Advertisement

BJP: ಸರ್ಕಾರದ ವೈಫ‌ಲ್ಯಗಳ ವಿರುದ್ಧ ಇಂದು ಬಿಜೆಪಿ ಹೋರಾಟ

10:34 PM Sep 07, 2023 | Team Udayavani |

ಬೆಂಗಳೂರು: ಭ್ರಷ್ಟಾಚಾರದಲ್ಲಿ ಮುಳುಗಿರುವ ರಾಜ್ಯ ಸರ್ಕಾರ ಬರಗಾಲ ಘೋಷಣೆಯಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿದ್ದು, ಸರ್ಕಾರದ ವೈಫ‌ಲ್ಯಗಳ ವಿರುದ್ಧ ಶುಕ್ರವಾರ ಹೋರಾಟ ನಡೆಸಲಿದ್ದೇವೆ ಎಂದು ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಹೇಳಿದರು.

Advertisement

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಅಭಿವೃದ್ಧಿ ಕಡೆಗಣಿಸಿರುವ ಸರ್ಕಾರದ ವಿರುದ್ಧ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಶುಕ್ರವಾರ ಬೆಳಗ್ಗೆ 11 ಗಂಟೆಗೆ ಬೃಹತ್‌ ಪ್ರತಿಭಟನೆ ನಡೆಸಲಾಗುವುದು ಎಂದರು.

ರಾಷ್ಟ್ರದ ಅಸ್ಮಿತೆ ವಿಚಾರದಲ್ಲಿ ಹಗುರ ಮಾತು ಸಲ್ಲ: ಹಿಂದೂ ಧರ್ಮದ ಅಸ್ತಿತ್ವದ ಬಗ್ಗೆ ಪ್ರಶ್ನಿಸಿರುವ ಪರಮೇಶ್ವರ್‌ ಅವರ ಹೇಳಿಕೆಯು ಅತ್ಯಂತ ಉದ್ಧಟತನದಿಂದ ಕೂಡಿದ್ದು, ಇದು ಖಂಡನೀಯ. ಅವರ ಬೇಜವಾಬ್ದಾರಿತನಕ್ಕೆ ಹಿಡಿದು ಕನ್ನಡಿ ಇದು. ರಾಜಕೀಯ ಲಾಭಕ್ಕಾಗಿ ಹೊಣೆಗೇಡಿ ಮಾತುಗಳನ್ನಾಡಿ ಪರಮೇಶ್ವರ್‌ ತಮ್ಮ ಘನತೆಗೆ ತಾವೇ ಕುಂದು ತಂದುಕೊಂಡಿದ್ದಾರೆ. ರಾಷ್ಟ್ರದ ಅಸ್ಮಿತೆಯಂತಹ ವಿಚಾರಗಳಲ್ಲಿ ಹಗುರವಾಗಿ ಮಾತನಾಡುವುದು ಸರಿಯಲ್ಲ ಎಂದು ಬಿಎಸ್‌ವೈ ಹೇಳಿದರು.

ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಡಿಸಿಎಂ ಗೋವಿಂದ ಕಾರಜೋಳ ಸೇರಿದಂತೆ ಬಿಜೆಪಿ ನಾಯಕರು ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ಕೆಆರ್‌ಎಸ್‌ ಜಲಾಶಯಕ್ಕೆ ಭೇಟಿ ನೀಡಲಿದ್ದು, ಆಣೆಕಟ್ಟಿನಲ್ಲಿರುವ ನೀರಿನ ವಾಸ್ತವಾಂಶದ ವೀಕ್ಷಣೆ ಮಾಡಲಿದ್ದಾರೆ.

ಯಾರೂ ಕಾಂಗ್ರೆಸ್‌ ಸೇರಲ್ಲ
ಈ ಹಂತದಲ್ಲಿ ಪಕ್ಷದಲ್ಲಿನ ಇತರ ನಾಯಕರು ನೀಡಿರುವ ಹೇಳಿಕೆಗಳ ಬಗ್ಗೆ ಹೆಚ್ಚು ಚರ್ಚಿಸಲು ಹೋಗಲ್ಲ. ನಾವೆಲ್ಲರೂ ಒಟ್ಟಾಗಿ ಪಕ್ಷ ಸಂಘಟನೆ ಮಾಡಬೇಕಿದೆ. ವಲಸಿಗ ಶಾಸಕರ್ಯಾರೂ ಕಾಂಗ್ರೆಸ್‌ಗೆ ಹೋಗುವುದಿಲ್ಲ. ಎಲ್ಲ ಶಾಸಕರೊಂದಿಗೂ ನಾನು ಮಾತನಾಡಿದ್ದೇನೆ. ಕಾಂಗ್ರೆಸ್‌ ಸರ್ಕಾರದ ವಿರುದ್ಧ ಶುಕ್ರವಾರ ನಡೆಯಲಿರುವ ಹೋರಾಟದಲ್ಲಿ ಎಲ್ಲರೂ ಭಾಗಿಯಾಗಲಿದ್ದಾರೆ ಎಂದು ಬಿಎಸ್‌ವೈ ಹೇಳಿದರು.

Advertisement

ಕೆಆರ್‌ಎಸ್‌ ಜಲಾಶಯಕ್ಕೆ ಬಿಜೆಪಿಯವರೂ ಭೇಟಿ ನೀಡಲಿ. ದಳದವರೂ ಭೇಟಿ ನೀಡಿ ವಾಸ್ತವ ಅರಿಯಲಿ. ಹಾಗೆಯೇ ನಾವು ಪಾದಯಾತ್ರೆಗೆ ಮಾಡಿದಾಗ 1 ಸಾವಿರ ಕೋಟಿ ರೂ. ಹಣ ಇಟ್ಟಿದ್ದ ಬಿಜೆಪಿಯವರು, ಈಗ ಕೇಂದ್ರ ಸರ್ಕಾರದಿಂದ ನಿರಪೇಕ್ಷಣಾ ಪತ್ರ ಕೊಡಿಸಲಿ. ನಾವೂ ಸರ್ವಪಕ್ಷ ನಿಯೋಗ ಕೊಂಡೊಯ್ಯಲು ಪ್ರಧಾನಿಗೆ ಪತ್ರ ಬರೆದಿದ್ದೇವೆ. ದಿನಾಂಕ ನಿಗದಿ ಮಾಡಿದ ಕೂಡಲೇ ಹೋಗುತ್ತೇವೆ.
ಡಿ.ಕೆ. ಶಿವಕುಮಾರ್‌, ಡಿಸಿಎಂ

Advertisement

Udayavani is now on Telegram. Click here to join our channel and stay updated with the latest news.

Next