ಕಾಪು: ಜಲಂಚಾರು ಶ್ರೀ ಮಹಾಲಿಂಗೇಶ್ವರ ಮತ್ತು ಮಹಾಗಣಪತಿ ದೇವಸ್ಥಾನದಲ್ಲಿ ಮೇ 2ರಂದು ಬೆಳಗ್ಗೆ 8.00ರ ವೃಷಭ ಲಗ್ನ ಸುಮುಹೂರ್ತದಲ್ಲಿ ಮಹಾಲಿಂಗೇಶ್ವರ ದೇವರ ಸಹಸ್ರ ಪರಿಕಲಶ ಸಹಿತ ಬ್ರಹ್ಮಕಲಶಾಭಿಷೇಕ ಮತ್ತು ಮಹಾಗಣಪತಿ ದೇವರ 108 ಪರಿಕಲಶ ಸಹಿತ ಬ್ರಹ್ಮಕಲಶಾಭಿಷೇಕ ಮಹೋತ್ಸವ ನಡೆಯಲಿದೆ.
ಸುಮಾರು 4.50 ಕೋ.ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ದೇಗುಲದಲ್ಲಿ ವೇ| ಮೂ| ಕಳತ್ತೂರು ಉದಯ ತಂತ್ರಿಗಳ ನೇತೃತ್ವ ದಲ್ಲಿ ಮಹಾಲಿಂಗೇಶ್ವರ ಮತ್ತು ಮಹಾ ಗಣಪತಿ ದೇವರ ಪುನಃಪ್ರತಿಷ್ಠಾ ಕಾರ್ಯಗಳು ಸಂಪನ್ನಗೊಂಡಿದ್ದು, ಮೇ 2ರಂದು ಬ್ರಹ್ಮಕಲಶೋತ್ಸವದ ಬಳಿಕ ಅವಸೃತ ಬಲಿ, ಮಹಾ ಮಂತ್ರಾಕ್ಷತೆ, ಮಹಾಪೂಜೆ, ಉತ್ಸವ ಬಲಿ, ಪಲ್ಲಪೂಜೆ ಮತ್ತು ಮಧ್ಯಾಹ್ನ ಮಹಾಅನ್ನಸಂತರ್ಪಣೆ ನಡೆಯಲಿದೆ.
ಸಂಜೆ 6.30ಕ್ಕೆ ಅನಿವಾಸಿ ಭಾರತೀಯ ಉದ್ಯಮಿ ಪದ್ಮಶ್ರೀ ಡಾ| ಬಿ. ಆರ್. ಶೆಟ್ಟಿ ಅವರು ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ನಡೆಯಲಿದೆ. ಮಾಜಿ ಸಚಿವ ವಿನಯಕುಮಾರ್ ಸೊರಕೆ, ಗಣ್ಯರಾದ ಡಾ| ಯು.ಪಿ. ಉಪಾಧ್ಯಾಯ, ಡಾ| ವೈ.ಎನ್. ಶೆಟ್ಟಿ , ಸುಧೀರ್ ವಿ. ಶೆಟ್ಟಿ, ಮನೋಹರ್ ಜೆ. ಶೆಟ್ಟಿ, ಕೃಷ್ಣ ಶೆಟ್ಟಿ, ರವೀಂದ್ರ ಅರಸ, ರತ್ನಾಕರ ಶೆಟ್ಟಿ, ಮನೋಹರ್ ಶೆಟ್ಟಿ, ಯೋಗೀಶ್ ವಿ. ಶೆಟ್ಟಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ವಿಶೇಷ ಆಹ್ವಾನಿತರಾಗಿ ಸಮಾಜ ಸೇವಕ ಸುರೇಶ್ ಶೆಟ್ಟಿ ಗುರ್ಮೆ, ಬೆಳ್ಳಿಪ್ಪಾಡಿ ಹರಿಪ್ರಸಾದ್ ರೈ, ಸುಬ್ರಹ್ಮಣ್ಯ ಐತಾಳ್ ಪಾದೂರು, ಜಗನ್ನಾಥ ಶೆಟ್ಟಿ ಕನ್ಯಾನಗುತ್ತು, ಉದ್ಯಮಿ ಮಾಧವ ಶೆಟ್ಟಿ, ಶೇಖರ್ ಶೆಟ್ಟಿ ಬಗ್ಗೇಡಿಗುತ್ತು, ಭಾಸ್ಕರ ಶೆಟ್ಟಿ ಹಾವಂಜೆ, ಶೇಖರ ಶೆಟ್ಟಿ ಪೇಟೆಮನೆ, ಭುಜಂಗ ಶೆಟ್ಟಿ ಕೊಡವೂರು, ಪಿ. ಹರಿದಾಸ್ ತಂತ್ರಿ ಜಲಂಚಾರು, ರತ್ನಾಕರ ಶೆಟ್ಟಿ ಬಳುRಂಜೆ, ನಿರಂಜನ ಶೆಟ್ಟಿ ಕರಂದಾಡಿ, ಕರುಣಾಕರ ಶೆಟ್ಟಿ ಮೂಡುಬೆಳ್ಳೆ, ವಸಂತ ದೇವಾಡಿಗ ಜಲಂಚಾರು, ಮುದ್ದು ಪೂಜಾರಿ ಕರಂದಾಡಿ ಪಾಲ್ಗೊಳ್ಳಲಿದ್ದಾರೆ.
ಮುಂಬಯಿಯ ಹಿರಿಯ ಹೊಟೇಲ್ ಉದ್ಯಮಿ ಸುಬ್ಬಯ್ಯವಿ. ಶೆಟ್ಟಿ, ಕೃಷ್ಣ ಶೆಟ್ಟಿ
ಅವರಾಲು ಕಂಕಣಗುತ್ತು, ನಿವೃತ್ತ ಮುಖ್ಯೋಪಾ ಧ್ಯಾಯ ನಿರ್ಮಲ್ ಕುಮಾರ್ ಹೆಗ್ಡೆ ಅವರನ್ನು ಸಮ್ಮಾನಿಸಲಾಗುವುದು ಎಂದು ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷ ಪಂಜಿತ್ತೂರುಗುತ್ತು ರವಿರಾಜ ಶೆಟ್ಟಿ ಮತ್ತು ಸಮಿತಿಯ ಪದಾಧಿಕಾರಿಗಳು ಪ್ರಕಟನೆಯಲ್ಲಿ ತಿಳಿಸಿದ್ದಾರೆ.