Advertisement

ಯೋಧ ಝುಬೈರ್‌ಗೆ ಹುಟ್ಟೂರಲಿ ಸ್ವಾಗತ

03:20 PM Apr 02, 2018 | |

ಕಡಬ: ಫೆಬ್ರವರಿಯಲ್ಲಿ ಕಾಶ್ಮೀರದ ಕರಣ್‌ ನಗರದ ಕಟ್ಟಡವೊಂದರಲ್ಲಿ ಅಡಗಿ ಕುಳಿತಿದ್ದ ಭಯೋತ್ಪಾದಕರ ವಿರುದ್ಧ
ಹೋರಾಡಿ ಅವರನ್ನು ಸದೆಬಡಿದ ತಂಡದಲ್ಲಿದ್ದ ಯೋಧ ರಾಮಕುಂಜ ಸಮೀಪದ ಹಳೆನೇರೆಂಕಿಯ ಝುಬೈರ್‌ ಅವರನ್ನು ರವಿವಾರ ಹುಟ್ಟೂರಿಗೆ ಆತ್ಮೀಯವಾಗಿ ಬರ ಮಾಡಿಕೊಳ್ಳಲಾಯಿತು.

Advertisement

ಕಾರ್ಯಾಚರಣೆಯ ಬಳಿಕ ರಜೆಯ ಮೇಲೆ ಊರಿಗೆ ಆಗಮಿಸಿದ ಯೋಧ ಝುಬೈರ್‌ ಅವರನ್ನು ಕಡಬ ತಾ|ನ ಕೊಯಿಲ, ಆತೂರು ಪರಿಸರದ ವಿವಿಧ ಸಂಘಟನೆಗಳ ಸದಸ್ಯರು ಮತ್ತು ನಾಗರಿಕರು ಕೊಯಿಲದಲ್ಲಿ ಹಾರ ಹಾಕಿ, ಶಾಲು ಹೊದೆಸಿ ಸಮ್ಮಾನಿಸಿ ಬರಮಾಡಿಕೊಂಡರು. 

ಸಮ್ಮಾನ ಸ್ವೀಕರಿಸಿ ಮಾತನಾಡಿದ ಝುಬೈರ್‌ ದೇಶದ ರಕ್ಷಣೆಯ ಕಾರ್ಯದಲ್ಲಿ ತೊಡಗಿಕೊಂಡಿರುವ ಯೋಧರಾದ ನಮಗೆ ವೈರಿಗಳ ವಿರುದ್ಧ ಹೋರಾಡುವುದು ಖುಷಿ ಮತ್ತು ಹೆಮ್ಮೆಯ ವಿಚಾರ. ಗಡಿ ಕಾಯುವ ಸೈನಿಕರು ಯಾವುದೇ ಪ್ರತಿಕೂಲ ಪರಿಸ್ಥಿತಿಯಲ್ಲೂ ದೇಶದ ಸೇವೆ ಮಾಡಲು ಸನ್ನದ್ದರಾಗಿರುತ್ತಾರೆ. ದೇಶದ ಪ್ರತಿಯೊಬ್ಬ ನಾಗರಿಕನೂ ಸೈನಿಕನಂತೆ ದೇಶದ ಪರವಾಗಿ ಪ್ರತಿಕ್ಷಣವೂ ಚಿಂತಿಸಬೇಕಿದೆ. ನನಗೆ ಇಲ್ಲಿ ನೀಡಿದ ಗೌರವ ದೇಶಕ್ಕಾಗಿ ಸೇವೆ ನೀಡುತ್ತಿರುವ ಎಲ್ಲಾ ಯೋಧರಿಗೆ ನೀಡಿದ ಗೌರವ ಎಂದು ಭಾವಿಸುತ್ತೇನೆ. ಹುಟ್ಟೂರ ಸಮ್ಮಾನ ನನ್ನ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿದೆ ಎಂದರು.

ಉಪನ್ಯಾಸಕ ಡಾ|ಮಹಮ್ಮದ್‌ ಮುಸ್ತಾಫ ಆತೂರು ಮಾತನಾಡಿ, ದೇಶ ಪ್ರೇಮವನ್ನು ತನ್ನ ಕರ್ತವ್ಯದ ಮೂಲಕ ತೋರ್ಪಡಿಸಿದ ವೀರ ಯೋಧನನ್ನು ಯುವ ಜನತೆ ಮಾದರಿಯನ್ನಾಗಿಸಿಕೊಳ್ಳಬೇಕು ಎಂದರು. ಉಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕೊ„ಲದಲ್ಲಿ ರೋಮ್ಯಾಂಟಿಕ್‌ ಫ್ರೆಂಡ್ಸ್‌ ಸಂಘಟನೆಯ ಅಧ್ಯಕ್ಷ ಫಾರೂಕ್‌ ಹಾಗೂ ಪದಾಧಿಕಾರಿಗಳು ಮತ್ತು ನಾಗರಿಕರು ಸ್ವಾಗತಿಸಿ ಝುಬೆ„ರ್‌ ಅವರನ್ನು ತೆರೆದ ವಾಹನದಲ್ಲಿ ಕುಳ್ಳಿರಿಸಿ ವಾಹನ ಮೆರವಣಿಗೆಯ ಮೂಲಕ ಆತೂರು, ರಾಮಕುಂಜ ಕ್ರಾಸ್‌, ಗೋಳಿತ್ತಡಿ ಮೂಲಕ ಹುಟ್ಟೂರು ಹಳೆನೇರೆಂಗೆ ಕರೆದೊಯ್ದರು.

ವಿವಿಧ ಸಂಘಟನೆಗಳು ಹಾಗೂ ಪ್ರಮುಖರು ಝುಬೈರ್‌ ಅವರನ್ನು ಗೌರವಿಸಿದರು. ಸ್ವದಖತುಲ್ಲಾ, ಸೈಫುದ್ದೀನ್‌, ಖಲಂದರ್‌ ಪೆರ್ಜಿ, ಉಮರ್‌ ಪಿಲಿಕುಡೆಲ್‌, ಅಬ್ದುಲ್‌ ಅಝೀಜ್‌ ಬಿ.ಎಸ್‌., ರಾವೂಫ್‌ ಬಿ.ಕೆ., ಖಬೀರ್‌ ಹೇಂತಾರ್‌, ಮುನೀರ್‌ ಕೆ., ಇರ್ಷಾದ್‌ ಕೆಮ್ಮಾರ, ಯೋಧನ ಸಹೋದರ ಅಬ್ದುಲ್‌ ರಝಾಕ್‌ ದಾರಮಿ ಮೊದಲಾದವರು ಉಪಸ್ಥಿತರಿದ್ದರು. ಅಬ್ದುಲ್‌ ಖಾದರ್‌ ಬಿ.ಎಸ್‌. ಸ್ವಾಗತಿಸಿ, ತುಫೈಲ್‌ ವಂದಿಸಿದರು. ನೌಫಾಲ್‌ ಮಾಸ್ತರ್‌ ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next