ರಾಮನಾಥಪುರ: ಜಿಲ್ಲೆಯ ಅರಕಲಗೂಡು ಮತ್ತುಹೊಳೆನರಸೀಪುರ ತಾಲೂಕಿನ ಕೆಲವು ಭಾಗಗಳಲ್ಲಿಬೆಳೆಯುವ ತಂಬಾಕು 2020 -21ನೇ ಸಾಲಿನಲ್ಲಿ 75ಸಾವಿರ ಕ್ವಿಂಟಲ್ ಉತ್ಪಾದನೆಯಾಗಿದ್ದು,ಅರಕಲಗೂಡು ತಾಲೂಕು ರಾಮನಾಥಪುರದ ತಂಬಾಕು ಮಾರುಕಟ್ಟೆಯಲ್ಲಿ 184.67 ಕೋಟಿ ರೂ.ವಹಿವಾಟು ನಡೆದಿದೆ.
ರಾಮನಾಥಪುರದ ಸುಬ್ರಹ್ಮಣ್ಯನಗರದಲ್ಲಿರುವತಂಬಾಕು ಮಾರುಕಟ್ಟೆಯಲ್ಲಿ ಒಟ್ಟು 126 ದಿನಗಳಲ್ಲಿನಡೆದ ತಂಬಾಕು ವಹಿವಾಟು ಶನಿವಾರಮುಕ್ತಾಯವಾಗಿದೆ ಎಂದು ತಂಬಾಕು ಮಾರುಕಟ್ಟೆಯಅಧೀಕ್ಷಕರಾದ ದೇವಾನಂದ್ ಮತ್ತು ಸಿದ್ದರಾಜುತಿಳಿಸಿದ್ದಾರೆ.ಈ ವರ್ಷ ಮಾರುಕಟ್ಟೆಯಲ್ಲಿ ಕೊನೆಯ ದಿನ ಪ್ರತಿಕೆಜಿ ತಂಬಾಕು ಕನಿಷ್ಠ 60 ರೂ. ನಿಂದ ಗರಿಷ್ಠ 262ರೂ.ಗೆ ಮಾರಾಟವಾಗಿದೆ.
ರೈತರಿಗೆ ಪ್ರತಿ ಕೆ.ಜಿ.115.70 ರೂ. ಸರಾಸರಿ ದರ ದೊರಕಿದೆಮಾರುಕಟ್ಟೆಯ ಎರಡು ಹರಾಜು ಕಟ್ಟೆಯಲ್ಲಿ ಒಟ್ಟು126 ದಿನಗಳ ಕಾಲ 74, 94,000 ಕೆಜಿ ತಂಬಾಕುಮಾರಾಟವಾಗಿ 184. 67 ಕೋಟಿ ರೂ.ವಹಿವಾಟುನಡೆದಿದೆ ಎಂದು ಮಾಹಿತಿ ನೀಡಿದ್ದಾರೆ.ತಂಬಾಕು ಬೆಳೆಗಾರರಿಗೆ ಅನ್ಯಾಯ: ತಂಬಾಕುಮಾರುಕಟಯ ೆr ಲ್ಲಿ ತಂಬಾಕು ಖರೀದಿಸುವಕಂಪನಿಯವರು ಪ್ರಥಮ ಎಕ್ಸ್ ದರ್ಜೆಗೆ ಮಾತ್ರಉñಮ ¤ ಬೆಲೆ ನೀಡಿ ಉಳಿದ 2, 3, 4, 5ನೇ ದರ್ಜೆಯವರೆಗಿನ ಪ್ರತಿ ಕೆಜಿ ತಂಬಾಕನ್ನು 55 ರೂ.ನಿಂದ 100ರೂ.ದರದಲ್ಲಿ ಬೇಕಾಬಿಟ್ಟಿ ಖರೀದಿ ಮಾಡಿ ರೈತರಿಗೆಭಾರಿ ಅನ್ಯಾಯ ಮಾಡಿದ್ದಾರೆ ಎಂದು ತಂಬಾಕುಬೆಳೆಗಾರರರು ತಮ್ಮ ಅಳಲು ತೊಡಿಕೊಂಡಿದ್ದಾರೆ.
ರಾಮನಾಥಪುರ ಮಾರುಕಟ್ಟೆಯಲ್ಲಿಕೊನೆಯ ದಿನದ ವಹಿವಾಟು ಪ್ರಕ್ರಿಯೆ ನಂತರಕೆಲವು ರೈತರು ಪ್ರತಿಕ್ರಿಯಿಸಿ ವಿಶ್ವ ಆರೋಗ್ಯಸಂಸ್ಥೆ ಪ್ರಕಾರ 2020ಕ್ಕೆ ಹಂತ ಹಂತವಾಗಿತಂಬಾಕು ಬೆಳೆ ನಿಷೇಧ ಮಾಡುತ್ತೇವೆ ಎಂದುತಂಬಾಕು ಮಂಡಳಿಯವರು ಹೇಳಿದ್ದರು.ಆದರೆ ರೈತರಿಗೆ ಬೇರೆ ಪರ್ಯಾಯಮಾರ್ಗವನ್ನು ಸೂಚಿಸದೇ ರೈತರನ್ನು ಇಕ್ಕಟಿಗೆಸಿಲುಕಿಸುತ್ತಿದ್ದಾರೆ.
ತಂಬಾಕು ಬೆಳೆಯಲುಪ್ರಸ್ತುತ ಲೆÂಸಸ್Õ ಹೊಂದಿರುವ ಬೆಳೆಗಾರರಿಗೆತಂಬಾಕಿಗೆ ಉತ್ತಮ ಬೆಲೆ ಸಿಗುತ್ತಿಲ್ಲ. ಕರ್ನಾಟಕರಾಜ್ಯ ಹಾಗೂ ಆಂಧ್ರ ಪ್ರದೇಶದ ತಂಬಾಕುಬೆಳೆಗಾರರಿಗೆ ನೀಡುತ್ತಿರುವ ಬೆಲೆಯಲ್ಲಿತಾರತ್ಯಮ ನಡೆಯುತ್ತಿದೆ. ಇದರಿಂದರಾಮನಾಥಪುರ ಮಾರುಕಟ್ಟೆಯಲ್ಲಿ ಮಾರಾಟಮಾಡಿದ ತಂಬಾಕು ಬೆಳೆಗಾರರಿಗೆ ಬಹಳಅನ್ಯಾಯವಾಗುತ್ತಿದೆ ಎಂದು ತಿಳಿಸಿದರು.
ಬೇಕಾಬಿಟ್ಟಿ ಮಾರಾಟ: ಪ್ರತಿ ವರ್ಷ ಪ್ರಾರಂಭದಲ್ಲಿಪ್ರಥಮ ದರ್ಜೆ ತಂಬಾಕು ಸೊಪ್ಪನ್ನು ಮಾತ್ರ ತಂಬಾಕುಮಂಡಳಿಯವರು ರೈತರಿಂದ ಮಾರುಕಟ್ಟೆಗೆ ತರಿಸಿಮಾರಾಟ ಮಾಡಿಸುತ್ತಾರೆ. ಕೆಳದರ್ಜೆಯ ಸೊಪ್ಪನ್ನುಮಾರುಕಟ್ಟೆಯ ಮುಗಿಯುವ ವೇಳೆಗೆ ತರಿಸಿಕೊಂಡುಬೇಕಾಬಿಟ್ಟಿ ಹರಾಜು ಮಾಡುತ್ತಾರೆ.
ಇದರಿಂದತಂಬಾಕು ರೈತರಿಗೆ ಭಾರಿ ಅನ್ಯಾಯವಾಗುತ್ತಿದೆಎಂದು ರೈತರು ಹೇಳಿದರು.ತಂಬಾಕಿನ ವ್ಯವಸಾಯಕ್ಕೆ ಮಾಡಿರುವ ಬೆಳೆಗಾರರುಸಾಲದ ಹೊರೆ ಹೆಚ್ಚಾದಂತೆ ತಂಬಾಕು ಬೆಳೆಗಾರರುಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿನಿರ್ಮಾಣವಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದಸಂಬಂಧಪಟ್ಟ ಜನಪ್ರತಿಗಳು ಹಾಗೂ ತಂಬಾಕುಮಂಡಳಿಯು ತಂಬಾಕು ಬೆಳೆಗಾರರ ಸಂಕಷ್ಟನಿವಾರಿಸಬೇಕು. ರೈತರು ವಾಣಿಜ್ಯ ಬ್ಯಾಂಕ್, ಸಹಕಾರಬ್ಯಾಂಕ್‌ಗಳಲ್ಲಿ ಪಡೆದಿರುವ ಸಾಲವನ್ನು ಮನ್ನಾಮಾಡಬೇಕೆಂದು ಬೆಳೆಗಾರರು ಒತ್ತಾಯಿಸಿದರು.