Advertisement

ಕುರುಬ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಶಾಸಕರಿಂದ ಭೂಮಿಪೂಜೆ

12:50 PM Apr 17, 2017 | |

ಮೈಸೂರು: ಅಂದಾಜು 2.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಕುರುಬ ಸಮಾಜದ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಶಾಸಕ ಎಂ.ಕೆ.ಸೋಮಶೇಖರ್‌ ಭೂಮಿ ಪೂಜೆ ನೆರವೇರಿಸಿದರು.

Advertisement

ನಗರದ ಎನ್‌.ಆರ್‌ ಮೊಹಲ್ಲಾದಲ್ಲಿರುವ ಕುರುಬರ ಶ್ರೀಬೀರೇಶ್ವರ ಶ್ರೀರಾಮ ಮಂದಿರ ಟ್ರಸ್ಟ್‌ನ ಆವರಣದಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯ ಕ್ರಮದಲ್ಲಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಸಮುದಾಯ ಭವನ ನಿರ್ಮಾಣಕ್ಕಾಗಿ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಿಸಲು ಸಚಿವ ತನ್ವೀರ್‌ ಅವರೊಂದಿಗೆ ನಾನು ಸಹಕರಿಸುತ್ತೇನೆ. ಸಮುದಾಯ ಭವನ ನಿರ್ಮಾಣಕ್ಕಾಗಿ ಬೇಕಾದ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಹೇಳಿದರು.

ಈ ಭಾಗದ ಕುರುಬ ಸಮಾಜದವರಿಗೆ ಸಮುದಾಯ ಭವನ ನಿರ್ಮಾಣದಿಂದ ಅನುಕೂಲವಾಗಲಿದೆ. 90-80 ಅಡಿ ವಿಸ್ತೀರ್ಣದಲ್ಲಿ ಸಮುದಾಯ ಭ ವನ ನಿರ್ಮಿಸಲಾಗುತ್ತಿದ್ದು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಈಗಾಗಲೇ 30 ಲಕ್ಷ ರೂ. ಬಿಡುಗಡೆಯಾಗಿದೆ. ಮತ್ತಷ್ಟು ಅನುದಾನ ಬಿಡುಗಡೆಗಾಗಿ ಸ್ಥಳೀಯ ಶಾಸಕ ಸಚಿವ ತನ್ವೀರ್‌ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಮಾಜ ಕಲ್ಯಾಣ ಇಲಾಖೆ ಸಚಿವರಿಗೆ ಮನವಿ ಸಲ್ಲಿಸಿರುವುದಾಗಿ ತಿಳಿಸಿದರು.

ಮೈಸೂರು ಮಹಾ ನಗರಪಾಲಿಕೆ ಉಪ ಮೇಯರ್‌ ರತ್ನ ಲಕ್ಷ್ಮಣ್‌, ಜಿಪಂ ಮಾಜಿ ಅಧ್ಯಕ್ಷ ಕೆ.ಮರೀಗೌಡ, ಟ್ರಸ್ಟ್‌ನ ಗೌರವ ಅಧ್ಯಕ್ಷ ಕುನ್ನಯ್ಯ, ಅಧ್ಯಕ್ಷ ಎಂ.ಎನ್‌.ಮಹದೇವ್‌, ಕಾರ್ಯಾಧ್ಯಕ್ಷ ಚುಂಚಯ್ಯ, ಉಪಾಧ್ಯಕ್ಷ ಆರ್‌.ಮಹದೇವ, ಗೌರವ ಕಾರ್ಯದರ್ಶಿ ಕೆಂಪೇಗೌಡ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next