Advertisement

ನಾಪತ್ತೆಯಾಗಿದ್ದ ವ್ಯಕ್ತಿಯ ಶವ ನದಿಯಲ್ಲಿ ; ಕರ್ನಾಟಕ ಅರಣ್ಯ ಸಿಬಂದಿ ಮೇಲೆ ಆರೋಪ

09:25 PM Feb 17, 2023 | Team Udayavani |

ಈರೋಡ್: ತಮಿಳುನಾಡು ಮತ್ತು ಕರ್ನಾಟಕದ ಅಂತಾರಾಜ್ಯ ಗಡಿಯಲ್ಲಿ ದಿನಗಳ ಹಿಂದೆ ನಾಪತ್ತೆಯಾಗಿದ್ದ 40 ವರ್ಷದ ವ್ಯಕ್ತಿಯ ಶವ ಶುಕ್ರವಾರ ಈರೋಡ್ ಜಿಲ್ಲೆಯ ಪಾಲಾರ್ ನದಿಯಲ್ಲಿ ತೇಲುತ್ತಿರುವುದು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಕರ್ನಾಟಕ ಅರಣ್ಯ ಸಿಬಂದಿ ಗುಂಡಿಗೆ ಬಲಿಯಾಗಿದ್ದಾನೆ ಎಂದು ಗ್ರಾಮಸ್ಥರು ಆರೋಪಿಸಿದಂತೆ, ನೆರೆಯ ರಾಜ್ಯದ ಕೊಳತ್ತೂರು ಸೇರಿದಂತೆ ಗಡಿಯಲ್ಲಿ ಉದ್ವಿಗ್ನತೆ ಉಂಟಾಗಿದ್ದು, ತಮಿಳುನಾಡು ಮತ್ತು ಕರ್ನಾಟಕ ಅಧಿಕಾರಿಗಳು ಕಾನೂನು ಸುವ್ಯವಸ್ಥೆ ಕಾಪಾಡಲು ಸಾಕಷ್ಟು ಪೊಲೀಸರನ್ನು ನಿಯೋಜಿಸಿದ್ದಾರೆ. ವಾಹನ ಸಂಚಾರಕ್ಕೂ ಕೆಲಕಾಲ ತೊಂದರೆಯಾಗಿದೆ.

ಮೃತ ವ್ಯಕ್ತಿಯನ್ನು ಎಂ. ಕರವಡಿಯಾನ್ ಅಲಿಯಾಸ್ ರಾಜಾ ಎಂದು ಗುರುತಿಸಲಾಗಿದ್ದು, ಆತ ಸೇಲಂ ಜಿಲ್ಲೆಯ ಕೊಳತ್ತೂರಿನ ಗೋವಿಂದಪಾಡಿ ಗ್ರಾಮದವನಾಗಿದ್ದು, ಆತನನ್ನು ಕರ್ನಾಟಕ ಅರಣ್ಯ ಸಿಬಂದಿ ಗುಂಡಿಕ್ಕಿ ಕೊಂದಿರುವುದಾಗಿ ಆತನ ಸಂಬಂಧಿಕರು ಆರೋಪಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಫೆಬ್ರವರಿ 14 ರಂದು ತಮಿಳುನಾಡು-ಕರ್ನಾಟಕ ಅಂತಾರಾಜ್ಯ ಗಡಿಯಲ್ಲಿರುವ ಅರಣ್ಯ ಪ್ರದೇಶಕ್ಕೆ ತೆರಳಿದ್ದ 4 ಜನರ ಗುಂಪಿನಲ್ಲಿ ರಾಜಾ ಇದ್ದ ಮತ್ತು ಅವರು ನದಿಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದರು.

ಸ್ಥಳೀಯ ಜನರ ಪ್ರಕಾರ, ಕರ್ನಾಟಕದ ಸಿಬಂದಿಗಳು ಮಾಡಿರುವ ಆರೋಪವೆಂದರೆ ಈ ಗುಂಪು ಕಾಡಿನಲ್ಲಿ ಬೇಟೆಯಾಡಲು ಪ್ರಯತ್ನಿಸಿದೆ. ಗುಂಡು ತಗುಲಿ ಆತ ಮೃತಪಟ್ಟರೆ, ಇತರರು ಗಾಯಗೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ. ರಾಜಾ ಅವರ ಅನುಮಾನಾಸ್ಪದ ಸಾವಿನ ಕುರಿತು ಸಿಆರ್‌ಪಿಸಿ ಅಡಿಯಲ್ಲಿ ತನಿಖೆ ನಡೆಯುತ್ತಿದೆ ಎಂದು ಈರೋಡ್ ಜಿಲ್ಲಾ ಪೊಲೀಸರು ತಿಳಿಸಿದ್ದಾರೆ.

Advertisement

ಟ್ರಕ್ ಡ್ರೈವರ್ ಆಗಿರುವ ರಾಜಾ ತಮಿಳುನಾಡಿನ ಬರ್ಗೂರು ಮತ್ತು ಮೆಟ್ಟೂರು ಮತ್ತು ನೆರೆಯ ಕರ್ನಾಟಕದ ಗಡಿಯಲ್ಲಿ ಕಾಡು ಪ್ರಾಣಿಗಳನ್ನು ಬೇಟೆಯಾಡಿದ ಆರೋಪವನ್ನು ಎದುರಿಸಿದ್ದು, ಕರ್ನಾಟಕದ ಚಾಮರಾಜನಗರ ಜಿಲ್ಲೆಯಲ್ಲಿ ಕಳ್ಳಬೇಟೆಗೆ ಸಂಬಂಧಿಸಿದಂತೆ ಪ್ರಕರಣವನ್ನು ಎದುರಿಸಿದ್ದರು. ಆತನ ವಿರುದ್ಧ ಕೊಳತ್ತೂರಿನಲ್ಲಿ (ಸೇಲಂ ಜಿಲ್ಲೆ) ಜೂಜಾಟದ ಪ್ರಕರಣವೊಂದು ಬಾಕಿ ಉಳಿದಿತ್ತು.

ಫೆಬ್ರವರಿ 14 ರಂದು ರಾಜಾ ಬೇಟೆಗೆಂದು ತಮಿಳುನಾಡಿನ ಗಡಿಭಾಗದ ಚಾಮರಾಜನಗರಕ್ಕೆ ಬಂದಿದ್ದರು. ಆತ ‘ಆಕಸ್ಮಿಕವಾಗಿ ಮುಳುಗಿ’ ಅಥವಾ ‘ಬೇರೆ ಕಾರಣಕ್ಕಾಗಿ’ ನದಿಗೆ ಹಾರಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಫೆಬ್ರವರಿ 14 ಮತ್ತು 17 ರ ನಡುವೆ ಪಾಲಾರು ನದಿಯ ಸೇತುವೆಯ ಬಳಿ ಮೆಟ್ಟೂರಿನ ಮಲೆ ಮಹದೇಶ್ವರ ಬೆಟ್ಟದ ರಸ್ತೆಯ ಹತ್ತಿರ ಇದು ಸಂಭವಿಸಿರಬಹುದು ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next