Advertisement

ವಲಯ-ಗ್ರಾಮ ಸಮ್ಮೇಳನಕ್ಕೆ ಅನುದಾನ ಒದಗಿಸಲು ಮನವಿ

02:44 PM Dec 15, 2019 | Team Udayavani |

ಬೀದರ: ಜಿಲ್ಲಾ ಮತ್ತು ತಾಲೂಕು ಕನ್ನಡ ಸಮ್ಮೇಳನದ ಮಾದರಿಯಲ್ಲಿ ವಲಯ ಮತ್ತು ಗ್ರಾಮ ಕಸಾಪ ಘಟಕಗಳು ಹಮ್ಮಿಕೊಳ್ಳುವ ಕನ್ನಡ ಸಾಹಿತ್ಯ ಸಮ್ಮೆಳನಕ್ಕೆ ಕೇಂದ್ರ ಘಟಕದಿಂದ ಅನುದಾನ ನೀಡಬೇಕು ಎಂದು ಔರಾದ (ಎಸ್‌) ವಲಯ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮಾರುತಿ ಮಾಸ್ಟರ್‌ ಒತ್ತಾಯಿಸಿದ್ದಾರೆ.

Advertisement

ನಗರಕ್ಕೆ ಭೇಟಿ ನೀಡಿದ್ದ ಕಸಾಪ ರಾಜ್ಯಾಧ್ಯಕ್ಷ ಡಾ| ಮನು ಬಳಿಗಾರ್‌ ಅವರಿಗೆ ಈ ಕುರಿತು ಮನವಿ ಸಲ್ಲಿಸಿದ್ದಾರೆ. ಗ್ರಾಮೀಣ ಭಾಗದಲ್ಲಿ ಕನ್ನಡ ಸಾಹಿತ್ಯ ಅಭಿವೃದ್ಧಿ ಹೊಂದಿದಾಗ ಮಾತ್ರ ಆ ಭಾಷೆ, ಸಂಸ್ಕೃತಿ ಉಳಿಯಲು ಮಾತ್ರ ಸಾಧ್ಯ. ಈ ಭಾಗದಲ್ಲಿ ಸಮ್ಮೇಳನಗಳನ್ನು ಮಾಡಬೇಕಾದರೆ ಧನ ಸಹಾಯ ಮಾಡಲು ಯಾರೂ ಮುಂದೆ ಬರುವುದಿಲ್ಲ. ಹೀಗಾಗಿ ವಲಯದಲ್ಲಿ ಮತ್ತು ಗ್ರಾಮಗಳಲ್ಲಿ ಸಾಹಿತ್ಯ ಸಮ್ಮೇಳನ ಮಾಡಲು ಅಧ್ಯಕ್ಷರಿಗೆ ಆರ್ಥಿಕ ಹೊರೆ ಬೀಳುತ್ತಿದ್ದು ಇದರಿಂದ ಕನ್ನಡ ಕಟ್ಟಲು ಯಾರೂ ಮುಂದೆ ಬರದಂತಹ ವಾತಾವರಣ ನಿರ್ಮಾಣವಾಗುತ್ತಿದೆ ಎಂದಿದ್ದಾರೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಕನಿಷ್ಟ ವಲಯ ಸಮ್ಮೆಳನಗಳಿಗೆ ಒಂದು ಲಕ್ಷ ಮತ್ತು ಗ್ರಾಮ ಘಟಕ ಸಮ್ಮೇಳನಗಳಿಗೆ ಕನಿಷ್ಟ 50 ಸಾವಿರ ರೂ. ಪರಿಷತ್‌ ಅಥವಾ ಸರ್ಕಾರದಿಂದ ಸಹಾಯ ಕಲ್ಪಿಸಬೇಕು ಎಂದು ಮನವಿ ಮಾಡಿದ್ದಾರೆ.

ಜಿಲ್ಲಾ ಕಸಾಪ ಅಧ್ಯಕ್ಷ ಸುರೇಶ ಚನ್ನಶೆಟ್ಟಿ, ಕೋಶಾಧ್ಯಕ್ಷ ವೀರಶೆಟ್ಟಿ ಚನ್ನಶೆಟ್ಟಿ, ಅಶೋಕ ದೀಡಗೆ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next