Advertisement

ಮಿಡತೆಗಳನ್ನು ಓಡಿಸಲು ಡ್ರಮ್‌, ಡ್ರೋನ್‌, ಡಿಜೆ ಸೌಂಡ್‌!

03:41 PM May 31, 2020 | sudhir |

ಅಹಮದಾಬಾದ್‌: ಮಧ್ಯಪ್ರಾಚ್ಯದಿಂದ ಬಂದ ಮಿಡತೆಗಳು ಮಧ್ಯಪ್ರದೇಶ, ಪಂಜಾಬ್‌, ರಾಜಸ್ಥಾನದ ಹಲವು ಭಾಗಗಳಲ್ಲಿ ಸಮಸ್ಯೆಗಳನ್ನು ಸೃಷ್ಟಿಸುತ್ತಿರುವಂತೆ ರೈತರು ಅವುಗಳನ್ನು ಓಡಿಸಲು ಹರಸಾಹಸ ಮಾಡುತ್ತಿದ್ದಾರೆ. ತನ್ನದೇ ಭಾರದಷ್ಟು ಆಹಾರವನ್ನು ಅದು ತಿನ್ನುತ್ತಿದ್ದು ಕಂಡ ಕಂಡದ್ದನ್ನೆಲ್ಲ ತಿಂದು ತೇಗುತ್ತಿವೆ. ಇದರಿಂದ ಆಹಾರ ಧಾನ್ಯಗಳು, ಸೊಪ್ಪುಗಳು ನಾಮಾವಶೇಷವಾಗುತ್ತಿವೆ.

Advertisement

ಸದ್ಯ ರಾಜಸ್ಥಾನ, ಗುಜರಾತ್‌, ಪಂಜಾಬ್‌, ಮಹಾರಾಷ್ಟ್ರ ಸರಕಾರಗಳು ಏರಿಯಲ್‌ ಸ್ಪ್ರೆಯರ್‌ಗಳಲ್ಲಿ ಸ್ಪ್ರೆ ಮಾಡುತ್ತಿವೆ. ಇವುಗಳನ್ನು ಬ್ರಿಟನ್‌ನಿಂದ ಆಮದು ಮಾಡಿಕೊಳ್ಳಲಾಗಿದೆ. ಇವುಗಳಿಗೆ ರಾಸಾಯನಿಕಗಳನ್ನು ಹಾಕಿ ಮಿಡತೆಗಳು ಅತಿ ಹೆಚ್ಚಿರುವ ಪ್ರದೇಶಗಳಲ್ಲಿ ಸ್ಪ್ರೆ ಮಾಡಲಾಗುತ್ತಿದೆ.

ಇದರೊಂದಿಗೆ ರೈತರು ಸ್ಥಳೀಯವಾಗಿ ಮಿಡತೆಗಳನ್ನು ಓಡಿಸುವ ಉಪಾಯಗಳನ್ನು ಮಾಡುತ್ತಿದ್ದಾರೆ. ಮೊಬೈಲ್‌ನಲ್ಲಿ ಡಿಜೆ ಸೌಂಡ್‌ಗಳನ್ನು ಹಾಕುವದು, ಡ್ರಮ್‌ ಬಾರಿಸುವುದು, ದೊಡ್ಡದಾದ ಶಬ್ದ ಬರುವಂತಹ ವ್ಯವಸ್ಥೆ ಇತ್ಯಾದಿಗಳನ್ನು ಮಾಡುತ್ತಿದ್ದಾರೆ.

ಉತ್ತರ ಪ್ರದೇಶದ ಪೊಲೀಸರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಅವರು ವಾಹನವೊಂದರಲ್ಲಿ ಡಿಜೆ ವ್ಯವಸ್ಥೆ, ದೊಡ್ಡ ಸ್ಪೀಕರ್‌ ಇಟ್ಟುಕೊಂಡು ಊರಿಡೀ ತಿರುಗುತ್ತಿದ್ದಾರೆ. ಊರಿನಲ್ಲೂ ಕೋಟಿಗಟ್ಟಲೆ ಮಿಡತೆಗಳು ಮನೆಗಳ ಮೇಲೆ ಬಂದು ಕೂತಿದ್ದು ಅವುಗಳನ್ನು ಓಡಿಸುವುದು ಹರಸಾಹಸವಾಗಿದೆ.

ಇದು ಹೊಸತಲ್ಲ
ಭಾರತದ ರೈತರ ಪಾಲಿಗೆ ಮಿಡತೆಗಳ ದಾಳಿಗೆ ಹೊಸತೇನಲ್ಲ. 1812ರಿಂದ 1889ರವರೆಎ ಮತ್ತು 1896ರಿಂದ 1897ರವರೆಗೆ ಇಂತಹ ಮಿಡತೆಗಳ ದಾಳಿಯಾಗಿವೆಯಂತೆ. 1926ರಿಂದ 1931ರ ಅವಿಯಲ್ಲೂ ಇದು ಆಗಿತ್ತು. ಆ ಸಂದರ್ಭದಲ್ಲಿ 2 ಕೋಟಿ ರೂ. ಮೊತ್ತದ ಬೆಳೆ ಹಾನಿಯಾಗಿತ್ತು. 1939ರಲ್ಲಿ ಮಿಡತೆ ದಾಳಿ ಎಚ್ಚರಿಕೆ ಸಂಸ್ಥೆಯನ್ನೂ ದಿಲ್ಲಿಯಲ್ಲಿ ಸ್ಥಾಪಿಸಲಾಗಿತ್ತು. ಇದರು ಉಪ ಕಚೇರಿ ಕರಾಚಿಯಲ್ಲಿತ್ತು. ಇನ್ನು ರಾಜಸ್ಥಾನ, ಹರಿಯಾಣಾ, ಗುಜರಾತ್‌ಗಳಲ್ಲಿ ದೊಡ್ಡ ಮರುಭೂಮಿಯ ಮಿಡತೆಗಳು ಸಾಮಾನ್ಯವಾಗಿ ಕಂಡುಬರುತ್ತವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next