Advertisement

ಪ್ರೀತಿಯ ರಾಗ ಹಾಡಲು ಮನಸು ಹಾತೊರೆದಿದೆ…

07:07 PM Aug 12, 2019 | mahesh |

ಲವ್‌ ಅಟ್‌ ಫ‌ಸ್ಟ್‌ ಸೈಟ್‌ ಅಂತಾರಲ್ಲ ಅದಾಗಿತ್ತು. ಈ ಲವ್‌ ಅನ್ನೋದು ಒಂಥರಾ ಮಾಯೆ, ಹೊತ್ತು ಗೊತ್ತಿಲ್ಲದೆ ಜಾತಿ-ಧರ್ಮ ನೋಡದೆ ಹುಟ್ಟೋ ಪ್ರೇಮಲೋಕ. ನಿನ್ನ ಮಿನುಗುವ ಕಣ್ಣು, ಎದೆಯಲ್ಲಿ ಕಚಗುಳಿ ಇಡುವ ನಗು, ಕಣ್ಣಿನ ಮೇಲಿನ ಕಾಡಿಗೆ ಕಪ್ಪು ನೋಡಿದೊಡನೆ ಮನವೆಲ್ಲ ಕೆಂಪಾಗಿತ್ತು.

Advertisement

ಮೂನ್‌ಲೈಟ್‌ ಸುಂದರಿ ನೀನು. ನೈದಿಲೆಯನ್ನು ಕಿವಿಗೆ ತಾಕಿಸಿ,ಹಂಸ ಪಕ್ಷಿಯ ರೆಕ್ಕೆಯು ನಿನ್ನ ಕಣ್ಣ ಮೇಲೆ ಕೂತು ಆ ಕಪ್ಪು ಮುತ್ತುಗಳನ್ನು ಕಾಯುತಿದೆ. ನೀಳ ಕೇಶವು ಕಗ್ಗತ್ತಲನ್ನು ಹೊದ್ದಂತಿದೆ. ಅಂದು ಕಾಲೇಜು ಕಾರಿಡಾರ್‌ನಲ್ಲಿ ಒಂದು ಕೈಲಿ ಎರಡು ಪುಸ್ತಕಳನ್ನು ಎದೆಗವಚಿಕೊಂಡು, ಮತ್ತೂಂದು ಕೈಲಿ ಕ್ಯಾಡ್ಬರಿ ಚಾಕ್ಲೆಟ್‌ನೊಂದಿಗೆ ಪ್ರತ್ಯಕ್ಷವಾಗಿದ್ದೆ ಜ್ಞಾಪಕ ಇದೆಯಾ? ಆ ಕ್ಷಣವೇ ನಾನು ಔಟ್‌ ಆಫ್ ಫೋಕಸ್‌.

ಲವ್‌ ಅಟ್‌ ಫ‌ಸ್ಟ್‌ ಸೈಟ್‌ ಅಂತಾರಲ್ಲ ಅದಾಗಿತ್ತು. ನನಗೆ ! ಈ ಲವ್‌ ಅನ್ನೋದು ಒಂಥರಾ ಮಾಯೆ, ಹೊತ್ತು ಗೊತ್ತಿಲ್ಲದೆ ಜಾತಿ-ಧರ್ಮ ನೋಡದೆ ಹುಟ್ಟೋ ಪ್ರೇಮಲೋಕ. ನಿನ್ನ ಮಿನುಗುವ ಕಣ್ಣು, ಎದೆಯಲ್ಲಿ ಕಚಗುಳಿ ಇಡುವ ನಗು, ಕಣ್ಣಿನ ಮೇಲಿನ ಕಾಡಿಗೆ ಕಪ್ಪು ನೋಡಿದೊಡನೆ ಮನವೆಲ್ಲ ಕೆಂಪಾಗಿತ್ತು.

ಅಂದು ಶುರುವಾದ ಮೊದಲ ಪ್ರೀತಿಯ ಕನವರಿಕೆ ಫೇಸ್‌ಬುಕ್‌ ವಾಲ್‌ನಲ್ಲಿ, ವಾಟ್ಸಾಪ್‌ ಸ್ಟೇಟಸ್‌ನಲ್ಲಿ ಕಾಣಿಸಿಕೊಳ್ತು. ಫ್ರೆಂಡ್ಸ್‌ ಅಂತೂ “ಏನ್‌ ಮಗಾ.. ಲವ್ವಲ್ಲಿ ಬಿದ್ದಾ? ಪಾರ್ಟಿ ಯಾವಾಗ?’ ಅನ್ನೋಕೆ ಶುರು ಮಾಡಿದ್ರು. ಏನ್‌ ಮಾಡೋದು, ಈ ವಯಸ್ಸೇ ಹಾಗೇ, ಮನಸು ನಿನ್ನನ್ನೇ ಬಯಸಿದೆ. ನೀನು ನನ್ನ ಕಾಲೇಜಿನಲ್ಲೆ, ನನ್ನ ಪಕ್ಕದ ತರಗತಿಯಲ್ಲೇ ಓದುತ್ತಿದ್ದದು ನನ್ನ ಅದೃಷ್ಟ. ಅಷ್ಟೇನೂ ಹರಸಾಹಸ ಪಡದೇ, ಮನಸ್ಸು ಹಂಬಲಿಸಿದಾಗಲೆಲ್ಲಾ ಕತ್ತನ್ನು ತಿರುಗಿಸಿ ಹಾಗೆ ನೋಡಿ ಖುಷಿ ಪಡುಕೊಳ್ಳುತ್ತಿದ್ದೆ. ದಿನ ಕಳೆದಂತೆಲ್ಲ ಪ್ರೀತಿಯ ಹಸಿವು ಜೋರಾಯಿತು. ಮನಸ್ಸಿನಲ್ಲಿ ಬಚ್ಚಿಡಲಾಗದ ಪ್ರೀತಿಯನ್ನು ನಿನ್ನ ಮುಂದೆ ತೋಡಿಕೊಳ್ಳಲು ನಿರ್ಧರಿಸಿದೆ. ಸಾಹಸವನ್ನು ತೆಗೆದುಕೊಂಡೆ. ಆದರೆ ಹೇಗೆ ಹೇಳ್ಳೋದು? ಒಂದು ವೇಳೆ ಒಪ್ಪಲಿಲ್ಲವಾದರೆ..? ಮನದ ಮೂಲೇಲಿ ಒಂದಿಷ್ಟು ಭಯ ಶುರುವಾಗಿತ್ತು. ಅಂತೂ ಹಾಗೋ, ಹೀಗೋ ಮಾಡಿ ಒಂದಿನ ನೀನು ಸ್ಕೂಟಿ ಪಾರ್ಕ್‌ ಮಾಡಿ ಕಾಲೇಜ್‌ ಕಾರಿಡಾರ್‌ನಲ್ಲಿ ಬರುವಾಗ, ಅದೇ ಜಾಗ; ಮೊದಲು ನಿನ್ನ ನೋಡಿದ ಜಾಗದಲ್ಲಿ ನನ್ನ ಮನಸ್ಸಿನ ಮಾತುಗಳನ್ನು ಪದಗಳಾಗಿ ಪೋಣಿಸಿ ಗೀಚಿದ ಒಲನೋಲೆ ಜೊತೆಗೊಂದು ಕ್ಯಾಡ್ಬರಿ ಹಿಡಿದು ನಿಂತಿದ್ದೆ.

ಎದೆ ಬಡಿತ ಜೋರಾಗಿ ನನಗೇ ಕೇಳಿಸುತ್ತಿತ್ತು. ಹತ್ತಿರ ಬಂದೆ, ಇನ್ನೂ ಹತ್ತಿರ ಬಂದೆ. ಇನ್ನೇನು ಒಲವಿನೋಲೆ ನಿನ್ನ ಕೈಗಿಡಲು ಎಕ್ಸ್‌ಕ್ಯೂಸ್‌ ಮಿ.. ಅನ್ನಬೇಕು! ಅಷ್ಟರಲ್ಲಿ ನಿನ್ನ ಸ್ನೇಹಿತೆ ಕೂಗಿದ್ದಕ್ಕೆ ತಿರುಗಿದೆ, ಅವಳು ಓಡೋಡಿ ಬಂದಳು. ಅಷ್ಟೆ..! ನನ್ನ ಪ್ರಯತ್ನ ಮತ್ತೆ ಫೇಲ್‌.

Advertisement

ನಿನ್‌ ಜೊತೆಗ್‌ ಯಾರಾದ್ರು ಇದ್ರೆ, ನನ್‌ ನೋಡಿದ್ರೂ ನೋಡ್ದಗ್‌ ಇರುತ್ತಿದ್ದ ನೀನು, ಅಂದು ಮಾತ್ರ ಒಂದೆರಡು ಸಾರಿ ಹಿಂದೆ ತಿರುಗಿ ಲುಕ್‌ ಕೊಟ್ಟಿದ್ದೆ. ತದನಂತರ ಹೀಗೆ ಮೂರ್ನಾಲ್ಕು ತಿಂಗಳು ಕಣ್ಣಲ್ಲೇ ಪ್ರೀತಿಸಿದ್ದೆ. ತರ್ಲೆ ಗೆಳೆಯರ ಮಾತ್‌ ಕೇಳ್ಕೊಂಡು, ಕೈಲಿ ಗುಲಾಬಿ ಮತ್ತೆ ಕ್ಯಾಡ್ಬರಿ ಚಾಕ್ಲೇಟ್‌ ಇಟ್ಕೊಂಡ್‌ ಪ್ರೇಮಗೀತೆ ಹಾಡಲು ಪ್ರಯತ್ನ ಮಾಡಿದ್ದೆ.

ಇದೆಲ್ಲಾ ನಡೆದು ಈಗ ಎರಡು ವರ್ಷಗಳೇ ಕಳೆದುಹೋಗಿವೆ! ಅದೇನೋ.. ಈ ಮುಂಗಾರು ಹೊತ್ತಲ್ಲಿ ನಿನ್ನ ಆ ಪ್ರೀತಿಯ ಗುಂಗಲಿ ಮರೆತ ಮನಸು ಹಾತೊರೆಯುತ್ತಿದೆ ಪ್ರೀತಿಯ ರಾಗ ಹಾಡಲು..

ಲಕ್ಷ್ಮೀಕಾಂತ್‌.ಎಲ್‌

Advertisement

Udayavani is now on Telegram. Click here to join our channel and stay updated with the latest news.

Next