Advertisement

“ತಂಬಾಕು ಉತ್ಪನ್ನ; ಯುವಜನರಲ್ಲಿ ಜಾಗೃತಿ ಅಗತ್ಯ’

12:28 PM Jun 02, 2019 | Team Udayavani |

ಮಹಾನಗರ: ತಂಬಾಕು ಉತ್ಪನ್ನಗಳ ಸೇವನೆಯಿಂದ ವ್ಯಕ್ತಿಯ ಕುಟುಂಬ ಮತ್ತು ಸಮಾಜದ ಮೇಲೆ ದುಷ್ಪರಿಣಾಮ ಬೀರುವು ದ ರಿಂದಾಗಿ ತಂಬಾಕು ಸೇವನೆ ವಿರುದ್ಧ ಜಾಗೃತಿ ಮೂಡಿ ಸುವುದು ಅಗತ್ಯ ಎಂದು ಮಂಗಳೂರು ನಗರ ಕೇಂದ್ರ ಉಪ ವಿಭಾಗದ ಎಸಿಪಿ ಸುಧೀರ್‌ ಹೆಗ್ಡೆ ಹೇಳಿದರು.

Advertisement

ಶುಕ್ರವಾರ ನಗರದ ಕದ್ರಿ ಮಹಿಳಾ ಐಟಿಐ ಸಭಾಂಗಣದ‌ಲ್ಲಿ ಕೇಂದ್ರ ಸರಕಾರದ ಯುವಕಾರ್ಯ ಮತ್ತು ಕ್ರೀಡಾ ಸಚಿವಾಲಯ, ಮಂಗಳೂರಿನ ನೆಹರೂ ಯುವ ಕೇಂದ್ರ, ಕದ್ರಿ ಸರಕಾರಿ ಮಹಿಳಾ ಕೈಗಾರಿಕೆ ತರಬೇತಿ ಸಂಸ್ಥೆ ಹಾಗೂ ಕಂಕನಾಡಿ ಯುವಕ ವೃಂದದ ಸಂಯುಕ್ತಾಶ್ರಯದಲ್ಲಿ ನಡೆದ “ವಿಶ್ವ ತಂಬಾಕು ರಹಿತ ದಿನಾಚರಣೆ’ ಕಾರ್ಯಕ್ರಮದಲ್ಲಿ ಮುಖ್ಯ ಅವರು ಅತಿಥಿಯಾಗಿದ್ದರು.

ಕಾನೂನಾತ್ಮಕ ಕ್ರಮ ಅಗತ್ಯ
ತಂಬಾಕು ಉತ್ಪನ್ನಗಳ ದುಷ್ಪರಿಣಾಮ ಮತ್ತು ಅವುಗಳ ಮಾರಾಟ ಹಾಗೂ ಸೇವನೆಗೆ ಸಂಬಂಧಿಸಿದ ಕಾನೂನಾತ್ಮಕ ಕ್ರಮಗಳು ಮತ್ತು ಯುವ ಜನರು ಅವುಗಳಿಗೆ ಬಲಿಯಾಗದಂತೆ ತಡೆಯಬಹುದಾದ ವಿಧಾನಗಳ ಬಗ್ಗೆ ವಿವರಿಸಿದರು.

ಸಮಾಜ ವ್ಯಸನ ಮುಕ್ತವಾಗಲಿ
ನೆಹರೂ ಯುವ ಕೇಂದ್ರದ ಜಿಲ್ಲಾ ಸಮನ್ವಯಾಧಿಕಾರಿ ರಘುವೀರ್‌ ಸೂಟರ್‌ಪೇಟೆ ಅವರು ಯುವ ಸಮುದಾಯ ತಂಬಾಕು ಉತ್ಪನ್ನಗಳ ಅಪಾಯದ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸುವ ಮೂಲಕ ವ್ಯಸನ ಮುಕ್ತ ಸಮಾಜದಿಂದ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಮುಂದಾಗುವಂತೆ ಸಲಹೆ ನೀಡಿದರು.

ಐಟಿಐ ಪ್ರಾಂಶುಪಾಲ ಬಾಲಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಕಂಕನಾಡಿ ಯುವಕ ವೃಂದದ ಉಪಾಧ್ಯಕ್ಷ ಹೇಮಚಂದ್ರ ಗರೋಡಿ, ಉಪನ್ಯಾಸಕ ಶಿವಕುಮಾರ್‌ ಮತ್ತು ಅಧ್ಯಾಪಕ ವೃಂದದವರು ಉಪ ಸ್ಥಿತರಿದ್ದರು. ಲೋಕೇಶ್‌ ನಿರ್ವಹಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next