Advertisement

ಸುಬ್ರಹ್ಮಣ್ಯ ರೋಡ್‌ ರೈಲು ನಿಲ್ದಾಣಕ್ಕೆ ಶೀಘ್ರ ಹೊಸ ರೂಪ

03:30 PM Feb 26, 2024 | Team Udayavani |

ಸುಬ್ರಹ್ಮಣ್ಯ: ಪುಣ್ಯ ಕ್ಷೇತ್ರಗಳಾದ ಕುಕ್ಕೆ ಸುಬ್ರಹ್ಮಣ್ಯ ಹಾಗೂ ಧರ್ಮ ಸ್ಥಳ ಕ್ಷೇತ್ರಗಳಿಗೆ ಸಂಪರ್ಕಿಸುವ ರಾಜ್ಯ ಹೆದ್ದಾ ರಿಯಲ್ಲಿ ಬರುವ ಸುಬ್ರಹ್ಮಣ್ಯ ರೋಡ್‌ ರೈಲು ನಿಲ್ದಾಣದಲ್ಲಿ ಅಮೃತ ಭಾರತ ನಿಲ್ದಾಣ ಯೋಜನೆಯಡಿ ಅಭಿವೃದ್ಧಿ ಕೆಲಸಗಳು
ನಡೆಯಲಿದೆ.

Advertisement

ಇಲ್ಲಿ ಸುಮಾರು 23.73 ಕೋಟಿ ರೂ. ವೆಚ್ಚದಲ್ಲಿ ಇಲ್ಲಿ ವಿವಿಧ ಅಭಿವೃದ್ಧಿ ಕೆಲಸಗಳು ನಡೆಯಲಿದ್ದು, ಮೂಲ ಸೌಕರ್ಯ ವ್ಯವಸ್ಥೆ
ಗಳು ಸೇರಿದಂತೆ ಪ್ರಯಾಣಿಕರಿಗೆ ಬೇಕಾಗುವಂತಹ ಅಗತ್ಯ ವ್ಯವಸ್ಥೆಗಳು ನಡೆಯಲಿದೆ. ಇಷ್ಟೂ ಅಲ್ಲದೆ ದ್ವಿಚಕ್ರ, ನಾಲ್ಕು ಚಕ್ರ
ವಾಹನಗಳಿಗೆ ಪಾರ್ಕಿಂಗ್‌ ವ್ಯವಸ್ಥೆ, ಸುಸ ಜ್ಜಿತ ಶೆಲ್ಟರ್‌ ವ್ಯವಸ್ಥೆ, ನಿಲ್ದಾಣದ ಕಟ್ಟಡ ಗಳ ಅಭಿವೃದ್ಧಿ, ಕುಡಿಯುವ ನೀರಿನ ವ್ಯವಸ್ಥೆ, ಸೇರಿ ದಂತೆ ಅಭಿವೃದ್ಧಿ ಕೆಲಸಗಳು ನಡೆಯಲಿದೆ.

ಸುಬ್ರಹ್ಮಣ್ಯ ರೋಡ್‌ ರೈಲು ನಿಲ್ದಾಣದಲ್ಲಿ ದಿನಂಪ್ರತಿ ವಿವಿಧ ಭಾಗಗಳಿಗೆ ತೆರಳುವ ರೈಲುಗಳಿಗೆ ನಿಲುಗಡೆ ನೀಡಲಾಗುತ್ತಿದ್ದು,
ದಿನನಿತ್ಯ ಸಾವಿರಾರು ಪ್ರಯಾಣಿಕರು ಇಲ್ಲಿಂದ ಪ್ರಯಾಣ ಬೆಳೆಸುತ್ತಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳಕ್ಕೆ ಆಗಮಿಸುವ
ಹಲವಾರು ಭಕ್ತರು ರೈಲು ಮೂಲಕ ಇಲ್ಲಿಗೆ ಆಗಮಿಸಿ ಕ್ಷೇತ್ರ ಸಂದರ್ಶನ ನಡೆಸುತ್ತಾರೆ. ದಕ್ಷಿಣ ಕನ್ನಡ ಜಿಲ್ಲೆಯ ಹೆಚ್ಚು ಪ್ರಯಾಣಿಕರು ಸಂದರ್ಶಿಸುವ ರೈಲು ನಿಲ್ದಾಣಗಳಲ್ಲಿ ಸುಬ್ರಹ್ಮಣ್ಯ ರೋಡ್‌ ರೈಲು ನಿಲ್ದಾಣವೂ
ಒಂದು.

ಅಭಿವೃದ್ಧಿ ಕಾರ್ಯ ಈಗಾಗಲೇ ಇಲ್ಲಿ ಎರಡು ಪ್ಲಾಟ್‌  ಫಾರ್ಮ್ ವ್ಯವಸ್ಥೆಗಳಿದ್ದು, ಎರಡನೇಪ್ಲಾಟ್‌ ಫಾರ್ಮ್ಗೆ ತೆರಳಲು ಮೇಲ್ಸೇತುವೆ ಯನ್ನೂ ನಿರ್ಮಿಸಲಾಗಿದೆ. ಪ್ರಯಾಣಿಕರು ಕುಳಿತುಕೊಳ್ಳಲು ವ್ಯವಸ್ಥೆಯನ್ನೂ ಮಾಡ
ಲಾಗಿದೆ. ಇದಲ್ಲದೆ ಕೆಲವು ಅಗತ್ಯ ಅಭಿವೃದ್ಧಿ
ಕೆಲಸಗಳು ನಡೆದಿವೆ.

ಸುಬ್ರಹ್ಮಣ್ಯ ರೋಡ್‌ ರೈಲು ನಿಲ್ದಾಣದಲ್ಲಿ ಅಮೃತ ಭಾರತ ಯೋಜನೆಯಡಿ ನಡೆಯುವ ಕಾಮಗಾರಿ ಹಾಗೂ ನೆಟ್ಟಣ ಸಮೀಪದ ಬಜಕೆರೆ ರೈಲು ನಿಲ್ದಾಣದ ಬಳಿ ಓವರ್‌ ಬ್ರಿಡ್ಜ್ ನಿರ್ಮಾಣಕ್ಕೆ ಫೆ.26ರಂದು ಶಂಕುಸ್ಥಾಪನೆ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ 12.30ಕ್ಕೆ ಪ್ರಧಾನಿ ನರೇಂದ್ರ ಮೋದಿ ವೀಡಿಯೋ ಕಾನ್ಫರೆನ್ಸ್‌ ಮೂಲಕ ಶಂಕುಸ್ಥಾಪನೆ ನೆರವೇರಿಸಿದರು. ರೈಲು ನಿಲ್ದಾಣದಲ್ಲಿ
ನಡೆಯುವ ಕಾರ್ಯಕ್ರಮದಲ್ಲಿ ಸಂಸದ ನಳಿನ್‌ ಕುಮಾರ್‌ ಕಟೀಲು, ಶಾಸಕಿ ಭಾಗೀರಥಿ ಮುರುಳ್ಯ
ಮತ್ತಿತರರು ಭಾಗವಹಿಸಿದ್ದರ$

Advertisement
Advertisement

Udayavani is now on Telegram. Click here to join our channel and stay updated with the latest news.

Next