Advertisement

ಚಿನ್ನದ ನಾಣ್ಯ: ಮಾಲೀಕನಿಗೆ ಒಪ್ಪಿಸಿದ ಕೂಲಿಯಾಳು!

10:48 PM Oct 19, 2021 | Team Udayavani |

ಚೆನ್ನೈ: ಕಷ್ಟಪಟ್ಟು ದುಡಿದ ಹಣದಲ್ಲಿ ಖರೀದಿಸಿದ್ದ ಚಿನ್ನದ ನಾಣ್ಯ ಕಸದ ಗಾಡಿಯಲ್ಲಿ ಕಸವಾಗಿ ಹೋಗಿದ್ದು, ಅದೃಷ್ಟವಶಾತ್‌ ಮಾಲೀಕನಿಗೆ ಮತ್ತೆ ಸಿಕ್ಕಿರುವ ಘಟನೆ ತಮಿಳುನಾಡಿನ  ಶಾಂತಕುಲಂ ನಗರದಲ್ಲಿ ನಡೆದಿದೆ.

Advertisement

ಕೊರಿಯರ್‌ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಗಣೇಶ್‌ ರಮಣ್‌ ಹೆಸರಿನ ವ್ಯಕ್ತಿ ಇತ್ತೀಚೆಗೆ 100 ಗ್ರಾಂ ಚಿನ್ನದ ನಾಣ್ಯವನ್ನು ಖರೀದಿಸಿ, ಗುಲಾಬಿ ಬಣ್ಣದ ಪೇಪರ್‌ನಲ್ಲಿ ಅದನ್ನು ಸುತ್ತಿ, ತಮ್ಮ ಹಾಸಿಗೆಯ ಕೆಳಗಿಟ್ಟಿದ್ದರು. ಅದನ್ನರಿಯದ ಅವರ ಹೆಂಡತಿ, ಕೋಣೆಯನ್ನು ಸ್ವಚ್ಛ ಮಾಡುವಾಗ ಅದನ್ನೂ ಕಸದೊಂದಿಗೆ ಸೇರಿಸಿ ಕಸದ ಗಾಡಿಗೆ ಹಾಕಿದ್ದಾರೆ.

ಕಸ ವಿಲೇವಾರಿ ಕೆಲಸ ಮಾಡುವ ಮೇರಿ ಹೆಸರಿನ ಮಹಿಳೆಗೆ ಅದು ಸಿಕ್ಕಿದ್ದು, ಅದನ್ನು ತಕ್ಷಣ ತನ್ನ ಮೇಲಿನ ಅಧಿಕಾರಿಗೆ ಹಸ್ತಾಂತರಿಸಿದ್ದಾಳೆ. ಇತ್ತ ನಾಣ್ಯ ಕಸದೊಂದಿಗೆ ಹೋಗಿದ್ದಾಗಿ ಗಣೇಶ್‌ ಕೂಡ ಶಾಂತಕುಲಂ ನಗರದ ಪೊಲೀಸ್‌ ಠಾಣೆಯ ಮೆಟ್ಟಿಲೇರಿದ್ದಾರೆ. ನಾಣ್ಯ ಪತ್ತೆ ಹಚ್ಚಿದ ಪೊಲೀಸರು, ಮೇರಿ ಕೈನಿಂದಲೇ ಅದನ್ನು ಗಣೇಶ್‌ಗೆ ಹಸ್ತಾಂತರಿಸಿದ್ದಾರೆ.

ಇದನ್ನೂ ಓದಿ:100ಕೋಟಿ ಸನಿಹಕ್ಕೆ ಲಸಿಕೆ ಅಭಿಯಾನ :ಹೆಚ್ಚು ಲಸಿಕೆ ನೀಡಿದ ರಾಜ್ಯಗಳಲ್ಲಿ ಕರ್ನಾಟಕಕ್ಕೂ ಸ್ಥಾನ

 

Advertisement
Advertisement

Udayavani is now on Telegram. Click here to join our channel and stay updated with the latest news.

Next