ಈ ಬಾರಿಯ ವೈಮಾನಿಕ ಪ್ರದರ್ಶನದಲ್ಲಿ ದೇಶೀಯ ತೇಜಸ್, ಸಾರಂಗ್, ಸೂರ್ಯಕಿರಣ್ ಸೇರಿದಂತೆ ಸ್ವಿಡನ್‌ನ ಸ್ಕ್ಯಾಂಡಿನೇವಿಯನ್, ಇಂಗ್ಲೆಂಡ್‌ನ ಯಾಕೊವ್‌ಲೇವ್ಸ್, ರಫೇಲ್ ಯುದ್ಧವಿಮಾನಗಳು ಬಾನಲ್ಲಿ ಕಸರತ್ತು ತೋರಲಿವೆ. ಸೋಮವಾರ ಸಂಜೆವರೆಗೂ ಶೋ ಗೂ ಮುನ್ನ ಅಂತಿಮ ತಾಲೀಮು ನಡೆಸಿದ ಲೋಹದ ಹಕ್ಕಿಗಳು ತಮ್ಮ ಸಾಮರ್ಥ್ಯ ಹಾಗೂ ಕಾರ್ಯಕ್ಷಮತೆಯನ್ನು ಸ್ವಯಂ ಪರೀಕ್ಷೆಗೆ ಒಡ್ಡಿದ್ದವು. ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಬಾನಂಗಳದಲ್ಲಿ ಚಿತ್ತಾರ ಮೂಡಿಸಿದವು.
Advertisement
ಹೀಗಾಗಿ, ವಾಯುನೆಲೆ ಸುತ್ತಲಿನ ನಿವಾಸಿಗಳು ಸೋಮವಾರವೇ ವೈಮಾನಿಕ ಪ್ರದರ್ಶನವನ್ನು ಕಣ್ತುಂಬಿಕೊಂಡರು. ಸುಮಾರು 270 ದೇಶೀಯ ಮತ್ತು 279 ವಿದೇಶಿ ಸೇರಿದಂತೆ 51 ರಾಷ್ಟ್ರಗಳ 549 ಕಂಪೆನಿಗಳು ಮಳಿಗೆಗಳನ್ನು ತೆರೆಯಲಿವೆ. 72 ವಿಮಾನಗಳು ಭಾಗವಹಿಸಲಿವೆ. ಬ್ರೆಜಿಲ್, ಜಪಾನ್, ಮಲೇಷಿಯಾ, ಇಂಡೋನೇಷಿಯಾ, ಫ್ರಾನ್ಸ್ ಒಳಗೊಂಡಂತೆ ನಾನಾ ದೇಶಗಳ ರಕ್ಷಣಾ ಸಚಿವರು, ಸೇವಾ ಮುಖ್ಯಸ್ಥರು ಸೇರಿದಂತೆ 65 ಪ್ರತಿನಿಧಿಗಳು ಈಗಾಗಲೇ ವಾಯುನೆಲೆಗೆ ಬಂದಿಳಿದಿದ್ದಾರೆ.
ಬೆಂಗಳೂರು ನಗರದಿಂದ ಮೇಕ್ರಿ ಸಕìಲ್-ಸಿಬಿಐ ವೃತ್ತ-ಆನಂದನಗರ ಕ್ರಾಸ್-ಹೆಬ್ಟಾಳ ಫ್ಲೈಓವರ್- ಕೊಡಿಗೇಹಳ್ಳಿ ಜಂಕ್ಷನ್- ಅಮೃತಹಳ್ಳಿ ಕ್ರಾಸ್-ಯಲಹಂಕ ಬೈಪಾಸ್- ಕೋಗಿಲು ಕ್ರಾಸ್-ಬಾಗಲೂರು ಕ್ರಾಸ್- ವಾಯುನೆಲೆ- ಹುಣಸಮಾರನಹಳ್ಳಿ- ಬೆಟ್ಟಹಲಸೂರು- ವಿದ್ಯಾನಗರ-ಚಿಕ್ಕಜಾಲ-ಸಾದೇನಹಳ್ಳಿ-ಏರ್‌ಪೋರ್ಟ್ ಫ್ಲೈಓವರ್- ಅಂತರರಾಷ್ಟ್ರೀಯ ವಿಮಾನ ನಿಲ್ದಾಣ.
Related Articles
Advertisement
ಗುರುತಿನ ಚೀಟಿ ಕಡ್ಡಾಯಪ್ರದರ್ಶನಕ್ಕೆ ಭೇಟಿ ನೀಡುವವರು ಪಾಸ್‌ಪೋರ್ಟ್, ಮತದಾರರ ಚೀಟಿ, ಚಾಲನಾ ಪರವಾನಗಿಯಂತಹ ಅಧಿಕೃತ ಗುರುತಿನ ಚೀಟಿಗಳನ್ನು ತರುವುದು ಕಡ್ಡಾಯ. ಪ್ರದರ್ಶನ ಆರಂಭಕ್ಕೆ ಒಂದು ಗಂಟೆ ಮೊದಲೇ ಯಲಹಂಕ ವಾಯು ನೆಲೆಯ ಪ್ರವೇಶ ದ್ವಾರಗಳು ಸಾರ್ವಜನಿಕರಿಗೆ ಮುಕ್ತವಾಗಿರುತ್ತವೆ. ಇವುಗಳನ್ನು ಕೊಂಡೊಯ್ಯುವಂತಿಲ್ಲ
ಆಹಾರ ಪದಾರ್ಥಗಳು, ಆಯುಧಗಳು, ಆಟಿಕೆ ಗನ್, ಲೇಸರ್ ಪಾಯಿಂಟರ್ಸ್, ಪಟಾಕಿ ಮತ್ತಿತರ ಸಾಮಗ್ರಿಗಳನ್ನು ತರುವಂತಿಲ್ಲ. ಐದು ವರ್ಷದೊಳಗಿನ ಮಕ್ಕಳಿಗೆ ನೋಂದಣಿ ಅಗತ್ಯವಿಲ್ಲ. 16 ವರ್ಷದ ಒಳಗಿನ ಮಕ್ಕಳು ಶಾಲಾ ಗುರುತಿನ ಚೀಟಿ ತರಬೇಕು. ಟಿಕೆಟ್ ಪಡೆಯುವುದು ಹೇಗೆ?
ಸಾರ್ವಜನಿಕರು ಟಿಕೆಟ್‌ಗಳನ್ನು ಅಂತರ್ಜಾಲದಲ್ಲೂ ಪಡೆಯಬಹುದು. ಜತೆಗೆ ನಗರದ ವಿವಿಧ ಕೆಫೆ ಕಾಫಿ ಡೇ ಮಳಿಗೆಗಳಲ್ಲಿಯೂ ಪಡೆಯಬಹುದು. ಯಲಹಂಕದ ವಾಯುನೆಲೆ, ಫಿಕ್ಕಿ (FICCI) ಕಚೇರಿ, ಕೋರಮಂಗಲ, ಜೆ.ಪಿ. ನಗರ, ಮಲ್ಲೇಶ್ವರ, ವೈಟ್‌ಫೀಲ್ಡ್, ಎಂ.ಜಿ. ರಸ್ತೆಯಲ್ಲಿರುವ ಕೆಫೆ ಕಾಫಿ ಡೇ ಶಾಪ್‌ಗ್ಳಲ್ಲಿಯೂ ಟಿಕೆಟ್ ಲಭ್ಯ. ವೆಬ್‌ಸೈಟ್ www.aeroindia.in ಮೂಲಕವೂ ಸಾರ್ವಜನಿಕರು ಟಿಕೆಟ್ ಪಡೆಯಬಬಹುದು. ಟಿಕೆಟ್ ದರ 600 ರೂ. ನಿಗದಿಪಡಿಸಲಾಗಿದೆ. ಇದು ವೈಮಾನಿಕ ಪ್ರದರ್ಶನದ ವೀಕ್ಷಣಾ ಪ್ರದೇಶ (ಎಡಿವಿಎ)ಕ್ಕೆ ಮಾತ್ರ ಅನ್ವಯವಾಗುತ್ತದೆ. ವಾಣಿಜ್ಯೋದ್ಯಮಿಗಳ ವೀಕ್ಷಣೆಗೆ ಎರಡೂವರೆ ಸಾವಿರ ರೂ. ಟಿಕೆಟ್ ದರ ನಿಗದಿಪಡಿಸಿದ್ದು, ಈ ಟಿಕೆಟ್ ಪಡೆದವರು ವೈಮಾನಿಕ ಪ್ರದರ್ಶನ ಮತ್ತು ವೈಮಾನಿಕ ಉತ್ಪನ್ನಗಳ ಪ್ರದರ್ಶನವನ್ನೂ ವೀಕ್ಷಿಸಬಹುದು. ಫೆ. 14ರಂದು ಮಧ್ಯಾಹ್ನ 1ರಿಂದ ಸಂಜೆ 5ರವರೆಗೆ, ಫೆ. 15ರಿಂದ 18ರವರೆಗೆ ಬೆಳಿಗ್ಗೆ 9ರಿಂದ ಸಂಜೆ 5ರವರೆಗೆ ಭೇಟಿ ನೀಡಬಹುದು. ವೈಮಾನಿಕ ಪ್ರದರ್ಶನದಲ್ಲಿ ಇಂದು
ಬೆಳಿಗ್ಗೆ 9.30ಕ್ಕೆ 11ನೇ “ಏರೋ ಇಂಡಿಯಾ-2017’ಕ್ಕೆ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರಿಂದ ಚಾಲನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗಿ. ಬೆಳಿಗ್ಗೆ 10.10ಕ್ಕೆ ವೈಮಾನಿಕ ಪ್ರದರ್ಶನ. ಮಧ್ಯಾಹ್ನ 2ಕ್ಕೆ ವೈಮಾನಿಕ ಮತ್ತು ರಕ್ಷಣಾ ಸಾಮಗ್ರಿಗಳ ತಯಾರಿಕೆಗೆ ಆಂಧ್ರಪ್ರದೇಶದಲ್ಲಿರುವ ಅವಕಾಶಗಳು ಕುರಿತು ಜಾಗತಿಕ ಸಿಇಒಗಳ ಸಭೆ. ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಉಪನ್ಯಾಸ. ನಾಗರಿಕ ವಿಮಾನಯಾನ ಸಚಿವ ಪಿ. ಅಶೋಕ ಗಜಪತಿ ರಾಜು ಭಾಗಿ.