Advertisement

ಸಾರ್ವಜನಿಕ ಸ್ಥಳದಲ್ಲಿ ತಂಬಾಕು ಸೇವನೆ

07:48 PM Jul 21, 2021 | Team Udayavani |

ಚಿಕ್ಕಬಳ್ಳಾಪುರ: ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಸೇವನೆಮಾಡುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಿ ಎಂದು ಅಪರಜಿಲ್ಲಾಧಿಕಾರಿ ಎಚ್‌.ಅಮರೇಶ್‌ ಹೇಳಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದರಾಷ್ಟ್ರೀಯ ತಂಬಾಕು ಪ್ರಗತಿ ಪರಿಶೀಲನಾ ಸಭೆಯಅಧ್ಯಕ್ಷತೆವಹಿಸಿ ಮಾತನಾಡಿ, ಬಸ್‌ ನಿಲ್ದಾಣ, ಶಾಲಾ-ಕಾಲೇಜು, ಸಣ್ಣಪುಟ್ಟ ಅಂಗಡಿ ಮುಂಗಟ್ಟು ಸೇರಿಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ, ತಂಬಾಕು ಸೇವನೆಮಾಡುವವರಿಗೆ ದಂಡ ಹಾಕಬೇಕು ಎಂದು ಹೇಳಿದರು.

ನಾಮಫ‌ಲಕ ಹಾಕಿ: ಧೂಮಪಾನ ಹಾಗೂ ತಂಬಾಕುಸೇವನೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜನರಲ್ಲಿಜಾಗೃತಿ ಮಾಡಿಸಬೇಕು. ಈ ಬಗ್ಗೆ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣಗಳಲ್ಲಿ, ಶಾಲಾ-ಕಾಲೇಜು ಮತ್ತು ಪೊಲೀಸ್‌ ಠಾಣೆಆವರಣದಲ್ಲಿ ನಾಮಫಲಕ ಹಾಕಿ ಅರಿವು ಮೂಡಿಸಬೇಕು.ಆ.15 ರೊಳಗೆ ಫ‌ಲಕ ಹಾಕುವಂತೆ ಅಧಿಕಾರಿಗಳಿಗೆಸೂಚಿಸಿದರು.

18 ವರ್ಷಕ್ಕಿಂತ ಕೆಳಗಿನವರಿಗೆ ತಂಬಾಕು ಉತ್ಪನ್ನಗಳನ್ನುಮಾರಾಟ ಮಾಡದಂತೆ ಜಾಗೃತಿ ಮಾಡಿಸಬೇಕು. ಚಿಕ್ಕಮಕ್ಕಳಿಗೆ ತಂಬಾಕು ಹಾಗೂ ಧೂಮಪಾನ ಮಾರುವವರವಿರುದ್ಧ ದಂಡ ವಿಧಿಸಬೇಕು ಎಂದರು.ಸಭೆಯಲ್ಲಿ ಜಿಲ್ಲಾ ಸರ್ವೆಕ್ಷಣಾಧಿಕಾರಿ ಆರ್‌.ರಮೇಶ್‌ ಬಾಬು, ತಾಲೂಕು ಆರೋಗ್ಯಾಧಿಕಾರಿಗಳುಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಸಹಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next