Advertisement

ಸಾಧಿಸುವ ತುಡಿತ ಎಲ್ಲರಲ್ಲಿ ಹೆಚ್ಚಲಿ: ಸ್ವಾಮೀಜಿ

02:32 PM May 05, 2019 | pallavi |

ಹೊಳೆಆಲೂರ: ವಿದ್ಯಾರ್ಥಿ ತನ್ನ ಜೀವನದಲ್ಲಿ ಏನಾದರೂ ಸಾಧಿಸಬೇಕೆಂಬ ತುಡಿತ ಹೊಂದಿದ್ದರೆ ಯಾವುದು ಅಸಾಧ್ಯವಲ್ಲ. ಆದರೆ ಸ್ಪಷ್ಟ ಗುರಿ, ನಿರಂತರ ಹಾಗೂ ಪ್ರಾಮಾಣಿಕ ಪ್ರಯತ್ನಕ್ಕೆ ತಕ್ಕ ಆತ್ಮವಿಶ್ವಾಸ ಹೊಂದಿರಬೇಕು ಎಂದು ಯಚ್ಚರೇಶ್ವರ ಮಠದ ಯಚ್ಚರಸ್ವಾಮಿಗಳು ಹೇಳಿದರು.

Advertisement

ಗ್ರಾಮದ ಯಚ್ಚರೇಶ್ವರ ಮಠದಲ್ಲಿ ಶನಿವಾರ ನಡೆದ ಭಗವತ್‌ ಚಿಂತನಾ ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚ ಅಂಕ ಗಳಿಸಿದ 42 ಜನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಇಂದಿನ ತಂತ್ರಜ್ಞಾನದ ನೂತನ ಆವಿಸ್ಕಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಭಾವಿ ಬದುಕು ಸುಂದರವಾಗಿಸಿಕೊಳ್ಳುವ ಜೊತೆಗೆ ನಮ್ಮ ಕೌಟುಂಬಿಕ ವ್ಯವಸ್ಥೆ, ಸಾಮಾಜಿಕ ಬದ್ದತೆ, ಧಾರ್ಮಿಕ ಆಚಾರ-ವಿಚಾರಗಳಿಗೆ, ಗುರು-ಹಿರಿಯರಿಗೆ ಗೌರವ ನೀಡುವುದನ್ನು ಪಾಲಿಸಿದರೆ ಸಮಾಜದಲ್ಲಿ ಶಾಂತಿ, ನೆಮ್ಮದಿ ನೆಲೆಗೊಳ್ಳುತ್ತದೆ ಎಂದು ಹೇಳಿದರು.

ಯಚ್ಚರೇಶ್ವರ ವಿದ್ಯಾ ಸಂಸ್ಥೆಯ ಗೌರವ ಅಧ್ಯಕ್ಷ ಎ.ಎನ್‌. ಬಡಿಗೇರ ಮಾತನಾಡಿ, ಇಂದು ಶಿಕ್ಷಣ ಕ್ಷೇತ್ರದಲ್ಲಿ ನಿತ್ಯ ಆವಿಸ್ಕಾರ ಹಾಗೂ ಸ್ಪರ್ಧೆ ಅನಿವಾರ್ಯವಾಗಿದೆ. ಸಾಧನೆ ಎಂಬುದು ಸಾಧಕನ ಸೊತ್ತೆ ಹೊರತು ಸೊಮಾರಿಯ ಸೊತ್ತು ಅಲ್ಲ. ಜೀವನದಲ್ಲಿ ಏನಾದರೂ ಸಾಧಿಸಬೇಕೆಂಬ ತುಡಿತ ಹಾಗೂ ಅದಕ್ಕೆ ತಕ್ಕ ಪ್ರಾಮಾಣಿಕ ಶ್ರಮ ನಿಮ್ಮನ್ನು ಎತ್ತರಕ್ಕೆ ಏರಿಸಬಲ್ಲದು ಎಂದು ಹೇಳಿದರು.

ನಿವೃತ್ತ ಶಿಕ್ಷಕ ಬಿ.ಆರ್‌. ಬಡಿಗೇರ ಮಾತನಾಡಿ, ವಿದ್ಯಾರ್ಥಿಗಳನ್ನು ಕೇವಲ ಅಂಕ ಗಳಿಕೆಯ ಯಂತ್ರವಾಗಿ ಪರಿಗಣಿಸಿದೆ. ಅವರಲ್ಲಿರುವ ಮಾನವೀಯ ಮೌಲ್ಯಕ್ಕೆ ಜೀವ ತುಂಬಿ, ಸಂಸ್ಕಾರವಂತ, ಸಮಾಜಮುಖೀ ಚಿಂತನೆಯ ಸತøಜೆಗಳಾಗಿ ರೂಪಿಸುವ ಹೊಣೆಗಾರಿಕೆಯನ್ನು ಪಾಲಕರು, ಶಿಕ್ಷಕರು ಪಾಲಿಸಬೇಕು. ಧಾರ್ಮಿಕ ಕಾರ್ಯಕ್ರಮಗಳು, ಧಾರ್ಮಿಕ ಸಾಧು ಸಂತರ ಸಹವಾಸದಿಂದ ಯುವಕರಿಗೆ ವಿದ್ಯೆಯ ಜೊತೆಗೆ ವಿನಯ, ವಿವೇಕ ಪ್ರಾಪ್ತಿಯಾಗಿ ನಿತ್ಯ ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸುವ ಚೈತನ್ಯ ಶಕ್ತಿ ಪ್ರಾಪ್ತಿಯಾಗುತ್ತದೆ ಎಂದು ಹೇಳಿದರು.

ಯಚ್ಚರೇಶ್ವರ ವಿದ್ಯಾ ಸಂಸ್ಥೆಯ ಗೌರವ ಅಧ್ಯಕ್ಷ ಎ.ಎನ್‌. ಬಡಿಗೇರ, ತಾಲೂಕು ಗ್ರಾಮೀಣ ಶಿಕ್ಷಕರ ಸಂಘದ ಅಧ್ಯಕ್ಷ ಎಚ್. ವಿ. ಬ್ಯಾಡಗಿ, ಶಿಕ್ಷಕ ಕೆ.ಬಿ. ಕಡೆಮನಿ, ಶಿಕ್ಷಕಿ ಎಸ್‌.ಆರ್‌. ಸಾಲಿಮಠ, ಉಮಾ ಕಲ್ಲನಗೌಡ್ರ, ಸಿಂಚನ ಸಂಸ್ಥೆಯ ಅಧ್ಯಕ್ಷ ವೀರಯ್ಯ ವಸ್ತ್ರದ, ಮಲ್ಲಿಕಾರ್ಜುನ ಭರಮಗೌಡ್ರ, ಪಾಡು ಮಹೇಂದ್ರಕರ, ಮಲ್ಲಿಕಾರ್ಜುನ ಉಗಲಾಟ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next