Advertisement

ಅಷ್ಟಬಂಧ ದೇವರಿಗೆ, ಭಕ್ತಿಬಂಧ ಮನುಷ್ಯರಿಗೆ : ಪೇಜಾವರ ಶ್ರೀ

01:00 AM Mar 13, 2019 | Harsha Rao |

ಕಾಸರಗೋಡು: ದೇವರು ಸರ್ವಾಂತರ್ಯಾಮಿ. ಗಾಳಿ ಎಲ್ಲೆಡೆ ಇದ್ದರೂ ಬೀಸಣಿಕೆ ಬೀಸಿದಾಗ ಗಾಳಿಯ ಅನುಭವ ವಾಗುವಂತೆ, ದೇವರನ್ನು ವಿಶೇಷವಾಗಿ ಪೂಜಿಸಿದಾಗ ಹೊಸ ಚೈತನ್ಯದ ಅನುಭವವಾಗುವುದು. ಅಷ್ಟಬಂಧ ದೇವರಿಗೆ, ಭಕ್ತಿಬಂಧ ಮನುಷ್ಯರಿಗೆ. ಭಕ್ತರಲ್ಲಿ ಭಕ್ತಿ ಮತ್ತಷ್ಟು ಉದ್ದೀಪನವಾಗಬೇಕು. ಭಕ್ತಿಯ ವೃದ್ಧಿಯೇ ಬ್ರಹ್ಮಕಲಶೋತ್ಸವದ ಉದ್ದೇಶವಾಗಿರಬೇಕು ಎಂದು ಪೇಜಾವರ ಮಠಾಧೀಶರಾದ ಪರಮಪೂಜ್ಯ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರು ಹೇಳಿದರು.

Advertisement

ಕಾಸರಗೋಡು ನಗರದ ಇತಿಹಾಸ ಪ್ರಸಿದ್ಧವಾದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಪುನ:ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ಆಯೋಜಿಸಿದ ಧಾರ್ಮಿಕ ಸಭೆಯಲ್ಲಿ ಸ್ವಾಮೀಜಿ ಆಶೀರ್ವಚನವಿತ್ತರು.
ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ರಾಮಪ್ರಸಾದ್‌ ಅಧ್ಯಕ್ಷತೆ ವಹಿಸಿದರು. ಕೇರಳ ಕ್ಷೇತ್ರ ಸಂರಕ್ಷಣ ಸಮಿತಿ ರಾಜ್ಯ ಅಧ್ಯಕ್ಷ ಕೃಷ್ಣವರ್ಮ ರಾಜ ಅವರು “ಭಕ್ತಿ ಚತುರ್ಯುಗಗಳಲ್ಲಿ’ ಎಂಬ ವಿಷಯದ ಬಗ್ಗೆ ಮಾತನಾಡಿದರು. ಉಡುಪಿಯ ಪ್ರಸಾದ್‌ ನೇತ್ರಾಲಯದ ನಿರ್ದೇಶಕ ರಘುರಾಮ ರಾವ್‌ ಮುಖ್ಯ ಅತಿಥಿಯಾಗಿ ಭಾಗವಹಿಸಿದರು.

ಕಾರ್ಯಕ್ರಮದಲ್ಲಿ ಕುತ್ಯಾಳ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಮೊಕ್ತೇಸರ ಕೆ.ಜಿ.ಶ್ಯಾನುಭೋಗ್‌, ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷ ಜಗದೀಶ್‌ ಕಾಮತ್‌, ಡಾ| ಸುರೇಶ್‌ ಮಲ್ಯ ಕಾಸರಗೋಡು, ನೆಲ್ಲಿಕುಂಜೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅಧ್ಯಕ್ಷ ಭಾಸ್ಕರನ್‌, ಕೇಳುಗುಡ್ಡೆ ಶ್ರೀ ಅಯ್ಯಪ್ಪ ಭಜನ ಮಂದಿರ ಅಧ್ಯಕ್ಷ ಶ್ರೀಧರ, ವಿಶ್ವ ಹಿಂದೂ ಪರಿಷದ್‌ ಕಾಸರಗೋಡು ಮುಖಂಡ ಎ.ಟಿ.ನಾೖಕ್‌, ಕಾಸರಗೋಡು ನಗರಸಭಾ ಸದಸ್ಯರಾದ ಜಯಪ್ರಕಾಶ್‌, ದಿನೇಶ್‌, ಅಣಂಗೂರು ಶ್ರೀ ಶಾರದಾ ಭಜನಾ ಮಂದಿರ ಅಧ್ಯಕ್ಷ ಸೂರಜ್‌ ಶೆಟ್ಟಿ, ನುಳ್ಳಿಪ್ಪಾಡಿ ಶ್ರೀ ಅಯ್ಯಪ್ಪ ಸ್ವಾಮಿ ಕ್ಷೇತ್ರ ಅಧ್ಯಕ್ಷ ಬಾಲಕೃಷ್ಣ  ಚೆನ್ನಿಕರೆ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ| ಅನಂತ ಕಾಮತ್‌, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸಿ.ವಿ. ಪೊದುವಾಳ್‌ ಉಪಸ್ಥಿತರಿದ್ದರು.

ಬ್ರಹ್ಮಕಲಶೋತ್ಸವ ಸಮಿತಿ ಜತೆ ಕಾರ್ಯದರ್ಶಿ ಬಾಲಕೃಷ್ಣ ನೆಲ್ಲಿಕುಂಜೆ ಸ್ವಾಗತಿಸಿದರು. ಜತೆ ಕಾರ್ಯದರ್ಶಿ ದಿನೇಶ್‌ ಬಂಬ್ರಾಣ ವಂದಿಸಿದರು. ಜೀರ್ಣೋದ್ಧಾರ ಸಮಿತಿ ಜತೆ ಕಾರ್ಯದರ್ಶಿ ಬ್ರಿಜೇಶ್‌ ತಾಳಿಪಡು³ ಕಾರ್ಯಕ್ರಮ ನಿರೂಪಿಸಿದರು.

ಪೂರ್ಣಕುಂಭ ಸ್ವಾಗತ 
ಶ್ರೀ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಚಿತ್ತೆ$çಸಿದ ಪೇಜಾವರ ಮಠಾಧೀಶರಾದ ಪರಮಪೂಜ್ಯ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರನ್ನು ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಯಿತು.

Advertisement

ಸಂಹಾಚಿರ ತತ್ವ ಕಲಶ ಪೂಜೆ 
ಮಾ. 12ರಂದು ಬೆಳಗ್ಗೆ ಗಣಪತಿ ಹೋಮ, ಅಂಕುರ ಪೂಜೆ, ಶಯ್ನಾ ಪೂಜೆ, ಸಂಹಾಚಿರ ತತ್ವ ಕಲಶ ಪೂಜೆ, ಸಂಹಾರ ತತ್ವಹೋಮ, ಸಂಹಾರ ತತ್ವ ಕಲಶಾಭಿಷೇಕ, ಜೀವ ಕಲಶ ಪೂಜೆ ಜೀವೋಧ್ವಾಸನೆ, ಜೀವ ಕಲಶ ಶಯ್ನಾಗಮನ, ಶಯನ, ವಿವಿಧ ಭಜನಾ ತಂಡಗಳಿಂದ ಭಜನೆ, ಸುಗಮ ಸಂಗೀತ ಹಾಗೂ ಭಕ್ತಿಗೀತೆ, ಮಧ್ಯಾಹ್ನ ಭಕ್ತಿಗಾನ ಸುಧಾ, ಸಂಜೆ ಧಾರ್ಮಿಕ ಸಭೆ, ರಾತ್ರಿ ಧ್ಯಾನಾಧಿವಾಸ, ಅಧಿವಾಸ ಹೋಮ, ಕುಂಭೇಶ ಕರ್ಕರಿ ಕಲಶ ಪೂಜೆ, ಮಂಡಲ ಪೂಜೆ, ಪ್ರಾಸಾದ ಶುದ್ಧಿ, ವಾಸ್ತು ಬಲಿ, ಪ್ರಾಸಾದ ಅಧಿವಾಸ, ಭಕ್ತಿ ಸಂಗೀತ ಸೌರಭ ನಡೆಯಿತು.

ಇಂದಿನ ಕಾರ್ಯಕ್ರಮ : ಬೆಳಗ್ಗೆ 5 ರಿಂದ ಗಣಪತಿ ಹೋಮ, ಅಧಿವಾಸ ಉದ್ಘಾಟನೆ, 7.10 ಕ್ಕೆ ಮೀನ ಲಗ್ನ ರೋಹಿಣಿ ನಕ್ಷತ್ರ ಶುಭ ಮುಹೂರ್ತದಲ್ಲಿ ಶ್ರೀ ಮಲ್ಲಿಕಾರ್ಜುನ ದೇವರ ಪುನ:ಪ್ರತಿಷ್ಠೆ, ಜೀವಕಲಶಾಭಿಷೇಕ, ಅಷ್ಟಬಂಧ ಲೇಪನ, ಶ್ರೀ ಗಣಪತಿ, ಶ್ರೀ ಶಾಸ್ತಾವು ಮತ್ತು ಶ್ರೀ ಸುಬ್ರಹ್ಮಣ್ಯ ದೇವರ ಬಿಂಬ ಪ್ರತಿಷ್ಠೆ, ಪ್ರತಿಷ್ಠಾ ಬಲಿ, 8 ರಿಂದ ವಿವಿಧ ಭಜನಾ ತಂಡಗಳಿಂದ ಭಜನೆ, 11.30 ಕ್ಕೆ ಯಕ್ಷಗಾನ ತಾಳಮದ್ದಳೆ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಸಂಜೆ 5.30ರಿಂದ ಧಾರ್ಮಿಕ ಸಭೆ, ರಾತ್ರಿ 8.30ರಿಂದ ಯಕ್ಷಗಾನ ಬಯಲಾಟ ಜರಗಲಿದೆ.

ಪರರ ಸೇವೆಯೇ ತಪ
 ಮಾನವರ ಕಷ್ಟ ಕೋಟಲೆಗಳನ್ನು ದೂರೀಕರಿಸುವ ಪ್ರಯತ್ನವೇ ದೇವರ ಪೂಜೆಯಾಗಬೇಕು. ಕಾರ್ಕೋಟಕ ವಿಷವನ್ನು ಕುಡಿದ ಶಿವನು ನೀಡಿದ ಸಂದೇಶವೇ ಇದು. ನಮ್ಮ ಸುಖಕ್ಕಾಗಿ ನಾವು ಪ್ರಯತ್ನಿಸಿದರೆ ಇದು ತಾಪ. ಅರ್ಥಾತ್‌ ತಾಪತ್ರಯ. ಆದರೆ ನಾನಾ ಜನರ ಸುಖಕ್ಕಾಗಿ ಪ್ರಯತ್ನಿಸಿದರೆ ಅದುವೇ ತಪ. ಅರ್ಥಾತ್‌ ತಪಸ್ಸು. ದೀನದಲಿತರ ಸೇವೆಯೇ ಮಾಧವ ಸೇವೆಯಾಗಲಿ. ಉತ್ತರೋತ್ತರ ಅಭಿವೃದ್ಧಿಯಾಗಲಿ. 
-ಪೇಜಾವರ ಶ್ರೀ ಉಡುಪಿ ಪೇಜಾವರ ಮಠ

Advertisement

Udayavani is now on Telegram. Click here to join our channel and stay updated with the latest news.

Next