Advertisement
ಯೋಗದಿಂದ ಪ್ರಯೋಜನವೇನು ಎಂದು ತಿಳಿಯಬೇಕಾದರೆ, ದೇಹದಲ್ಲಿ ಸ್ವಲ್ಪ ನೋವುಗಳು ಸೇರಿಕೊಳ್ಳಬೇಕು. ನಿಮಗೆ ಕಾಲು ನೋವೋ, ಮಂಡಿನೋವೋ ಬಂದು, ಒಂದಷ್ಟು ಪೇನ್ ಕಿಲ್ಲರ್ ಮಾತ್ರೆಗಳನ್ನು ತಗೊಂಡು ಸುಸ್ತಾಗಿದ್ದರೆ, ಆಗಷ್ಟೇ ಯೋಗ ಮಾಡುವ ಮನಸ್ಸಾಗುತ್ತದೆ. ಈಗಂತೂ ವರ್ಕ್ ಫ್ರಂ ಹೋಂ ಜಮಾನ. ಲ್ಯಾಪ್ ಟಾಪ್‌ನ ಎಷ್ಟು ಹುಶಾರಾಗಿ ನೋಡಿಕೊಳ್ಳುತ್ತೀವೋ, ಅಷ್ಟೇ ಜೋಪಾನವಾಗಿ ಕಾಲು, ಬೆನ್ನನ್ನೂ ನೋಡಿಕೊಳ್ಳಬೇಕು. ಇದಕ್ಕಾಗಿ ಒಂದಷ್ಟು ಆಸನಗಳು ಇವೆ. ಅವನ್ನು ಪ್ರತಿದಿನ ಅರ್ಧ ಗಂಟೆ ಮಾಡಿದರೂ ಸಾಕು; ಹಲವು ಬಗೆಯ ನೋವುಗಳಿಂದ ಪಾರಾಗಬಹುದು.
ಕಾಲಿಗೆ ಬಲ ಬರುತ್ತದೆ. ಇದಾದ ನಂತರ, ಕಾಲನ್ನು ಹಾಗೇ ಉದ್ದಕ್ಕೆ ಚಾಚಿ, ಎರಡೂ ಕೈಗಳಿಂದ ಆಯಾ ಕಾಲಿನ ಬೆರಳುಗಳನ್ನು ಮಟ್ಟುವ ಪ್ರಯತ್ನ ಮಾಡಿದರೆ ವಾರ್ಮಪ್ ಆಗುತ್ತದೆ. ನಂತರ ವಜ್ರಾಸನ ಹಾಕಿದರೆ, ಮಂಡಿಗೆ ಮತ್ತು ಸೊಂಟಕ್ಕೂ ಶಕ್ತಿ ಬರುತ್ತದೆ. ಇದೂ ಒಂದೇ ದಿನಕ್ಕೆ ಆಗುವ ಕೆಲಸವಲ್ಲ. ಸತತ ಅಭ್ಯಾಸದಿಂದಷ್ಟೇ ಇದನ್ನು
ಒಲಿಸಿಕೊಳ್ಳಲು ಸಾಧ್ಯ. ಬೆನ್ನನ್ನು ಸಂಪೂರ್ಣ ಬಾಗಿಸಿ ಹಣೆಯನ್ನು ಮಂಡಿಯ ಮುಂದಿನ ನೆಲಕ್ಕೆ ಮುಟ್ಟಿಸಿದರೆ ಬೊಜ್ಜು ಕೂಡ ಇಳಿಯುತ್ತದೆ. ಇದಾದ ಮೇಲೆ, ನೇರವಾಗಿ ನಿಂತು ಬಲಗಾಲನ್ನು ಮುಂದಡಿ ಇಡಿ. ಹಾಗೇ ಬೆಂಡ್ ಮಾಡಿ, ಎಡಗಾಲನ್ನು ಹಿಂದಕ್ಕೆ ಚಾಚಿ. ಎರಡೂ ಕೈಯನ್ನು ನಮಸ್ಕಾರದ ರೀತಿ ಮಾಡಿದರೆ ಇದೇ ವೀರಭದ್ರಾಸನ. ಇದರೊಂದಿಗೆ ವೀರಾಸನ, ತಾಡಾಸನಗಳನ್ನು ಮಾಡಿದರೆ ಒಳಿತು. ಭಸ್ಕಿ ಹೊಡೆಯೋದೇ ಆದರೆ, ಕಾಲಿನ ಎಲ್ಲ ಮಾಂಸಖಂಡಗಳಿಗೂ
ಲಾಭವಾಗುತ್ತದೆ.