Advertisement

ಇಂದುಬೆಳ್ತಂಗಡಿ ಪ.ಪಂ. ಚುನಾವಣೆ 

10:15 AM Oct 28, 2018 | Team Udayavani |

ಬೆಳ್ತಂಗಡಿ: ಇಲ್ಲಿನ ಪ. ಪಂ. ಚುನಾವಣೆ ಅ. 28ರಂದು ಜರಗಲಿದ್ದು, ಈ ಹಿನ್ನೆಲೆಯಲ್ಲಿ ಪಂ.ನ ಸಭಾಂಗಣದ ಚುನಾವಣೆ ಕಚೇರಿಯಲ್ಲಿ ಶನಿವಾರ ಮಸ್ಟರಿಂಗ್‌ ಕಾರ್ಯ ನಡೆಯಿತು. ಚುನಾವಣೆಯನ್ನು ಸುಸೂತ್ರವಾಗಿ ನಡೆಸುವ ನಿಟ್ಟಿನಲ್ಲಿ ಮಾಹಿತಿ ಪಡೆದ ಬಳಿಕ ಚುನಾವಣೆ ಸಿಬಂದಿ ಮತ ಯಂತ್ರದೊಂದಿಗೆ ನಿಯೋಜಿತ ಮತಗಟ್ಟೆಗಳಿಗೆ ತೆರಳಿದರು.

Advertisement

ಒಟ್ಟು 2,972 ಪುರುಷರು ಹಾಗೂ 3,078 ಮಹಿಳೆಯರು ಸಹಿತ 6,050 ಮತದಾರರು 28 ಅಭ್ಯರ್ಥಿಗಳ ಭವಿಷ್ಯ ಬರೆಯಲಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್‌ ತಲಾ 11 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದು, ಬಿಎಸ್‌ಪಿ 2, ಎಸ್‌ಡಿಪಿಐ, ಜೆಡಿಎಸ್‌ ತಲಾ 1, 2 ಕ್ಷೇತ್ರಗಳಲ್ಲಿ ಪಕ್ಷೇತರರು ಸ್ಪರ್ಧಿಸಿದ್ದಾರೆ. ಅ. 26ರಂದು ಭದ್ರತಾ ಕೊಠಡಿಯಲ್ಲಿ ಮತಪತ್ರ ಜೋಡಿಸಿದ್ದ ಮತಯಂತ್ರಗಳನ್ನು ತಹಶೀಲ್ದಾರ್‌ ಮದನ್‌ಮೋಹನ್‌ ಸಿ., ಚುನಾವಣಾಧಿಕಾರಿ ಶಿವಪ್ರಸಾದ್‌ ಅಜಿಲ, ಸಹಾಯಕ ಚುನಾವಣಾಧಿಕಾರಿ ಸುಭಾಸ್‌ ಜಾಧವ್‌, ಸೆಕ್ಟರ್‌ ಅಧಿಕಾರಿ ಮಹಾವೀರ ಆರಿಗ, ಬೆಳ್ತಂಗಡಿ ಪಿಎಸ್‌ಐ ರವಿ ಬಿ.ಎಸ್‌. ಹಾಗೂ ರಾಜಕೀಯ ಪಕ್ಷಗಳ ಪ್ರಮುಖರ ಸಮ್ಮುಖದಲ್ಲಿ ಭದ್ರತಾ ಕೊಠಡಿ ತೆರೆದು ಸಿಬಂದಿಗೆ ಮತಯಂತ್ರಗಳನ್ನು ನೀಡಲಾಯಿತು.

ಮತಯಂತ್ರವಾಗಿ ಬ್ಯಾಲೆಟ್‌ ಯುನಿಟ್‌ , ಕಂಟ್ರೋಲ್‌ ಯೂನಿಟನ್ನು ಬಳಸಲಾಗುತ್ತದೆ. ಬ್ಯಾಲೆಟ್‌ ಯೂನಿಟ್‌ ನಲ್ಲಿ ಅಭ್ಯರ್ಥಿಗಳ ಹೆಸರು, ಚಿಹ್ನೆ ಹಾಗೂ ಭಾವಚಿತ್ರವನ್ನು ಬಳಸಲಾಗಿದೆ. ಜತೆಗೆ ಮೇಲ್ಕಂಡ ಯಾರು ಅಲ್ಲ (ನೋಟಾ) ವನ್ನೂ ಬಳಸಲಾಗಿದೆ.

ಪೊಲೀಸರ ನಿಯೋಜನೆ
ಚುನಾವಣೆಗೆ ಮಸ್ಟರಿಂಗ್‌, ಡಿ ಮಸ್ಟರಿಂಗ್‌, ಸ್ಟ್ರಾಂಗ್‌ ರೂಂ ಹಾಗೂ 11ವಾರ್ಡ್ ಗಳಿಗೆ 
ಎಎಸ್‌ಐ-7, ಎಚ್‌ ಸಿ-11, ಪುರುಷ ಸಿಬಂದಿ 15, ಮಹಿಳಾ ಸಿಬಂದಿ 13, ಕೆಎಸ್‌ಆರ್‌ಪಿ, ಡಿಎಆರ್‌ ಸಿಬಂದಿಯನ್ನು ನಿಯೋಜಿಸಲಾಗಿದೆ. ಎಲ್ಲ 11 ಮತಗಟ್ಟೆಗಳು ಸಾಮಾನ್ಯ ಮತಗಟ್ಟೆಗಳಾಗಿವೆ.

11 ಮತಗಟ್ಟೆಗಳು
ಪಂ.ನ 11 ವಾರ್ಡ್‌ಗಳಿಗೆ ಸಂಬಂಧ ಪಟ್ಟಂತೆ 11 ಮತಗಟ್ಟೆಗಳಿವೆ. 1. ಬೆಳ್ತಂಗಡಿ ಸಂತ ಥೆರೆಸಾ ಪ್ರೌಢಶಾಲೆ (ಪಶ್ಚಿಮ ಭಾಗ), 2. ಕಲ್ಲಗುಡ್ಡೆ ಚರ್ಚ್‌ ಹಿ.ಪ್ರಾ. ಶಾಲೆ, 3. ಬೆಳ್ತಂಗಡಿ ಸರಕಾರಿ ಮಾದರಿ ಹಿ.ಪ್ರಾ. ಶಾಲೆ, 4. ಬೆಳ್ತಂಗಡಿ ಸರಕಾರಿ ಮಾದರಿ ಹಿ.ಪ್ರಾ. ಶಾಲೆ, 5. ಬಂಗ್ಲೆಗುಡ್ಡೆ ಮಹಿಳಾ ವೃಂದ ಕಟ್ಟಡ, 6. ಬೆಳ್ತಂಗಡಿ ತಾ.ಪಂ. ಮೀಟಿಂಗ್‌ ಹಾಲ್‌, 7. ಕುತ್ಯಾರು ಸರಕಾರಿ ಪ.ಪೂ. ಕಾಲೇಜು (ಕೆಳಗಿನ ಕಟ್ಟಡ), 8. ಕುತ್ಯಾರು ಸರಕಾರಿ ಪ.ಪೂ. ಕಾಲೇಜು (ಮೇಲಿನ ಕಟ್ಟಡ), 9. ಹುಣ್ಸೆಕಟ್ಟೆ ಸರಕಾರಿ ಕಿ.ಪ್ರಾ. ಶಾಲೆ, 10. ಮುಗುಳಿ ಸರಕಾರಿ ಹಿ.ಪ್ರಾ. ಶಾಲೆ, 11. ಬೆಳ್ತಂಗಡಿ ಸಂತ ಥೆರೆಸಾ ಪ್ರೌಢಶಾಲೆ (ಪೂರ್ವ ಭಾಗ).

Advertisement

ಅಮಾನತಿಗೆ ವಿನಂತಿ
ಚುನಾವಣೆಯ ಒಂದು ವಾರ್ಡ್‌ಗೆ ಪ್ರಿಸೈಡಿಂಗ್‌ ಅಧಿಕಾರಿಯಾಗಿ ನಿಯೋಜಿತರಾಗಿದ್ದ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ನಾಗೇಶ ಅವರು ತರಬೇತಿಗೆ ಗೈರು ಹಾಜರಾಗಿರುವ ಕುರಿತ ವಿಚಾರಣೆಗೆ ಉದ್ದಟತನದ ಉತ್ತರ ನೀಡಿ, ಮಸ್ಟರಿಂಗ್‌ ಕಾರ್ಯಕ್ಕೂ ಆಗಮಿಸದ ಹಿನ್ನೆಲೆಯಲ್ಲಿ ಅವರನ್ನು ಅಮಾನತು ಮಾಡುವ ಕುರಿತು ಜಿಲ್ಲಾಧಿಕಾರಿಯವರಿಗೆ ತಹಶೀಲ್ದಾರ್‌ ವಿವರ ನೀಡಿದ್ದಾರೆ.

ತಹಶೀಲ್ದಾರ್‌ ನೀತಿಪಾಠ 
ಚುನಾವಣೆಯಲ್ಲಿ ಕರ್ತವ್ಯ ನಿರ್ವಹಿಸುವ ಸಿಬಂದಿಗೆ ಈಗಾಗಲೇ ಎರಡು ಹಂತಗಳಲ್ಲಿ ತರಬೇತಿ ನೀಡಲಾಗಿದೆ. ಆದರೂ ಯಾವುದೇ ಸಂಶಯಗಳಿದ್ದರೂ ನಮ್ಮನ್ನು ಸಂಪರ್ಕಿಸಬಹುದು. ಆದರೆ ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ಯಾವುದೇ ಲೋಪ ಕಂಡುಬಂದರೂ ಅಂಥವರ ವಿರುದ್ಧ ಶಿಸ್ತು ಕ್ರಮಕೈಗೊಳ್ಳಲಾಗುತ್ತದೆ. ಮತಗಟ್ಟೆಗಳಲ್ಲಿ ಪಕ್ಷಾತೀತವಾಗಿ ಕೆಲಸ ಮಾಡಬೇಕು ಎಂದು ತಹಶೀಲ್ದಾರ್‌ ಸಿಬಂದಿಗೆ ಕಿವಿಮಾತು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next