Advertisement

ತಂಬಾಕು ಮುಕ್ತಿಗೆ ಸಹಕಾರ ಅಗತ್ಯ

04:52 PM Apr 27, 2019 | Team Udayavani |

ರಾಮನಗರ: ತಂಬಾಕು ಮುಕ್ತ ಸಮಾಜ ನಿರ್ಮಾಣಕ್ಕೆ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಧೀಶ ಹೊನ್ನಸ್ವಾಮಿ ಹೇಳಿದರು.

Advertisement

ನಗರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಎನ್‌ಎಸ್‌ಎಸ್‌, ಎನ್‌ಸಿಸಿ, ರೆಡ್‌ಕ್ರಾಸ್‌, ರೆಡ್‌ ರಿಬ್ಬನ್‌, ಮಹಿಳಾ ಆಯೋಗದ ಕಾರ್ಯ ಕ್ರಮಾಧಿಕಾರಿಗಳು, ಸಂಯೋಜನಾ ಧಿಕಾರಿಗಳಿಗೆ ಕೋಟ್ಪಾ 2003ರ ಕಾಯ್ದೆ ಹಾಗೂ ತಂಬಾಕು ಮುಕ್ತ ಶೈಕ್ಷಣಿಕ ಸಂಸ್ಥೆಗಳು ಎಂಬ ವಿಚಾರದ ಕುರಿತು ನಡೆದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿದ ಅವರು ಮಾತನಾಡಿ, ತಂಬಾಕಿನಿಂದ ಆರೋಗ್ಯದ ಮೇಲೆ ಮತ್ತು ಸಮಾಜದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ತಿಳುವಳಿಕೆ ಮೂಡಿಸಿಕೊಂಡು ಇತರರಿಗೂ ತಿಳಿಸಬೇಕು ಎಂದು ಸಲಹೆ ನೀಡಿದರು.

ಸಾರ್ವಜನಿಕವಾಗಿ ತಂಬಾಕು ಬಳಕೆ ನಿಷೇಧ: ಸಿಗರೇಟ್ ಮತ್ತು ಇತರೆ ತಂಬಾಕು ಉತ್ಪನ್ನಗಳ ಕಾಯ್ದೆ 2003ರ ಪ್ರಕಾರ ಸಾರ್ವಜನಿಕ ಸ್ಥಳಗಳಾದ ಬಸ್‌ ನಿಲ್ದಾಣ, ಹೋಟೆಲ್ಗಳು, ಶಾಲಾ-ಕಾಲೇಜುಗಳು ಮತ್ತು ಸರ್ಕಾರಿ ಕಚೇರಿಗಳು, ಚಲನಚಿತ್ರ ಮಂದಿರಗಳು ಮತ್ತಿತರ ಪ್ರದೇಶಗಳಲ್ಲಿ ತಂಬಾಕು ಸೇವನೆ ಮತ್ತು ಮಾರಾಟ ನಿಷೇಧಿಸಲಾಗಿದೆ. ಹಾಗೊಮ್ಮೆ ಕಾನೂನು ಉಲ್ಲಂಘಿಸಿದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕಟ್ಟುನಿಟ್ಟಿನ ಕಾನೂನು ಜಾರಿ: ತಂಬಾಕು ನಿಷೇಧಕ್ಕೆ ಕಟ್ಟುನಿಟ್ಟಿನ ಕಾನೂನುಗಳನ್ನು ಜಾರಿಗೆ ತರಲಾಗಿದೆ. ಪ್ರಾಣಕ್ಕೆ ಹಾನಿ ಉಂಟುಮಾಡುವಂತಹ ತಂಬಾಕು ಮತ್ತು ತಂಬಾಕಿನ ಇತರೆ ಉತ್ಪನ್ನಗಳ ಮಾರಾಟಕ್ಕೆ ಸರ್ಕಾರದ ಸಂಸ್ಥೆಗಳು ಕಡಿವಾಣ ಹಾಕಬೇಕು. ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕರ ಎಂದು ಬೀಡಿ, ಸಿಗರೇಟ್ ಮತ್ತಿತರ ತಂಬಾಕು ಉತ್ಪನ್ನಗಳ ಮೇಲೆ ಎಚ್ಚರಿಕೆಯ ಸಂದೇಶಗಳು ಇದೆ. ಆದರೂ ಈ ಹಾನಿಕಾರಕ ವಸ್ತುಗಳ ಬಳಕೆಯ ಇರುವುದರ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದರು. ತಂಬಾಕು ಮತ್ತು ಅದರ ಉತ್ಪನ್ನಗಳಿಂದಾಗುವ ದುಷ್ಪರಿ ಣಾಮಗಳ ಕುರಿತು ಸಾರ್ವಜನಿಕರಲ್ಲಿ ಇನ್ನಷ್ಟು ಜಾಗೃತಿ ಕಾರ್ಯಕ್ರಮಗಳು ನಡೆಯುವ ಅವಶ್ಯಕತೆ ಇದೆ ಎಂದರು.

ತಂಬಾಕು ವಿರೋಧಿ ದಿನದ ಮೂಲಕ ಅರಿವು: ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೆಶಕ ಎಸ್‌.ಶಂಕರಪ್ಪ ಮಾತನಾಡಿ, ತಂಬಾಕು ಸೇವನೆಯಿಂದ ಉಂಟಾಗುವ ಆರೋಗ್ಯದ ಮೇಲಿನ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಮೇ 31ನ್ನು ವಿಶ್ವ ತಂಬಾಕು ವಿರೋಧಿ ದಿನವನ್ನಾಗಿ ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿದೆ. ಇಡೀ ವಿಶ್ವದಲ್ಲಿ ತಂಬಾಕು ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಸಾಗುತ್ತಿದೆ. ಇಷ್ಟು ಅರಿವು ಮೂಡಿಸಿದರು ತಂಬಾಕು ಸೇವನೆ ತಪ್ಪಿಲ್ಲ, ಪ್ರಾಣ ಹಾನಿಯೂ ತಪ್ಪಿಲ್ಲ. ಇತ್ತೀಚೆಗೆ ಹುಕ್ಕಾ ಬಳಕೆ ಹೆಚ್ಚಾಗುತ್ತಿದ್ದು, ಯುವ ಸಮುದಾಯ ಈ ಆಕರ್ಷಣೆಯಿಂದ ದೂರ ಉಳಿಯಬೇಕು ಎಂದರು.

Advertisement

ಈ ವೇಳೆ ಡಿಎಚ್ಒ ಡಾ.ಆರ್‌. ಅಮರ್‌ನಾಥ, ಜಿಲ್ಲಾ ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಡಾ.ಮಂಜುಳಾ, ಜಿಲ್ಲಾ ಆರೋಗ್ಯ ವೀಕ್ಷಣಾಧಿಕಾರಿ ಎಚ್.ಎಂ.ದಕ್ಷಿಣ ಮೂರ್ತಿ, ಜಿಲ್ಲಾ ಸಲಹೆವ ಗಾರರಾದ ಡಾ.ಹನುಮಂತರಾಯಪ್ಪ ಇದ್ದರು.

•ತಂಬಾಕಿನಿಂದ ಆರೋಗ್ಯ, ಸಮಾಜದ ಮೇಲಾಗುವ ದುಷ್ಪರಿಣಾಮದ ಅರಿವು ಮೂಡಿಸಿ
•ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಸೇವನೆ ಮತ್ತು ಮಾರಾಟ ನಿಷೇಧ ಕಾನೂನು ಉಲ್ಲಂಘಿಸಿದರೆ ಕ್ರಮ
•ಪ್ರಾಣಕ್ಕೆ ಹಾನಿ ಉಂಟುಮಾಡುವಂತಹ ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಸರ್ಕಾರದ ಸಂಸ್ಥೆಗಳು ಕಡಿವಾಣ ಹಾಕಲಿ
Advertisement

Udayavani is now on Telegram. Click here to join our channel and stay updated with the latest news.

Next