Advertisement

Dabangg!; ಬಂಧನಕ್ಕಾಗಿ 4 ಮಹಡಿ ಏರಿ ವಾರ್ಡ್‌ಗೇ ನುಗ್ಗಿದ ಪೊಲೀಸ್‌ ಜೀಪ್‌!

12:16 AM May 24, 2024 | Team Udayavani |

ಡೆಹ್ರಾಡೂನ್‌: ಉತ್ತರಾ ಖಂಡದ ಹೃಷಿಕೇಶ ಏಮ್ಸ್‌ ಆಸ್ಪತ್ರೆಯ ವಾರ್ಡ್‌ನೊಳಗೆ “ದಬಾಂಗ್‌’ ಸಿನೆಮಾರೀತಿಯಲ್ಲಿ ಪೊಲೀಸರು ಜೀಪ್‌ ನುಗ್ಗಿ ಸಿದ್ದು, ರೋಗಿಗಳ ವಾರ್ಡ್‌ನಿಂದಲೇ ಆರೋಪಿಯನ್ನು ಬಂಧಿಸಿದ್ದಾರೆ. ಈ ವೀಡಿಯೋ ವೈರಲ್‌ ಆಗಿದೆ.

Advertisement

ಎಮರ್ಜೆನ್ಸಿ ವಾರ್ಡ್‌ಗೆ ಪೊಲೀಸರಿದ್ದ ಬಿಳಿ ಬಣ್ಣದ ಎಸ್‌ಯುವಿ ನುಗ್ಗಿ ಬರುತ್ತಿದ್ದಂತೆ ಸಿಬಂದಿ, ರೋಗಿಗಳು ಮಲಗಿದ್ದ ಸ್ಟ್ರೆಚರ್‌ಗಳನ್ನು ಸರಿಸಿ ದಾರಿ ಮಾಡಿಕೊಟ್ಟರು. ಪೊಲೀಸರು ನೆರೆದಿದ್ದ ಜನರನ್ನು ಸರಿಸಿ ಜೀಪ್‌ ಮುಂದೆ ಹೋಗಲು ಅನುವು ಮಾಡಿದ್ದಾರೆ.

ಆಸ್ಪತ್ರೆಯ ಆಪರೇಷನ್‌ ಥಿಯೇಟರ್‌ ಒಳಗೆ ಮಹಿಳಾ ವೈದ್ಯರಿಗೆ ಲೈಂಗಿಕ ಕಿರುಕುಳ ನೀಡಿ ಪೀಡಿಸುತ್ತಿದ್ದವನ ಸೆರೆಗಾಗಿ ಈ ಸಿನಿ ಮೀಯ ಕಾರ್ಯಾಚರಣೆ ನಡೆಸಲಾಗಿದೆ. ಆಸ್ಪತ್ರೆಯ ಶುಶ್ರೂಷಕ ಅಧಿಕಾರಿ ಸತೀಶ್‌ ಕುಮಾರ್‌ ಮಹಿಳಾ ವೈದ್ಯರಿಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ ಆರೋಪಿಸಲಾ ಗಿದೆ. ಆತನ ಬಂಧನಕ್ಕೆ ಆಗ್ರಹಿಸಿ ಆಸ್ಪತ್ರೆ ಹೊರಗೆ ತೀವ್ರ ಪ್ರತಿಭಟನೆ ನಡೆದಿತ್ತು.

4 ಮಹಡಿ ಏರಿದ ಜೀಪು!

ಪ್ರತಿಭಟನಕಾರರು ಆಕ್ರೋಶಭರಿತ ರಾಗಿದ್ದ ಕಾರಣ ಆರೋಪಿಯನ್ನು ಅವರ ನಡುವಿನಿಂದ ಕರೆದೊಯ್ಯುವ ಬದಲು ಪೊಲೀಸರು ಆಸ್ಪತ್ರೆ ಒಳಕ್ಕೆ ಜೀಪ್‌ ಸಹಿತ ಬಂದು ಬಂಧಿಸಿದ್ದಾರೆ. ಆರೋಪಿಯು ಎಮರ್ಜೆನ್ಸಿ ವಾರ್ಡ್‌ನಲ್ಲಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಇಳಿಜಾರು ಹಾದಿಯಲ್ಲಿ ಆಸ್ಪತ್ರೆಯ 4ನೇ ಮಹಡಿಗೆ ಜೀಪ್‌ ಮೂಲಕ ಸಾಗಿ ಆತನನ್ನು ಬಂಧಿಸಿದ್ದಾರೆ.

Advertisement

ಪೊಲೀಸರ ನಡೆಗೂ ಟೀಕೆ

ವೀಡಿಯೋ ವೈರಲ್‌ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಪೊಲೀಸರ ನಡೆಯ ಬಗ್ಗೆಯೂ ಟೀಕೆ ವ್ಯಕ್ತವಾಗಿದೆ. ತುರ್ತು ನಿಗಾ ವಿಭಾಗದ ಒಳಗೆ ಪೊಲೀಸ್‌ ಜೀಪ್‌ ಜತೆ ಬರುವ ಮೂಲಕ ಪೊಲೀಸರು ರೋಗಿಗಳಿಗೆ ಗಾಬರಿ ಉಂಟುಮಾಡಿದ್ದಾರೆ ಮತ್ತು ಅಲ್ಲಿದ್ದ ಎಲ್ಲರನ್ನೂ ಭಯಭೀತರನ್ನಾಗಿಸಿದ್ದಾರೆ ಎಂದು ಆಕ್ಷೇಪ ವ್ಯಕ್ತವಾಗಿದೆ.

 ಏನಿದು ಪ್ರಕರಣ ?

ಏಮ್ಸ್‌ ಶುಶ್ರೂಷಕ ಅಧಿಕಾರಿ ಸತೀಶ್‌ ಕುಮಾರ್‌ನಿಂದ ವೈದ್ಯೆಗೆ ಲೈಂಗಿಕ ಕಿರುಕುಳ

ಅನುಚಿತ ಸಂದೇಶ  ಕಳುಹಿಸಿ ಮಾನಸಿಕ ವಾಗಿಯೂ ಹಿಂಸಿಸಿದ ಆರೋಪ

ವೈದ್ಯೆ ದೂರು ನೀಡಿ 3 ದಿನ ಕಳೆದರೂ ಎಫ್ಐಆರ್‌ ದಾಖಲಾಗದ್ದಕ್ಕೆ ಆಕ್ರೋಶ

ಆರೋಪಿಯ ವಜಾ ಹಾಗೂ ಬಂಧನಕ್ಕೆ ಆಗ್ರಹಿಸಿ ರೆಸಿಡೆಂಟ್‌ ವೈದ್ಯರ ಪ್ರತಿಭಟನೆ

ಪ್ರತಿಭಟನೆ ಬಳಿಕ ಆರೋಪಿ ವಿರುದ್ಧ ಐಪಿಸಿ ಸೆಕ್ಷನ್‌ 354, 506ರಂತೆ ಕೇಸು ದಾಖಲು

ಪ್ರತಿಭಟನೆ ತೀವ್ರವಾಗಿದ್ದ ಕಾರಣ ಆಸ್ಪತ್ರೆ ಒಳಗೇ ಆರೋಪಿಯ ಬಂಧನಕ್ಕೆ ಚಿಂತನೆ

4ನೇ ಮಹಡಿಯಲ್ಲಿದ್ದ ಆರೋಪಿ ಸತೀಶ್‌ ಕುಮಾರ್‌ ಬಂಧನಕ್ಕೆ ಪೊಲೀಸರ ಸಾಹಸ

ಇಳಿಜಾರಿನಲ್ಲಿ ಜೀಪ್‌ ಚಲಾಯಿಸಿ ತುರ್ತು ವಿಭಾಗದಲ್ಲಿದ್ದ ಆರೋಪಿ ಸೆರೆ.

Advertisement

Udayavani is now on Telegram. Click here to join our channel and stay updated with the latest news.

Next