸುಗಳು ತೆರಳುತ್ತವೆ.

Advertisement

ಜಾತ್ರೆಯಲ್ಲಿ ಇಂದು
ಬೆಳಗ್ಗೆ ಉತ್ಸವ, ವಸಂತಕಟ್ಟೆ ಪೂಜೆ, ದರ್ಶನ ಬಲಿ, ರಾತ್ರಿ ಉತ್ಸವ, ಸಿಡಿಮದ್ದು ಪ್ರದರ್ಶನ, ಬ್ರಹ್ಮರಥೋತ್ಸವ, ಬಂಗಾರ್‌ಕಾಯರ್‌ಕಟ್ಟೆ ಸವಾರಿ, ಶ್ರೀ ದಂಡನಾಯಕ ಉಳ್ಳಾಳ್ತಿ ದೈವಗಳ ಬೀಳ್ಕೊಡುಗೆ, ಶ್ರೀಭೂತಬಲಿ, ಶಯನ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next