Advertisement

ತಂಬಾಕು, ಸಿಗರೇಟ್‌ ಕದ್ದು ಮುಚ್ಚಿ ಮಾರಾಟ

06:40 PM Apr 24, 2020 | Suhan S |

ತುಮಕೂರು: ಸಾರ್ವಜನಿಕ ಸ್ಥಳದಲ್ಲಿ ಉಗುಳುವುದು, ಬೀಡಿ ಸಿಗರೇಟ್‌ ಸೇದುವುದು ಜಿಲ್ಲೆಯಲ್ಲಿ ಸಂಪೂರ್ಣ ನಿಷೇಧವಿದೆ. ಆದರೂ ನಗರವೂ ಸೇರಿದಂತೆ ಜಿಲ್ಲೆಯ ಎಲ್ಲಾ ಕಡೆ ಬೀಡಿ, ಸಿಗರೇಟ್‌ ತಂಬಾಕು ಉತ್ಪನ್ನಗಳ ಮಾರಾಟ ನಡೆದಿದೆ.

Advertisement

ಕಲ್ಪತರು ನಾಡಿನಲ್ಲಿ ರಕ್ಕಸ ಕೋವಿಡ್ 19 ವ್ಯಾಪಿಸದಂತೆ ಜಿಲ್ಲಾಡಳಿತ ಹಲವು ಬಿಗಿ ಕ್ರಮ ಕೈಗೊಂಡ ಪರಿಣಾಮ ಕಳೆದ 25 ದಿನಗಳಿಂದ ಯಾವುದೇ ಹೊಸ ಕೋವಿಡ್ 19 ಪ್ರಕರಣ ಪತ್ತೆಯಾಗಿಲ್ಲ. ಇದನ್ನು ತಡೆಯಲು ಜಿಲ್ಲಾಡಳಿತ ಹಲವು ಮಾರ್ಗೋಪಾಯ ಕಂಡು ಕೊಂಡಿದ್ದು, ರೋಗ ಹರಡುವ ಪ್ರಮುಖ ಉತ್ಪನ್ನಗಳಾದ ತಂಬಾಕು ಸೇವನೆ ಮಾರಾಟ ವನ್ನು ಸಂಪೂರ್ಣ ನಿಷೇಧ ಮಾಡಿದೆ. ಆದರೂ ಜಿಲ್ಲೆಯಲ್ಲಿ ಸಿಗ ರೇಟ್‌ ಮತ್ತು ತಂಬಾಕು ಉತ್ಪನ್ನಗಳಮಾರಾಟ ಇನ್ನೂ ನಿಂತಿಲ್ಲ. ಸಾಂಕ್ರಾಮಿಕ ರೋಗಗಳಾದ ಕೋವಿಡ್‌- 19, ಕ್ಷಯರೋಗ, ನ್ಯುಮೋನಿಯ, ವೈರಸ್‌ ಒಬ್ಬರಿಂದ ಮತ್ತೂಬ್ಬರಿಗೆ ಹರಡುವುದರಿಂದಸಾರ್ವಜನಿಕ ಆರೋಗ್ಯ ಹಿತದೃಷ್ಟಿಯಿಂದ ಇದರ ನಿಯಂತ್ರಣಕ್ಕಾಗಿ ಮುಂದಿನ ಆದೇಶದವರೆಗೂ ಈ ಉತ್ಪನ್ನಗಳನ್ನು ತುಮಕೂರು ಜಿಲ್ಲಾದ್ಯಂತ ಅಂಗಡಿಗಳಲ್ಲಿ ಮಾರಾಟ ಮಾಡುವುದು ಮತ್ತು ಬಳಸುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ ಕುಮಾರ್‌ಆದೇಶ ಹೊರ ಡಿಸಿದ್ದರೂ ಕೆಲವು ಕಿಡಿಗೇಡಿಗಳು ಇದಕ್ಕೆ ಕ್ಯಾರೇ ಎನ್ನದೇ ಚಾಳಿ ಮುಂದುವರಿಸಿದ್ದಾರೆ.

ಜನರು ತಮ್ಮ ಆರೋಗ್ಯದ ಕಡೆ ಗಮನ ನೀಡಬೇಕಾದ್ದು ಪ್ರತಿಯೊಬ್ಬರ ನಾಗರೀಕರ ಕರ್ತವ್ಯವಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಉಗುಳಬಾರದು ಎನ್ನುವ ನಿಯಮ ಇದೆ. ಇದನ್ನು ಎಲ್ಲರೂ ಪಾಲಿಸಲೇಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು. ಧೂಮಪಾನ ಮಾಡುವುದು ಕಂಡು ಬಂದರೆ ಇನ್ನು ಮುಂದೆ ಕಾನೂನು ಕ್ರಮ ಖಚಿತ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

ಬೀಡಿ, ಸಿಗರೇಟ್‌ ಸೇವನೆಯಿಂದ ಕೊರೊನಾ ಸೇರಿದಂತೆ ಹಲವು ಸಾಂಕ್ರಾಮಿಕ ರೋಗ ಹರಡುವುದರಿಂದ ಜಿಲ್ಲೆ ಯಲ್ಲಿ ಇವುಗಳ ಮಾರಾಟ ನಿಷೇಧಿಸಿದೆ. ಅಂಗಡಿಗಳಲ್ಲಿ ಮಾರಾಟ ಮಾಡುವುದು ಕಂಡು ಬಂದರೆ ಸಾಂಕ್ರಾಮಿಕ ರೋಗಗಳ ಕಾಯ್ದೆ 1897ರ ವಿಪತ್ತು ನಿರ್ವಹಣಾ ಕಾಯ್ದೆ 2005 ಐಪಿಸಿ ಕಲಂ 188, 268, 269 ಮತ್ತು 270 ಸಿಆರ್‌ಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ಸಂಬಂಧಿಸಿದವರ ಮೇಲೆ ಕ್ರಮ ಜರುಗಿಸಲಾಗುವುದು. ಡಾ.ಕೆ.ರಾಕೇಶ್‌ಕುಮಾರ್‌, ಜಿಲ್ಲಾಧಿಕಾರಿ

 

Advertisement

 ಚಿ.ನಿ.ಪುರುಷೋತ್ತಮ್‌

Advertisement

Udayavani is now on Telegram. Click here to join our channel and stay updated with the latest news.

Next