Advertisement

“ಅಪರಾಧ ತಡೆಗಟ್ಟಲು ಪೊಲೀಸ್‌ ಇಲಾಖೆಯೊಂದಿಗೆ ಸಹಕರಿಸಿ’

11:50 PM Mar 27, 2019 | sudhir |

ಮಲ್ಪೆ: ಮೂಡಬೆಟ್ಟು ಯುವಕ ಮಂಡಲ ಮತ್ತು ನವಸುಮ ರಂಗಮಂಚ ಕೊಡವೂರು ಇದರ ಜಂಟಿ ಆಶ್ರಯದಲ್ಲಿ ಪೊಲೀಸ್‌ ಜನಸಂಪರ್ಕ ಸಭೆ ಮಾ. 24ರಂದು ಮೂಡಬೆಟ್ಟು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರಗಿತು.

Advertisement

ಮಲ್ಪೆ ಪೊಲೀಸ್‌ ಠಾಣೆಯ ಪ್ರೊಬೆಷನರಿ ಉಪ ನಿರೀಕ್ಷಕಿ ಸುಮಾ ಆಚಾರ್ಯ ಮಾತನಾಡಿ, ಅಪರಾಧ ತಡೆಯಬೇಕಾದರೆ ಪೊಲೀಸ್‌ ಇಲಾಖೆಯೊಂದಿಗೆ ಗ್ರಾಮಸ್ಥರ ಸಹಕಾರ ಅಗತ್ಯ. ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ, ಅಪರಾಧ ಹಾಗೂ ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿರುವ ಬಗ್ಗೆ ಸುಳಿವು ಸಿಕ್ಕಲ್ಲಿ ಠಾಣೆಗೆ ಮಾಹಿತಿ ನೀಡಿದರೆ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಸಾಧ್ಯ. ಆಂಗಡಿ ಮುಂಗಟ್ಟುಗಳಲ್ಲಿ ಸಿಸಿಟಿವಿಗಳನ್ನು ಅಳವಡಿಸಿಕೊಂಡಲ್ಲಿ ಕಳ್ಳತನ ತಡೆಯಲು ಸಾಧ್ಯವಾಗಬಹುದು, ಈಗಾಗಲೇ ಚುನಾವಣ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಕಾನೂನು ಉಲ್ಲಂಘನೆ ಮಾಡಬಾರದು ಎಂದರು.

ಯುವಕ ಮಂಡಲದ ಅಧ್ಯಕ್ಷ ಜಗದೀಶ್‌ ಅಮೀನ್‌ ಅಧ್ಯಕ್ಷತೆ ವಹಿಸಿದ್ದರು. ಪೊಲೀಸ್‌ ಸಹಾಯಕ ಉಪ ನಿರೀಕ್ಷಕರಾದ ಜನಾರ್ದನ್‌, ಸುಧಾಕರ, ನಗರಸಭಾ ಸದಸ್ಯ ಶ್ರೀಶ ಕೊಡವೂರು ಆದಿವುಡುಪಿ ಮಸೀದಿಯ ಮುಖ್ಯಸ್ಥ ಪೀರು ಸಾಹೇಬ್‌, ಕಲ್ಮಾಡಿ ಸ್ಟೆಲ್ಲಾ ಮೇರೀಸ್‌ ಚರ್ಚ್‌ನ ಸಂಜಯ ಮೆಲ್ವಿನ್‌ ಅಂದ್ರಾದೆ, ಶಾಲಾ ಮುಖ್ಯೋಪಾಧ್ಯಾಯಿನಿ ಸುಲೋಚನಾ ಬಾಯಿ ಉಪಸ್ಥಿತರಿದ್ದರು.

ಜಗದೀಶ್‌ ಅಮೀನ್‌ ಸ್ವಾಗತಿದರು. ಕಾರ್ಯದರ್ಶಿ ಫಾರೂಕ್‌ ಅಹಮದ್‌ ನಿರೂಪಿಸಿ, ನವಸುಮದ ಅಧ್ಯಕ್ಷ ಬಾಲಕೃಷ್ಣ ಕೊಡವೂರು ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next