Advertisement

ಟ್ರಾಫಿಕ್‌ ಜಾಮ್‌ ತಪ್ಪಿಸಲು ಶಾಲೆ, ಕಾರ್ಖಾನೆ ವೇಳೆ ಬದಲಾವಣೆ ಪರಿಹಾರ ಅಲ್ಲ: ಸರ್ಕಾರ

10:45 AM Dec 19, 2023 | Team Udayavani |

ಬೆಂಗಳೂರು: ಬೆಂಗಳೂರಿನಲ್ಲಿ ವಾಹನ ದಟ್ಟಣೆಗೆ ಶಾಲಾ ವಾಹನಗಳು ಕಾರಣವಲ್ಲ. ಆದ್ದರಿಂದ ವಾಹನ ದಟ್ಟಣೆ ನಿಯಂತ್ರಿ ಸಲು ಶಾಲಾ ಸಮಯವನ್ನು ಬದಲಾಯಿಸು ವುದು ಸಮಂಜಸ ವಲ್ಲ. ಅದೇ ರೀತಿ ಬೆಳಗ್ಗೆ ಬೇಗ ಶಾಲೆ ಆರಂಭಿಸಿದರೆ ಮಕ್ಕಳ ನಿದ್ರೆ, ಊಟೋಪಚಾರದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.

Advertisement

ನಗರದ ವಾಹನ ದಟ್ಟಣೆ ನಿಯಂತ್ರಿ ಸುವು ದಕ್ಕಾಗಿ ಶಾಲಾ- ಕಾಲೇಜು ಮತ್ತು ಕಾರ್ಖಾ    ನೆಗಳ ಸಮಯ ಬ ಲಾವಣೆ ಕುರಿತು ಸಮಾ ಲೋಚನೆ ನಡೆಸಿ ವರದಿ ನೀಡುವಂತೆ ರಾಜ್ಯ ಹೈಕೋರ್ಟ್‌ ಸರ್ಕಾರಕ್ಕೆ ಸೂಚನೆ ನೀಡಿತ್ತು. ಈ ಹಿನ್ನೆಲೆ ಶಾಲಾ ಶಿಕ್ಷಣ ಇಲಾಖೆ, ಕಾರ್ಮಿಕ ಇಲಾಖೆಗಳ ಜೊತೆ ಚರ್ಚೆ ನಡೆಸಿರುವ ರಾಜ್ಯ ಸರ್ಕಾರವು ಕಾರ್ಖನೆ ಮತ್ತು ಶಾಲಾ ಸಮಯ ಬದಲಾವಣೆ ಮಾಡಲಾಗದು ಎಂದು ವರದಿ ಸಲ್ಲಿಸಿದೆ. ಆದರೆ ಇನ್ನಿತರ ಕೆಲ ಕ್ರಮಗಳನ್ನು ಕೈಗೊಳ್ಳಬಹುದು ಎಂದು ವರದಿಯಲ್ಲಿ ಉಲ್ಲೇಖೀಸಿದೆ.

ಬಳ್ಳಾರಿ ರಸ್ತೆ ಅಗಲೀಕರಣ ಕುರಿತು ಸಮರ್ಪಣಾ ಸಾಂಸ್ಕೃತಿಕ ಮತ್ತು ಸಮಾಜ ಸೇವಾ ಸಂಘಟನೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸೋಮವಾರ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ. ವರಾಲೆ ಮತ್ತು ನ್ಯಾ. ಕೃಷ್ಣ ಎಸ್‌. ದೀಕ್ಷಿತ್‌ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿತು. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಧಾನ ಕಾರ್ಯ ದರ್ಶಿ ರಿತೇಶ್‌ ಸಿಂಗ್‌ ಸರ್ಕಾರದ ಪರವಾಗಿ ನ್ಯಾಯಪೀಠಕ್ಕೆ ವರದಿ ಸಲ್ಲಿಸಿದರು.

ಸರ್ಕಾರ ಸಲ್ಲಿಸಿದ ವರದಿಯನ್ನು ದಾಖಲಿಸಿ ಕೊಂಡ ನ್ಯಾಯಾಲಯದ ಪ್ರಕರಣದ ವಿಚಾರಣೆಯನ್ನು ಜನವರಿ ಮೊದಲ ವಾರಕ್ಕೆ ಮುಂದೂಡಿದೆ. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಜಿ.ಆರ್‌. ಮೋಹನ್‌ ಅವರು, ರೇಸ್‌ ಕೋರ್ಸ್‌ ರಸ್ತೆಯಲ್ಲಿ ಅಲ್ಲಲ್ಲಿ ದ್ವೀಪಗಳನ್ನು ನಿರ್ಮಾಣ ಮಾಡುತ್ತಿರುವುದರಿಂದ ವಾಹನ ಸಂಚಾ ರಕ್ಕೆ ಮೊದಲಿಗಿಂತಲೂ ಹೆಚ್ಚಿನ ಅಡಚಣೆಯಾಗುತ್ತಿದೆ ಎಂದರು. ಜತೆಗೆ ಅರ್ಜಿದಾರರ ಪರವಾಗಿ ಸುಗಮ ವಾಹನ ಸಂಚಾ ರಕ್ಕೆ ಏನೇನು ಕ್ರಮ ಕೈಗೊಳ್ಳ ಬಹುದು ಎಂಬ ಬಗ್ಗೆ ನ್ಯಾಯಾ ಲಯಕ್ಕೆ ಸಲಹೆಗಳ ಪಟ್ಟಿಯನ್ನು ಸಲ್ಲಿಕೆ ಮಾಡಿದರು.

ಶಾಲಾ ಸಮಯ ಬದಲಾವಣೆ ಅವಶ್ಯವಿಲ್ಲ:  ಬೆಂಗಳೂರು ನಗರದ ಸಂಚಾರ ದಟ್ಟಣೆಯು ಕೇವಲ ಶಾಲಾ ಸಮಯದ ದೆಸೆಯಿಂದ ಆಗಿರುವುದಿಲ್ಲ. ಸಂಚಾರ ದಟ್ಟಣೆಯ ಒಟ್ಟಾರೆ ವಾಹನಗಳ ಬಳಕೆ ವಿವಿಧ ಕಚೇರಿಗಳು, ಕೈಗಾರಿಕೆಗಳು ಮತ್ತು ಇತರೆ ಸ್ಥಳಗಳಿಗೆ ತೆರಳುವ ವಾಹನಗಳ ಕಾರಣದಿಂದ ಉಂಟಾ ಗುತ್ತದೆ. ಸಂಚಾರ ದಟ್ಟಣೆಯನ್ನು ತಪ್ಪಿಸಲು ಶಾಲೆಗಳನ್ನು ಬೇಗನೆ ಆರಂಭಿಸಿದಲ್ಲಿ ಮಕ್ಕಳಿಗೆ ನಿದ್ರೆ, ಊಟ, ಉಪಚಾರ ನಿಗದಿತ ಸಮಯಕ್ಕೆ ಆಗದೆ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ. ಒಟ್ಟಾರೆ ಅಭಿಪ್ರಾಯದಂತೆ ಪಸ್ತುತ ಇರುವ ಶಾಲಾ ಸಮಯ ದಲ್ಲಿಯಾವುದೇ ಬದಲಾವಣೆ ಅವಶ್ಯವಿಲ್ಲ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶ್‌ ಕುಮಾರ್‌ ಸಿಂಗ್‌ ವರದಿಯಲ್ಲಿ ತಿಳಿಸಿದ್ದಾರೆ.

Advertisement

ಕಾರ್ಖಾನೆಗಳಿಂದ ವಾಹನ ದಟ್ಟಣೆ ಆಗುತ್ತಿಲ್ಲ: ಇಲಾಖೆ:

ಇನ್ನು ಕಾರ್ಮಿಕ ಇಲಾಖೆ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್‌ ಮೊಹ್ಸಿನ್‌, ಕಾರ್ಮಿಕ ಇಲಾಖೆ ಸಂಬಂಧಿಸಿದ ಕೈಗಾರಿಕಾ ಸಂಘಟನೆಗಳ ಜತೆ ಸಮಾಲೋಚನೆ ನಡೆಸಿದ್ದು, ಕಾರ್ಖಾನೆಗಳಿಂದ ವಾಹನ ದಟ್ಟಣೆ ಆಗುತ್ತಿಲ್ಲ, ಹೀಗಾಗಿ ಕಾರ್ಖಾನೆಗಳ ಸಮಯ ಬದಲಾವಣೆ ಅಗತ್ಯವಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಕಾರ್ಖಾನೆಗಳ ಸಿಬ್ಬಂದಿ ಬೆಳಗ್ಗೆ 6 ರಿಂದ 9ರ ನಡುವೆ ಪ್ರಯಾಣ ಮಾಡುತ್ತಾರೆ ಮತ್ತು ಸಂಜೆಯ ನಂತರ ದುಡಿಯುವ ಸ್ಥಳದಿಂದ ಮನೆಗೆ ಮರಳು ತ್ತಾರೆ ಎಂದು ಹೇಳಿದ್ದಾರೆ. ಇನ್ನು ಹೊರ ವರ್ತುಲ ರಸ್ತೆಯಲ್ಲಿ ಕಾರ್ಯನಿರ್ವಹಣೆ ಮಾಡುತ್ತಿರುವ ಕಂಪನಿಗಳು ಹೈಬ್ರೈಡ್‌ ಮಾದರಿಯನ್ನು ಅಳವಡಿಸಿಕೊಳ್ಳುವುದನ್ನು ಉತ್ತೇಜಿಸಬೇಕು. ಇದರಿಂದ ರಸ್ತೆಗಳಲ್ಲಿನ ಸಂಚಾರ ದಟ್ಟಣೆ ತಗ್ಗುವುದಲ್ಲದೆ, ಕಚೇರಿಗೆ ಆಗಮಿಸುವ ಸಿಬ್ಬಂದಿ ಸಂಖ್ಯೆ ಇಳಿಮುಖ ವಾಗುತ್ತದೆ ಎಂದು ವರದಿಯಲ್ಲಿ ಉಲ್ಲೇಖೀಸಿದ್ದಾರೆ.

ವರದಿಯಲ್ಲಿನ ಸಲಹೆಗಳು :

  • ಶಾಲೆಗಳ ಸುತ್ತ-ಮುತ್ತ ವಾಹನ ದಟ್ಟಣೆ ತಪ್ಪಿಸಲು ಶಾಲಾ ಆವರಣದ ಒಳಗೆ ನಿಲುಗಡೆಗೆ ಅವಕಾಶ ಒದಗಿಸಲು ಸಾಧ್ಯವಿರದೇ ಇರುವ ಶಾಲೆಗಳ ಸಮೀಪದಲ್ಲಿ ನಿರ್ದಿಷ್ಟ ಪಿಕ್‌ ಅಪ್‌ ಮತ್ತು ಡ್ರಾಪ್‌ ಪಾಯಿಂಟ್‌ಗಳನ್ನು ನಿಗದಿ ಮಾಡುವುದು.
  • ಶಾಲೆಗಳ ಸಮೀಪದಲ್ಲಿ ಶಾಲಾ ಆರಂಭ ಮತ್ತು ಮುಕ್ತಾಯದ ಸಮಯದಲ್ಲಿ ಟ್ರಾಫಿಕ್‌ ಪೊಲೀಸ್‌ ಸಿಬ್ಬಂದಿ ಮತ್ತು ಸ್ವ ಇಚ್ಛೆಯುಳ್ಳ ಪಾಲಕರನ್ನು ಟ್ರಾಫಿಕ್‌ ವಾರ್ಡನ್‌ ಗಳಾಗಿ ನೇಮಿಸಿ ಸುಗಮ ಸಂಚಾರಕ್ಕೆ ಕ್ರಮ ಕೈಗೊಳ್ಳುವುದು, ಹೆಚ್ಚಿನ ವಾಹನ ದಟ್ಟಣೆ ಉಂಟಾಗುವ ಶಾಲೆಗಳ ಸುತ್ತಮುತ್ತ ಲೋಕಲ್‌ ಏರಿಯಾ ಟ್ರಾಫಿಕ್‌ ಮ್ಯಾನೇಜ್ಮೆಂಟ್‌ ಪ್ಲಾನ್‌ ಜಾರಿಗೊಳಿಸುವುದು.
  • ಮಕ್ಕಳನ್ನು ಕರೆತರಲು ಪೋಷಕರು ಸ್ವಂತ ವಾಹನ ಗಳನ್ನು ಬಳಸುವುದನ್ನು ತಪ್ಪಿಸಲು 3-4 ಶಾಲೆಗಳಿಗೆ ಒಟ್ಟುಗೂಡಿ ಮಕ್ಕಳಿಗೆ ಮತ್ತು ಶಿಕ್ಷಕರಿಗೆ ಬಿಎಂಟಿಸಿ ಯಿಂದ ಬಸ್‌ ಸೇವೆ ಒದಗಿಸುವ ಕ್ರಮ ಕೈಗೊಳ್ಳಬಹುದು.
Advertisement

Udayavani is now on Telegram. Click here to join our channel and stay updated with the latest news.

Next