Advertisement

ಮಾಧ್ಯಮಗಳ ಬಗ್ಗೆ ಎಚ್ಚರ ವಹಿಸಿ: ಯಡಿಯೂರಪ್ಪ

11:55 AM Jan 31, 2017 | Team Udayavani |

ಬೆಂಗಳೂರು: ರಾಜಕೀಯ ಪಕ್ಷಗಳ ಮುಖಂಡರ ಮೇಲೆ ಮಾಧ್ಯಮಗಳ ಕಣ್ಣು ಸದಾ ಇರುವುದರಿಂದ ಹೇಳಿಕೆ ಗಳನ್ನು ನೀಡುವ ವೇಳೆ ಮೈಯೆಲ್ಲಾ ಕಣ್ಣಾಗಿರಬೇಕು ಎಂದು ಪಕ್ಷದ ವಕ್ತಾರರಿಗೆ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿ ಯೂರಪ್ಪ ಕಿವಿಮಾತು ಹೇಳಿದರು. ನಗರದ ಮಲ್ಲೇಶ್ವರದಲ್ಲಿನ ಬಿಜೆಪಿ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಮಾಧ್ಯಮ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. 

Advertisement

ಮಾಧ್ಯಮಗಳಿಂದ ಪಕ್ಷಗಳ ಪ್ರತಿಷ್ಠೆ ಹೆಚ್ಚಿಸಲು ಅಥವಾ ಕುಗ್ಗಿಸಲು ಸಾಧ್ಯ. ಸುದ್ದಿಯ ಪೈಪೋಟಿಯಲ್ಲಿರುವ ಮಾಧ್ಯಮಗಳು ನಮ್ಮ ಲೋಪದೋ ಷಗಳನ್ನು ಪತ್ತೆ ಹಚ್ಚಿ ಬಹುಬೇಗ ಜನರಿಗೆ ತಲುಪಿಸುವ ಕೆಲಸ ನಿರ್ವಹಿಸುತ್ತಿವೆ. ಹೀಗಾಗಿ ಜನಪ್ರಿಯತೆಗೆ ಕಟ್ಟುಬಿದ್ದು ಮಾಧ್ಯಮಗಳಿಗೆ ಆಹಾರವಾಗದಂತೆ ಎಚ್ಚರವಹಿಸುವುದರ ಜತೆಗೆ ಸಾರ್ವಜ ನಿಕವಾಗಿ ಯಾವುದೇ ಹೇಳಿಕೆಗಳನ್ನು ನೀಡುವಾಗ ಮೈಯೆಲ್ಲಾ ಕಣ್ಣಾಗಿಸಿ ಕೊಂಡಿರಬೇಕು ಎಂದರು.

ಮಾಧ್ಯಮಗಳಲ್ಲಿ ಪಕ್ಷದ ಬಗ್ಗೆ ನಕಾರಾತ್ಮಕ ವಿಚಾರಗಳು ಬರದಂತೆ ಎಚ್ಚರ ವಹಿಸಬೇಕು. ಒಂದು ಬಾರಿ ನಕರಾತ್ಮಕ ವಿಚಾರ ಬಂದಲ್ಲಿ ಅದನ್ನು ಸರಿಪಡಿಸಲು ಹರಸಾಹಸ ಮಾಡಬೇಕಾಗುತ್ತದೆ. ಇದನ್ನು ಎಲ್ಲರೂ ಗಮನದಲ್ಲಿ ಇಟ್ಟುಕೊಳ್ಳಬೇಕು. ಮಾಧ್ಯಮಗಳಿಗೆ ಆಹಾರವಾಗದಂತೆ ಕಾರ್ಯ ನಿರ್ವಹಿಸಬೇಕಾಗಿದ್ದು, ಪಕ್ಷದ ಹೊಣೆಗಾರಿಕೆಗಳನ್ನು ಜವಾ ಬ್ದಾರಿಯುತವಾಗಿ ನಿಭಾಯಿಸಬೇಕು ಎಂದು ಹೇಳಿದರು. 

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾಧ್ಯಮ ಕ್ಷೇತ್ರವು ನಾಲ್ಕನೆ ಅಂಗವಾಗಿದ್ದು, ಯಾರೊಬ್ಬರೂ ಅದರ ಬಗ್ಗೆ ಉದಾಸೀನ ತೋರಬಾರದು. ಪ್ರಚಲಿತ ವಿದ್ಯಮಾನಗಳ ಬಗ್ಗೆ ಕಣ್ಣಿಟ್ಟು ಸದಾ ಜಾಗೃತರಾಗಬೇಕು. ಕಾರ್ಯಕರ್ತರು, ಮುಖಂಡರು ಯಾವುದೇ ರೀತಿಯ ಪ್ರತಿಕ್ರಿಯೆ ನೀಡುವ ಮುನ್ನ ಕೇಂದ್ರ ಕಚೇರಿಗೆ ಮಾಹಿತಿ ಒದಗಿಸಬೇಕು ಎಂದು ತಿಳಿಸಿದರು.

ಮಾಜಿ ಸಚಿವ ಸುರೇಶ್‌ ಕುಮಾರ್‌ ಮಾತನಾಡಿ, ಚುನಾವಣೆಗೆ 400 ದಿನಗಳ ಮಾತ್ರ ಇದೆ. ಈ ಹಂತದಲ್ಲಿ ನಾವಾಡುವ ಪ್ರತಿಮಾತು, ಹೇಳಿಕೆಗಳು ಪಕ್ಷದ ಬಲವರ್ಧನೆಗೆ ಪೂರಕ ವಾಗಿರಬೇಕು. ಯಾರೂ, ಯಾವುದೇ ಕಾರಣಕ್ಕೂ ಬಹಿರಂಗವಾಗಿ ಪಕ್ಷದ ವಿರುದ್ಧ ಮಾತನಾಡಬಾರದು.

Advertisement

ಮಾಧ್ಯಮಗಳ ಮುಂದೆ ಯಾವ ರೀತಿ ಹೇಳಿಕೆಗಳನ್ನು ನೀಡಬೇಕು ಎಂಬುದರ ಬಗ್ಗೆ ತಿಳಿಸಿಕೊಡುವುದಕ್ಕಾಗಿಯೇ ಮಾಧ್ಯಮ ಕಾರ್ಯಾಗಾರ ಆಯೋಜಿ ಸಲಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಸಂಸದೆ ಶೋಭಾ ಕರಂದ್ಲಾಜೆ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಎನ್‌.ರವಿಕುಮಾರ್‌, ಬಿಜೆಪಿ ರಾಜ್ಯ ವಕ್ತಾರ ಗೋ.ಮಧುಸೂದನ್‌, ಶಾಸಕ ಅರವಿಂದ ಲಿಂಬಾವಳಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next