Advertisement

ಹುಕ್ಕಾಬಾರ್‌ ವಿರುದ್ಧ ಕ್ರಮಕ್ಕೆ ತಂಬಾಕು ನಿಯಂತ್ರಣ ಸಮಿತಿ ಆಗ್ರಹ 

12:02 PM Feb 04, 2017 | Team Udayavani |

ಬೆಂಗಳೂರು: ನಗರದಲ್ಲಿ ಅಕ್ರಮವಾಗಿ ನಡೆಯುತ್ತಿರುವ ಹುಕ್ಕಾ ಬಾರ್‌ ದಂಧೆಗೆ ಕಡಿವಾಣ ಹಾಕಲು ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ತಂಬಾಕು ನಿಯಂತ್ರಣಕ್ಕಾಗಿ ರಚಿಸಿರುವ ಉನ್ನತ  ಟ್ಟದ ಸಮಿತಿ ಒತ್ತಾಯಿಸಿದೆ. 

Advertisement

ಶಾಲಾ-ಕಾಲೇಜುಗಳ ಸಮೀಪದಲ್ಲೇ ತಲೆಎತ್ತಿರುವ ಅಕ್ರಮ ಹುಕ್ಕಾ ಬಾರ್‌ ಗಳಿಂದ  ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಸಮಿತಿಯ ಸದಸ್ಯರು ತೀವ್ರ ಆತಂಕ ವ್ಯಕ್ತಪಡಿಸಿದ್ದು, ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಹುಕ್ಕಾ ಬಾರ್‌ ನಿಷೇಧ  ಕಟ್ಟುನಿಟ್ಟಿನ ಜಾರಿಗೆ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಪತ್ರ ಬರೆದು ಆಗ್ರಹಿಸಿದ್ದಾರೆ.

ಹುಕ್ಕಾ ಸೇದು ವುದು ಸಿಗರೇಟ್‌ ಗಿಂತ ಹಾನಿಕಾರ. ಹುಕ್ಕಾ ದಲ್ಲಿ ಅತಿಯಾದ  ಟಾಕ್ಸಿಕ್‌ ಅಂಶವಿದೆ. ಹುಕ್ಕಾ ಬಳಕೆ ಆರೋಗ್ಯಕ್ಕೆ ಹಾನಿಕರ ಮತ್ತು ಕೋಟ್ಪಾ ಕಾಯ್ದೆಯ ಸೆಕ್ಷನ್‌ಗಳ ಉಲ್ಲಂಘನೆಯಾಗುತ್ತಿದೆ ಎಂದು ಸಮಿತಿ ಸದಸ್ಯ ಡಾ.ವಿಶಾಲ ರಾವ್‌ ತಿಳಿಸಿದ್ದಾರೆ. 

ಹುಕ್ಕಾದಲ್ಲಿ ಟಾರ್‌, ಕಾರ್ಬನ್‌ ಮಾನಾಕ್ಸೆ„ಡ್‌, ಲೋಹದ ಅಂಶ,ಕ್ಯಾನ್ಸರ್‌ ರೋಗ ತರುವ ರಾಸಾಯನಿಕಗಳಿರುತ್ತವೆ. ಇದು ಶ್ವಾಸಕೋಶ ಮತ್ತು ಬಾಯಿ ಕ್ಯಾನ್ಸರ್‌, ಹೃದಯಾಘಾತ ಮತ್ತು ತೀವ್ರ ತೆರನಾದ ಅನಾರೋಗ್ಯಕ್ಕೆ ಕಾರಣ ವಾಗುತ್ತದೆ ಎಂದೂ ಅವರು ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next