Advertisement

ಕಲಬುರಗಿ ವಿಮಾನ ನಿಲ್ದಾಣಕ್ಕೆ ಸೇವಾಲಾಲ್‌ ಹೆಸರಿಡಲು ಮನವಿ

04:49 PM Nov 24, 2019 | Suhan S |

ಗದಗ: ಕಲಬುರಗಿಯಲ್ಲಿ ವಿಮಾನ ನಿಲ್ದಾಣ ಉದ್ಘಾಟನೆ ನೆಪದಲ್ಲಿ ಸಂತ ಸೇವಾಲಾಲ್‌ ಹಾಗೂ ಮರಿಯಮ್ಮ ದೇವಸ್ಥಾನ ನೆಲಸಮಗೊಳಿಸಿರುವುದನ್ನು ವಿರೋಧಿಸಿ ನಗರದಲ್ಲಿ ಬಂಜಾರ ಸಮುದಾಯವರು ಪ್ರತಿಭಟನೆ ನಡೆಸಿದರು.

Advertisement

ನಗರದ ಮಹಾತ್ಮಗಾಂಧಿ ವೃತ್ತದಲ್ಲಿ ಶನಿವಾರ ಸೇರಿದ ಬಂಜಾರ ಸಮುದಾಯದ ಸದಸ್ಯರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈಗಾಗಲೇ ಉದ್ಘಾಟನೆಯಾಗಿರುವ ಕಲಬುರಗಿ ವಿಮಾನ ನಿಲ್ದಾಣಕ್ಕೆ ಸಂತ ಸೇವಾಲಾಲ್‌ ಮಹಾರಾಜರ ಹೆಸರನ್ನು ನಾಮಕರಣ ಮಾಡಬೇಕು. ವಿಮಾನ ನಿಲ್ದಾಣ ಕಾಮಗಾರಿಗೆ ಜಮೀನು ನೀಡಿದ ರೈತ ಕುಟುಂಬಸ್ಥರಿಗೆ ಉದ್ಯೋಗದ ಅವಕಾಶ ನೀಡಬೇಕು. ವಿಮಾನ ನಿಲ್ದಾಣದ ನಿರ್ಮಾಣಕ್ಕೆ ಸ್ವಾ ಧೀನಪಡಿಸಿಕೊಂಡ ಭೂಮಿಗೆ ಏಕರೂಪ ದರ ನಿಗದಿಗೊಳಿಸಬೇಕು ಎಂದು ಆಗ್ರಹಿಸಿದರು.

ಗೋರ್‌ ಸೇನಾ ಕರ್ನಾಟಕದ ರಾಜ್ಯಾಧ್ಯಕ್ಷ ರವಿಕಾಂತ್‌ ಅಂಗಡಿ ಮಾತನಾಡಿ, ಕಲಬುರಗಿ ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ 569 ಎಕರೆ ಭೂಮಿಯನ್ನು ಸರ್ಕಾರ ಸ್ವಾಧಿಧೀನ ಪಡಿಸಿಕೊಂಡಿದೆ. ಸ್ವಾ ಧೀನಕ್ಕೆ ಒಳಪಟ್ಟ ಜಮೀನಿನಲ್ಲಿ ಶೇ. 70ರಷ್ಟು ಭೂಮಿ ಬಂಜಾರ ಸಮುದಾಯದವರಿಗೆ ಸೇರಿದೆ. ಈ ಭಾಗದ ಆರು ತಾಂಡಾದವರು ವಿಮಾನ ನಿಲ್ದಾಣ ಕಾಮಗಾರಿಗೆ ಭೂಮಿ ಕಳೆದುಕೊಂಡಿದ್ದಾರೆ. ಭೂಸ್ವಾಧೀನದ ವೇಳೆ ಯಾವುದೇ ಕಾರಣಕ್ಕೂ ದೇವಸ್ಥಾನಕ್ಕೆ ಧಕ್ಕೆ ಬಾರದಂತೆ ನೋಡಿಕೊಳ್ಳುವುದಾಗಿ ಮೌಖೀಕ ಭರವಸೆ ನೀಡಿ, ಇದೀಗ ಉದ್ಘಾಟನೆಗೂ ಮುನ್ನವೇ ನೆಲಸಮಗೊಳಿಸಿದ್ದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಮಾಜದ ಪ್ರಮುಖರಾದ ಚಂದ್ರಕಾಂತ ಚವ್ಹಾಣ, ಎನ್‌.ಟಿ. ಪೂಜಾರ, ವೆಂಕಟೇಶ ಜಾಧವ್‌, ಗೋವಿಂದ ಡೋಣಿ, ಅನಿಲ್‌ ಕಾರಬಾರಿ, ಪಾಂಡು ಚವ್ಹಾಣ, ಎನ್‌.ವಿ. ರಾಠೊಡ, ಶ್ರೀನಿವಾಸ ಮಾಳಗಿಮನಿ, ಧರ್ಮ ರಾಠೊಡ, ಸುರೇಶ ಚವ್ಹಾಣ, ಸುರೇಶ ಪವಾರ, ಶಂಕರ ನಾಯಕ, ವಿನೋಧ ಮುರಡಿ, ಹಾಲುಮತ ಮಹಾಸಭಾದ ಜಿಲ್ಲಾ ಗೌರವಾಧ್ಯಕ್ಷ ನಾಗರಾಜ ಮೆಣಸಗಿ, ಜಿಲ್ಲಾಧ್ಯಕ್ಷ ಪ್ರಲ್ಹಾದ ಹೊಸಳ್ಳಿ, ಡಿ.ಎಲ್‌. ಗುರಿಕಾರ, ಮಲ್ಲೇಶಪ್ಪ ಕೊಣ್ಣೂರ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next