ನ್ಯೂಯಾರ್ಕ್: ನಾಸಾ ಮತ್ತು ಐರೋಪ್ಯ ಬಾಹ್ಯಾಕಾಶ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಜಸ್ಟಿನ್ ಪ್ಯಾಕ್‌ಶಾ ಮತ್ತು ಜೇಮಿ ಫೇಸರ್ ಎಂಬಿಬ್ಬರು ಅನ್ವೇಷಕರು ಅಂಟಾರ್ಕ್ಟಿಕಾದುದ್ದಕ್ಕೂ 3600 ಕಿ.ಮೀ. ದೂರ ಟ್ರೆಕಿಂಗ್ ಕೈಗೊಳ್ಳಲು ನಿರ್ಧರಿಸಿದ್ದಾರೆ.
ಮೈನಸ್ 55 ಡಿಗ್ರಿ ಸೆಲ್ಸಿಯಸ್ ತಾಪಮಾನವಿರುವ ಪ್ರದೇಶದಲ್ಲಿ ಈ ಕೈಟ್‌ಸರ್ಫ್ ಟ್ರೆಕ್ ವೇಳೆ ಇವರಿಬ್ಬರೂ ಕಾಲ್ನಡಿಗೆಯಲ್ಲೇ ಸಾಗಲು ಮುಂದಾಗಿದ್ದಾರೆ. ಈ ಮೂಲಕ ತಮ್ಮ ಶರೀರ ಮತ್ತು ಮನಸ್ಸಿನ ಮೇಲೆ ವಿಪರೀತ ಒತ್ತಡ ಹೇರಿಕೊಳ್ಳಲಿದ್ದಾರೆ.
ಒಟ್ಟಾರೆ 80 ದಿನಗಳ ಕಾಲ ಇವರ ಪ್ರಯಾಣ ಮುಂದುವರಿಯಲಿದ್ದು, ಇಂಥ ವಿಪರೀತ ಹವಾಮಾನದಲ್ಲಿ ದೇಹವು ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಕಂಡುಕೊಳ್ಳುವುದು ಕೂಡ ಅವರ ಉದ್ದೇಶವಾಗಿದೆ. ಏಕೆಂದರೆ, ಮಂಗಳನಂತಹ ಗ್ರಹಗಳಲ್ಲೂ ಇದೇ ರೀತಿಯ ತಾಪಮಾನ ಇರುವ ಕಾರಣ, ಮಂಗಳನ ಕುರಿತ ಅಧ್ಯಯನಕ್ಕೂ ಇದು ನೆರವಾಗಲಿದೆ.
ಇವಿಷ್ಟೇ ಅಲ್ಲದೆ, ಅವರು ಅಂಟಾರ್ಕ್ಟಿಕಾದಲ್ಲಿ ಆಗುತ್ತಿರುವ ಬದಲಾವಣೆಗಳ ಬಗ್ಗೆಯೂ ಗಮನ ಹರಿಸಲಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಅಂಟಾರ್ಕ್ಟಿಕಾದಲ್ಲಿ ನೀರ್ಗಲ್ಲುಗಳು ಒಂದೇ ಸಮನೆ ಕರಗಲಾರಂಭಿಸಿವೆ. ಹೀಗಾಗಿ, ಇಲ್ಲಿನ ವಿಕಿರಣ ಮಟ್ಟ, ಗಾಳಿಯ ವೇಗ, ಮೇಲ್ಮೈ ಪ್ರದೇಶದಲ್ಲಿ ಗಾಳಿಯ ದಿಕ್ಕು, ಮೇಲ್ಮೈನಲ್ಲಿ ತಾಪಮಾನ ಮತ್ತಿತರ ಅಂಶಗಳ ಬಗ್ಗೆಯೂ ಅವರು ಮಾಹಿತಿ ಸಂಗ್ರಹಿಸಲಿದ್ದಾರೆ.
ಎಷ್ಟು ದಿನ ಟ್ರೆಕಿಂಗ್?- 80
ಎಷ್ಟು ದೂರ?- 3,600 ಕಿ.ಮೀ.