Advertisement

ತಂಬಾಕು ನಿಷೇಧ ನಾಮಫ‌ಲಕ ಕಡ್ಡಾಯ

03:47 PM May 08, 2019 | Team Udayavani |

ಶ್ರೀರಂಗಪಟ್ಟಣ: ತಾಲೂಕಿನ ಎಲ್ಲಾ ಅಂಗಡಿಗಳ ಮುಂದೆ ತಂಬಾಕು ಮಾರಾಟ ಕಾಯ್ದೆಯ ನಾಮಫ‌ಲಕ ಹಾಕಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಂಚೇಗೌಡ ಹೇಳಿದರು.

Advertisement

ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ಆಯೋಗ್ಯ ಇಲಾಖೆ ನೇತೃತ್ವದಲ್ಲಿ ಏರ್ಪಡಿಸಿದ್ದ ವಿವಿಧ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಮೇ 31ರೊಳಗಾಗಿ ಎಲ್ಲಾ ಅಂಗಡಿಗಳ ಮುಂದೆ ತಂಬಾಕು ನಿಯಮ ಕಾಯ್ದೆ ಅನುಷ್ಠಾನಗೊಳಿಸಬೇಕು. ಈ ಎಲ್ಲಾ ಪ್ರಯತ್ನಗಳು ಈಗಾಗಲೇ ಜಿಲ್ಲೆಯಲ್ಲಿ ಕಾರ್ಯನಿರತವಾಗಿವೆ. ಸಂಬಂಧಿಸಿದ ಎಲ್ಲಾ ಇಲಾಖೆ ಅಧಿಕಾರಿಗಳು ಕಾರ್ಯಕ್ರಮಕ್ಕೆ ಸಹಕರಿಸಿ, ಆಯಾ ತಾಲೂಕು ವ್ಯಾಪ್ತಿ ಗ್ರಾಮಗಳಲ್ಲಿ ಶಾಲಾ ಆವರಣ ವಿವಿಧ ಕಚೇರಿಗಳ ಬಳಿ ತಂಬಾಕು ನಿಷೇಧ ಫ‌ಲಕ ಹಾಕಬೇಕು. ಜೊತೆಗೆ 18 ವರ್ಷ ತಂಬದ ಯುವಕರಿಗೆ ತಂಬಾಕು ಮಾರಾಟ ಮಾಡದಂತೆ ಎಲ್ಲಾ ಅಂಗಡಿಗಳ ಬಳಿ ಜಾಗೃತಿ ಫ‌ಲಕ ಹಾಕಿಸಬೇಕು. ಕಾನೂನು ನಿಯಮ ಮೀರಿ ಮಾರಾಟ ಮಾಡಿದ ಅಂಗಡಿ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲು ಪೊಲೀಸರ ನೆರವು ಪಡೆಯಬೇಕು ಎಂದು ತಿಳಿಸಿದರು.

ಪಟ್ಟಣದಲ್ಲಿ ತಂಬಾಕು ಮಾರಾಟ ಮಾಡುವ ಅಂಗಡಿಗಳ ಮೇಲೆ ದಾಳಿ ನಡೆಸಿ ಅಂಗಡಿಯಲ್ಲಿದ್ದ ತಂಬಾಕು ಪದಾರ್ಥ ವಶಕ್ಕೆ ಪಡೆದು, ಮಾರಾಟ ಮಾಡುವ ನಿಷೇಧದ ಕಾಯ್ದೆಯಡಿ ಪ್ರಕರಣ ದಾಖಲಿಸಿ ಅಂಗಡಿ ಮಾಲೀಕರಿಗೆ ದಂಡ ಹಾಕಿದರು.

ಉಪ ತಹಶೀಲ್ದಾರ್‌ ಸ್ವಾಮೀಗೌಡ, ತಾಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶ್‌, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಬಾಲಕೃಷ್ಣ, ಜಿಲ್ಲಾ ಸಲಹೆಗಾರ ತಿಮ್ಮರಾಜು, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶ್ವೇತಾ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಇತ್ತೀಚೆಗೆ ನಿಧನರಾದ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಮಂಜುಳಾ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next