Advertisement

Dakshina Kannada ಮತದಾರರ ಪಟ್ಟಿಗೆ ಹೆಸರು ಸೇರಿಸಲು ಡಿ. 9 ಕೊನೇ ದಿನ

11:36 PM Dec 06, 2023 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತದಾರರ ನೋಂದಣಿ ಅಭಿಯಾನ ನಡೆಯುತ್ತಿದ್ದು 18 ವರ್ಷ ತುಂಬಿದ 25,045 ಮತದಾರರು ನೋಂದಣಿ ಮಾಡಿಕೊಂಡಿದ್ದಾರೆ. ಪ್ರಸ್ತುತ ಸಾಲಿನಲ್ಲಿ ಯುವ ಮತದಾರರ ಹೆಸರು ಸೇರ್ಪಡೆಗೆ ಡಿ. 9 ಕೊನೆಯ ದಿನವಾಗಿದೆ.

Advertisement

ಜಿಲ್ಲೆಯಲ್ಲಿ ದಾಖಲೆಗಳ ಪ್ರಕಾರ 18 ವರ್ಷ ತುಂಬಿದ 45,530 ಯುವ ಜನರಿದ್ದಾರೆ. ಈ ಪೈಕಿ 25,045 ಜನ ಮಾತ್ರ ನೋಂದಾಯಿಸಿದ್ದಾರೆ. 20,494 ಮಂದಿ ಬಾಕಿ ಇದ್ದು ಅವರನ್ನು ಸೇರಿಸಲು ಜಿಲ್ಲಾಡಳಿತ ಪ್ರಯತ್ನಿಸುತ್ತಿದೆ.
ಯುವ ಮತದಾರರಲ್ಲಿ 3,742 ಮಂದಿಯ ಫಾರ್ಮ್-6 ಅರ್ಜಿಗಳು ವಿಲೇವಾರಿಗೆ ಬಾಕಿ ಇವೆ. ಶೀಘ್ರದಲ್ಲಿ ಈ ಪ್ರಕ್ರಿಯೆ ಮುಗಿಸಿ ಅರ್ಹರನ್ನು ಮತದಾರರ ಪಟ್ಟಿಗೆ ಸೇರಿಸಲಾಗುವುದು.

ಚುನಾವಣ ಆಯೋಗವು ಪ್ರಸ್ತುತ ಪ್ರತೀ ವರ್ಷ ನಾಲ್ಕು ಅರ್ಹತಾ ದಿನಾಂಕವನ್ನು ಮತದಾರರು ಪಟ್ಟಿಗೆ ಹೆಸರು ಸೇರಿಸಲು ನಿಗದಿಪಡಿಸಿದೆ. ಪ್ರತೀ ವರ್ಷ ಜನವರಿ, ಎಪ್ರಿಲ್‌, ಜುಲೈ ಮತ್ತು ಅಕ್ಟೋಬರ್‌ 1ನೇ ತಾರೀಕಿಗೆ 18 ವರ್ಷ ತುಂಬಿದವರನ್ನು ಮತದಾರರ ಪಟ್ಟಿಗೆ ಸೇರಿಸಲು ಅವಕಾಶ ಮಾಡಲಾಗಿದೆ.

ಮತದಾರರು ಮೊಬೈಲ್‌ ಆ್ಯಪ್‌ VOTER HELPLINE ಮೂಲಕ ಫಾರ್ಮ್-6 ಸಲ್ಲಿಸಬಹುದು. voters.eci.gov.in ವೆಬ್‌ಸೈಟ್‌ ಮೂಲಕವೂ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಅರ್ಜಿ ಸಲ್ಲಿಸಬಹುದು ಅಥವಾ ತಮ್ಮ ಮತಗಟ್ಟೆಯ ಬೂತ್‌ ಮಟ್ಟದ ಅಧಿಕಾರಿಯವರಿಗೆ ಫಾರಂ-6 ಅರ್ಜಿ ಸಲ್ಲಿಸುವ ಮೂಲಕ ಮತದಾರರ ಪಟ್ಟಿಗೆ ಹೆಸರು ಸೇರಿಸಬಹುದು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next