Advertisement
ಸೆಕೆಂಡ್ ಹ್ಯಾಂಡ್ ಧೂಮಪಾನಧೂಮಪಾನಿಗಳಾಗಿರದಿದ್ದರೂ ಅದರ ಹೊಗೆಯನ್ನು ಸೇವಿಸಿದರೆ 25-30% ಹೃದ್ರೋಗ ಸಂಭವವನ್ನು ಹೆಚ್ಚಿಸುತ್ತದೆ 20-30% ಸ್ಟ್ರೋಕ್ ಸಂಭವವನ್ನು ಹೆಚ್ಚಿಸುತ್ತದೆ. ಧೂಮಪಾನದ ಹೊಗೆಯನ್ನು ಸೇವಿಸುವ ಮೂಲಕ ಅದು ಹೃದಯದ ಸಾಮಾನ್ಯ ಕಾರ್ಯ ನಿರ್ವಹಣೆಗೆ ಅಡ್ಡಿಯಾಗುತ್ತದೆ ಅದರಿಂದಾಗಿ ಹೃದಯಾಘಾತವಾಗುವ ಸಾಧ್ಯತೆ ಇರುತ್ತದೆ.
– ಹೊಗೆ ರಹಿತ ಮತ್ತು ಹೊಗೆ ಸಹಿತ ಎರಡರಲ್ಲೂ ನಿಕೋಟಿನ್‌ಅಂಶವಿದೆ. ತಂಬಾಕಿನ ಹೊಗೆಯಲ್ಲಿ ಸರಿಸುಮಾರು 50 ಬಗೆಯ ರಾಸಾಯನಿಕ ಅಂಶ ವಿದ್ದು ಅದು ಕ್ಯಾನ್ಸರ್‌ಜನಕವಾಗಿದೆ.
– ದಿನಕ್ಕೆ ಸುಮಾರು ಒಂದು ಪ್ಯಾಕ್ ಸಿಗರೇಟು ಸೇದುವವರು ಸಿಗರೇಟ್ ಸೇದದವರಿಗಿಂತ ಏಳು ವರ್ಷ ಕಡಿಮೆ ಬದುಕುತ್ತಾರೆ .
– ಹದಿಹರೆಯದವರಲ್ಲಿ ಹೆಚ್ಚಿನವರು ಭಾವನಾತ್ಮಕ ಮತ್ತು ಮಾನಸಿಕ ತೊಂದರೆಗಳನ್ನು ಅನುಭವಿಸುತ್ತಾರೆ.
– ಶ್ವಾಸಕೋಶದ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ ಹಾಗೂ ತಂಬಾಕು ಬಳಕೆದಾರರ ಶ್ವಾಸಕೋಶದ ಕಾರ್ಯನಿರ್ವಹಣೆ ತಂಬಾಕು ಬಳಸದವರಿಗಿಂತ ಕಡಿಮೆ ಇರುತ್ತದೆ.
– ಹೃದಯಕ್ಕೆ ಮತ್ತು ರಕ್ತನಾಳಗಳಿಗೆ ಹಾನಿ ಉಂಟು ಮಾಡುತ್ತದೆ ಇದರಿಂದಾಗಿ ಹೃದಯ ಸಂಬಂಧಿ ರೋಗಗಳು ಬರುತ್ತವೆ.
– ಹಳದಿ ಹಲ್ಲು, ಬಾಯಿಯ ದುರ್ಗಂಧ ಮತ್ತು ಇತರ ಬಾಯಿಯ ಸಮಸ್ಯೆಗಳು ಉದ್ಭವಿಸುತ್ತವೆ.
– ತಂಬಾಕು ಸೇವನೆಯಿಂದ ಚರ್ಮ ಸುಕ್ಕುಗಟ್ಟುವುದು ಮತ್ತು ಇತರ ಚರ್ಮ ಸಂಬಂಧಿ ರೋಗಗಳು ಬರುತ್ತವೆ.
– ಹದಿಹರೆಯದವರಲ್ಲಿ ದೈಹಿಕ ಮತ್ತು ಮೆದುಳಿನ ಬೆಳವಣಿಗೆ ಕುಂಠಿತಗೊಳ್ಳುತ್ತದೆ.
– ಯುವಜನಾಂಗದಲ್ಲಿ ಬಂಜೆತನ, ಗರ್ಭಪಾತ, ಅಪಸ್ಥಾನೀಯ ಗರ್ಭಧಾರಣೆ, ಕಡಿಮೆತೂಕದ ಶಿಶು, ಅಕಾಲಿಕ ಶಿಶುಗಳ ಜನನಕ್ಕೆ ಕಾರಣವಾಗುತ್ತದೆ.
– ಲ್ಯುಕೇಮಿಯಾ ಸೇರಿದಂತೆ ಇತರ ಕ್ಯಾನ್ಸರ್‌ಗಳಾದ ಶ್ವಾಸಕೋಶ, ಮೂತ್ರಕೋಶ, ಪ್ಯಾಂಕ್ರಿಯಾಟಿಕ್, ಬಾಯಿ, ಅನ್ನನಾಳದ ಕ್ಯಾನ್ಸರ್‌ಅಪಾಯವನ್ನು ಹೆಚ್ಚಿಸುತ್ತದೆ.
– ಮಧುಮೇಹ, ಸ್ಟ್ರೋಕ್, ಅಧಿಕ ರಕ್ತದೊತ್ತಡದ ಅಪಾಯವನ್ನು ಹೆಚ್ಚಿಸುತ್ತದೆ.
– ಫೋಲೆಟ್ ಮಟ್ಟವನ್ನು ಕಡಿಮೆ ಮಾಡುತ್ತದೆ, ಕಡಿಮೆ ಆದಂತಹ ಫೋಲೆಟ್ ಮಟ್ಟದಿಂದ ಹೃದ್ರೋಗ, ಖನ್ನತೆ ಮತ್ತು ಅಲ್ಜೀಮರ್ಸ್ ಕಾಯಿಲೆಯ ಅಪಾಯವನ್ನು ಹೆಚ್ಚಿಸುತ್ತದೆ.
– ಮಾನಸಿಕ ಸಾಮರ್ಥ್ಯ ಮತ್ತು ನೆನಪಿನ ಶಕ್ತಿ ಮೇಲೆ ಪರಿಣಾಮ ಬೀರುತ್ತದೆ.
– ಮೂಳೆಗಳ ಸಾಂದ್ರತೆಯನ್ನು ಕಡಿಮೆ ಮಾಡುತ್ತದೆ.
– ನಪುಂಸಕತ್ವದ ಸಂಭವನೀಯತೆಯನ್ನು ಹೆಚ್ಚಿಸುತ್ತದೆ.
– ವಾಸನೆ ಮತ್ತು ರುಚಿಯ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ.
– ಹದಿಹರೆಯದವರಲ್ಲಿ ಖನ್ನತೆಯ ಅಪಾಯವನ್ನು ಹೆಚ್ಚಿಸುತ್ತದೆ.
– ಗರ್ಭಿಣಿಯಾಗಿದ್ದಾಗ ಧೂಮಪಾನ ಮಾಡಿದರೆ ನಿಮ್ಮ ಮಗುವಿನ ಸ್ಥೂಲಕಾಯತೆ ಮತ್ತು ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ.
– ತಲೆಕೂದಲು ಉದುರುವಿಕೆ.
– ತಂಬಾಕು ಸೇವನೆ ಕೇವಲ ಅದನ್ನು ಸೇವಿಸುವವರ ಮೇಲೆ ಮಾತ್ರವಲ್ಲದೆ ಅವರ ಸುತ್ತಲಿನ ಜನರ ಮೇಲೂ ದುಷ್ಪರಿಣಾಮಗಳನ್ನು ಬೀರುತ್ತದೆ.
Related Articles
ಏಕೆ ಪ್ರಾರಂಭಿಸುತ್ತಾರೆ
– ಸ್ನೇಹಿತರ ಒತ್ತಾಯ-ಇದು ಮಕ್ಕಳು ಮತ್ತು ಹದಿಹರೆಯದವರು, ವಿಶೇಷವಾಗಿ ಹುಡುಗಿಯರು ಧೂಮಪಾನ ಮಾಡಲು ಆರಂಭಿಸುವ ಸಾಮಾನ್ಯ ಕಾರಣವಾಗಿದೆ. ಧೂಮಪಾನ ಮಾಡುವ ಸ್ನೇಹಿತರಿದ್ದಲ್ಲಿ ಅವರು ಧೂಮಪಾನ ಮಾಡುವ ಸಾಧ್ಯತೆ ಇದೆ. ಇದು ಅವರಿಗೆ ಭದ್ರತಾ ಭಾವವನ್ನು ನೀಡುತ್ತದೆ.
– ಬೇರೆಯವರನ್ನು ಅನುಸರಿಸಿ -ಮಕ್ಕಳು ಮತ್ತು ಹದಿಹರೆಯದವರು ವಯಸ್ಕರನ್ನು ನೋಡಿದಾಗ, ವಿಶೇಷವಾಗಿ ಅವರ ಪೋಷಕರು ಅಥವಾ ಕುಟುಂಬದ ಇತರ ಸದಸ್ಯರು, ಧೂಮಪಾನ ಮಾಡುವವರಿದ್ದಾಗ ಧೂಮಪಾನವನ್ನು ಸಾಮಾನ್ಯ ನಡವಳಿಕೆ ಎಂದು ಮತ್ತು ಬೆಳೆದ ಮತ್ತು ಪ್ರಬುದ್ಧರಾಗಿರುವುದರ ಲಕ್ಷಣ ಎಂದು ಅವರು ಧೂಮಪಾನ ಪ್ರಾರಂಭ ಮಾಡುವ ಸಾಧ್ಯತೆ ಇದೆ.
– ಒತ್ತಡ ನಿಭಾಯಿಸಲು- ವಯಸ್ಕರಂತೆ, ಮಕ್ಕಳು ಮತ್ತು ಹದಿಹರೆಯದವರು ಒತ್ತಡವನ್ನು ನಿವಾರಿಸಲು ಧೂಮಪಾನವನ್ನು ಬಳಸಬಹುದು. ಸಿಗರೇಟಿನಲ್ಲಿರುವ ನಿಕೋಟಿನ್‌ಮೆದುಳಿನ ಪ್ಲೆಶರ್‌ಪಾಯಿಂಟ್ (ಮೆದುಳಿನಲ್ಲಿ ಸಂತೋಷ ಉಂಟುಮಾಡುವ ಪ್ರದೇಶ) ತ್ವರಿತವಾಗಿ ಸಕ್ರಿಯಗೊಳಿಸುತ್ತದೆ, ಧನಾತ್ಮಕ ಭಾವನೆಗಳನ್ನು ಮತ್ತು ಸಂವೇದನೆಗಳನ್ನು ಸೃಷ್ಟಿಸುತ್ತದೆ.
– ಮಾಧ್ಯಮ- ಮಕ್ಕಳು ಮತ್ತು ಹದಿಹರೆಯದವರು, ನಟರು ಧೂಮಪಾನ ಮಾಡುವ ಚಲನಚಿತ್ರಗಳು ಮತ್ತು ದೂರದರ್ಶನ ಪ್ರದರ್ಶನಗಳನ್ನು ನೋಡಿದಾಗ ಅವರು ಹೆಚ್ಚಾಗಿ ನಟರಿಗೆ ಆಕರ್ಷಿತರಾಗಿರುವ ಕಾರಣದಿಂದಾಗಿ ಧೂಮಪಾನವನ್ನು ಪ್ರಯತ್ನಿಸಬಹುದು ಮತ್ತು ಅವರ ನಡತೆಯನ್ನು ಅನುಕರಿಸಲು ಬಯಸುತ್ತಾರೆ.
Advertisement
ಹೃದಯದ ಮೇಲೆ ತಂಬಾಕಿನ ದುಷ್ಪರಿಣಾಮವಿಶ್ವ ತಂಬಾಕು ದಿನ 2018ರ ಪ್ರಯುಕ್ತ ತಂಬಾಕು ಮತ್ತು ಹೃದಯರೋಗದ ಬಗ್ಗೆ ಜಾಗೃತಿ ಮೂಡಿಸಲು ನಿರ್ಧರಿಸಲಾಗಿದೆ. ಶೇ. 30 ಹೃದಯ ಸಂಬಂಧಿತ ಸಾವುಗಳು ಧೂಮಪಾನದಿಂದ ಸಂಭವಿಸುತ್ತಿವೆ. ತಂಬಾಕು ಹೊಗೆಯಲ್ಲಿ ಅಧಿಕ ಪ್ರಮಾಣದಲ್ಲಿ ಕಾರ್ಬನ್ ಮಾನಾಕ್ಸೆ çಡ್ ಇರುತ್ತದೆ. ಇದು ರಕ್ತವು ಆಮ್ಲಜನಕವನ್ನು ಕೊಂಡೊಯ್ಯುವುದನ್ನು ಕಡಿಮೆ ಮಾಡಿ ಹೃದಯಕ್ಕೆ ಹಾನಿ ಉಂಟುಮಾಡುತ್ತದೆ. ಹೊಗೆ ರಹಿತ ತಂಬಾಕು ಹೃದಯ ಬಡಿತವನ್ನು ಮತ್ತು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಇದನ್ನು ದೀರ್ಘಕಾಲ ಉಪಯೋಗಿಸಿದರೆ ಹೃದ್ರೋಗ ಮತ್ತು ಸ್ಟ್ರೋಕ್ ಆಗುವ ಸಂಭವವಿರುತ್ತದೆ.
– ಧೂಮಪಾನದಿಂದ ಹೃದ್ರೋಗ ಬರುವ ಸಾಧ್ಯತೆ ಇದೆ. ಇದು ಪರಿಧಮನಿಯ ಹೃದಯರೋಗ ಮತ್ತು ಸ್ಟ್ರೋಕ್‌ಅನ್ನು ಒಳಗೊಂಡಿರುತ್ತದೆ. ಧೂಮಪಾನವು ಧಮನಿಗಳ ಒಳಪದರಕ್ಕೆ ಹಾನಿ ಮಾಡುತ್ತದೆ. ಇದು ಕೊಬ್ಬಿನ ವಸ್ತುವನ್ನು ಹೆಚ್ಚಿಸಿ ರಕ್ತ ನಾಡಿಯನ್ನು ಕಿರಿದಾಗಿಸುತ್ತದೆ. ಇದು ಹೃದಯಾಘಾತ ಅಥವಾ ಸ್ಟ್ರೋಕ್‌ಗೆ ಕಾರಣವಾಗುತ್ತದೆ.
– ಧೂಮಪಾನವು ಕೊಲೆಸ್ಟ್ರಾಲ್‌ನ ಅಂಶವಾದ ಟ್ರೆçಗ್ಲಿಸರೈಡ್ ಹೆಚ್ಚಿಸುತ್ತದೆ ಮತ್ತು ಎಚ್‌ಡಿಎಲ್ ಅನ್ನು ಕಡಿಮೆ ಮಾಡುತ್ತದೆ.
– ಧೂಮಪಾನ ರಕ್ತವನ್ನು ಜಿಗುಟಾಗಿಸುತ್ತದೆ ಮತ್ತು ಹೆಪ್ಪುಗಟ್ಟಿಸುತ್ತದೆ. ಇದು ಹೃದಯ ಮತ್ತು ಮೆದುಳಿಗೆ ರಕ್ತ ಸಂಚಾರವನ್ನು ಕಡಿಮೆ ಮಾಡುತ್ತದೆ. ರಕ್ತನಾಡಿಗಳ ಒಳಪದರದಲ್ಲಿರುವ ಜೀವಕೋಶಗಳಿಗೆ ಹಾನಿ ಉಂಟುಮಾಡುತ್ತದೆ.
– ಪ್ಲೇಕ್ ಮತ್ತು ಇತರ ವಸ್ತು) ನ ಸಂಭವವನ್ನು ಹೆಚ್ಚಿಸುತ್ತದೆ.ಇದರಿಂದಾಗಿ (ರಕ್ತನಾಳಗಳ ಕಿರಿದಾಗುವಿಕೆ)ಆಗುವ ಸಾಧ್ಯತೆ ಇದೆ.
– ಧೂಮಪಾನದಿಂದ ಹೃದಯಾಘಾತ, ರಕ್ತದೊತ್ತಡ, ರಕ್ತ ಹೆಪ್ಪುಗಟ್ಟುವಿಕೆ, ಸ್ಟ್ರೋಕ್, ರಕ್ತಸ್ರಾವಗಳು, ಅನ್ಯಾರಿಮ್¾ ಮತ್ತು ಹೃದಯ ಸಂಬಂಧಿ ರೋಗಗಳು ಬರುತ್ತವೆ. – ಡಾ| ರೋಹಿತ್ ಭಾಗವತ್,
ಡಾ| ಮುರಳೀಧರ ಕುಲಕರ್ಣಿ,ಸಮುದಾಯ ವೈದ್ಯಕೀಯ ವಿಭಾಗ,
ಕೆ ಎಂ ಸಿ ಮಣಿಪಾಲ.