Advertisement

ರಕ್ಷಣೆ, ಭದ್ರತಾ ಕ್ಷೇತ್ರದಲ್ಲಿ ಭಾರತ ಮಹತ್ವದ ಅಂಕಿತ

05:30 AM Apr 18, 2018 | Karthik A |

ಸ್ಟಾಕ್‌ಹೋಮ್‌: ಸ್ವೀಡನ್‌ ಗೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಇಲ್ಲಿನ ಪ್ರಧಾನಿ ಸ್ಟೀಫ‌ನ್‌ ಲೋಫ್ವೆನ್‌ ಜತೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದು, ರಕ್ಷಣೆ ಮತ್ತು ಭದ್ರತಾ ವ್ಯವಹಾರಗಳಿಗೆ ಸಂಬಂಧಿಸಿದಂತೆ ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. ಭಾರತದ ಪ್ರಧಾನಿಯೊಬ್ಬರು ಸ್ವೀಡನ್‌ಗೆ ಭೇಟಿ ನೀಡಿರುವುದು ಮೂವತ್ತು ವರ್ಷಗಳ ಬಳಿಕ ಇದೇ ಮೊದಲು. 1988ರಲ್ಲಿ ಅಂದಿನ ಪ್ರಧಾನಿ ರಾಜೀವ್‌ ಗಾಂಧಿ ಅವರು ಸ್ವೀಡನ್‌ಗೆ ಭೇಟಿ ನೀಡಿದ್ದರು. ಮಂಗಳವಾರ ಸ್ಟಾಕ್‌ ಹೋಮ್‌ ನಲ್ಲಿ ಸ್ವೀಡನ್‌ ಪ್ರಧಾನಿ ಲೋಫ್ವೆನ್‌ ಜತೆಗೆ ನಡೆದ ಮಾತುಕತೆಯಲ್ಲಿ  ವಾಣಿಜ್ಯ ಮತ್ತು ಬಂಡವಾಳ ಹೂಡಿಕೆ, ಸಂಸ್ಕೃತಿ ಮತ್ತು ಪ್ರಾದೇಶಿಕ, ಬಹುಸ್ತರದ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರ ನೀಡಿಕೆಯ ಬಗ್ಗೆ ಚರ್ಚೆಗಳು ನಡೆದಿವೆ. 

Advertisement

ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವೇಳೆ ಪ್ರಧಾನಿ ನರೇಂದ್ರ ಮೋದಿ, ಆರಂಭದಿಂದಲೂ ಸ್ವೀಡನ್‌ ನಮ್ಮ ‘ಮೇಕ್‌ ಇನ್‌ ಇಂಡಿಯಾ’ ಯೋಜನೆಗೆ ಉತ್ತೇಜನ ನೀಡುತ್ತಾ ಬಂದಿದೆ. ಭಾರತದಲ್ಲಿ ಉಂಟಾಗುತ್ತಿರುವ ಅಭಿವೃದ್ಧಿಯಿಂದ ಸ್ವೀಡನ್‌ ನಮ್ಮ ಜತೆ ಸಹಕರಣೀಯ ಸಹಭಾಗಿತ್ವ ಪಡೆಯಬಹುದು ಎಂಬ ಬಗ್ಗೆ ಮಾತುಕತೆಯಲ್ಲಿ ಚರ್ಚಿಸಲಾಯಿತು. ಅಲ್ಲದೆ, ಉತ್ಪಾದನಾ ಕ್ಷೇತ್ರ, ಸ್ಟಾರ್ಟಪ್‌ ಸೇರಿದಂತೆ ಇತರ ಕ್ಷೇತ್ರಗಳಲ್ಲಿಯೂ ಸಹಕಾರ ವೃದ್ಧಿಗೆ ಮಾತುಕತೆ ನಡೆಸಲಾಗಿದೆ ಎಂದರು. ಸ್ವೀಡನ್‌ ಪ್ರಧಾನಿ ಸ್ಟೆಫ‌ನ್‌ ಲೋಫ್ವೆನ್‌ ಮಾತನಾಡಿ, ಭಾರತ ಜಗತ್ತಿನ ಪ್ರಮುಖ ಶಕ್ತಿಯಾಗಿದೆ ಎಂದಿದ್ದಾರೆ. ಇದಕ್ಕೂ ಮುನ್ನ ಪ್ರಧಾನಿ ಮೋದಿ ಸ್ವೀಡನ್‌ ದೊರೆಯನ್ನೂ ಭೇಟಿ ಮಾಡಿದ್ದರು.

5 ದಿನಗಳ ಪ್ರವಾಸ ಕೈಗೊಂಡಿರುವ ಪ್ರಧಾನಿ ಮೋದಿ ಯುಕೆಗೆ ತೆರಳಿದ್ದು, ಬುಧವಾರ ಅಲ್ಲಿ ಕಾಮನ್ವೆಲ್ತ್‌ ರಾಷ್ಟ್ರಗಳ ಮುಖ್ಯಸ್ಥರ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next