Advertisement

ತಮಿಳು ನಾಡು ರಾಜಭವನ ಸಂದರ್ಶಕರಿಗೆ ವಾರದ ಎಲ್ಲ ದಿನ ಮುಕ್ತ

03:59 PM Feb 08, 2018 | Team Udayavani |

ಚೆನ್ನೈ : ತಮಿಳು ನಾಡು ರಾಜ್ಯಪಾಲರ ಅಧಿಕೃತ ನಿವಾಸವಾಗಿರುವ ರಾಜ ಭವನವನ್ನು ನಾಳೆ ಶುಕ್ರವಾರದಿಂದ ತೊಡಗಿ ವಾರದ ಎಲ್ಲ ದಿನಗಳಲ್ಲಿ ಸಂದರ್ಶಕರಿಗಾಗಿ ತೆರೆದಿಡಲಾಗುವುದು. 

Advertisement

ಸಂಜೆ 4.30ರಿಂದ 5.30ರ ವರೆಗೆ ವಾರದ ಎಲ್ಲ ದಿನಗಳಲ್ಲಿ ರಾಜ್ಯಪಾಲರ ಅಧಿಕೃತ ನಿವಾಸ ರಾಜ ಭವನವನ್ನು ಸಾರ್ವಜನಿಕರ ಸಂದರ್ಶನಕ್ಕೆ ಮುಕ್ತವಿರಿಸಲು ನಿರ್ಧರಿಸಲಾಗಿದೆ ಎಂದು ರಾಜಭವನದ ಅಧಿಕೃತ ಪ್ರಕಟನೆ ತಿಳಿಸಿದೆ.

ಈ ವರೆಗೆ ರಾಜಭವನವು ಸಾರ್ವಜನಿಕರಿಗೆ ಶುಕ್ರವಾರ, ಶನಿವಾರ ಮತ್ತು ಭಾನುವಾರ ಮಾತ್ರವೇ ತೆರೆದಿಡಲಾಗುತ್ತಿತ್ತು.  ರಾಜ ಭವನ ಸಂದರ್ಶಕರು ಈಗಿನ್ನು  ಸಚಿವರು ಪ್ರಮಾಣ ವಚನ ಸ್ವೀಕರಿಸುವ ದರ್ಬಾರ್‌ ಹಾಲ್‌, ಅಧ್ಯಕ್ಷೀಯ ಗೆಸ್ಟ್‌ ಹೌಸ್‌ ಇತ್ಯಾದಿಗಳನ್ನು ಕೂಡ ವೀಕ್ಷಿಸಬಹುದಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next