Advertisement

ಅಮೆರಿಕದಲ್ಲಿರುವ 2 ವರ್ಷದ ಮಗು ಶೀಘ್ರ ತಮಿಳುನಾಡಿಗೆ

10:59 PM Mar 29, 2023 | Team Udayavani |

ಚೆನ್ನೈ: ಅಮೆರಿಕದಲ್ಲಿ ತಂದೆ-ತಾಯಿ ಸಾವಿನಿಂದ ಅನಾಥವಾಗಿರುವ 2 ವರ್ಷದ ಮಗುವನ್ನು ತಮಿಳುನಾಡಿಗೆ ಕರೆತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಮೂಲಕ ಕಾನೂನಾತ್ಮಕ ಮತ್ತು ರಾಜತಾಂತ್ರಿಕ ಸೇರಿದಂತೆ ಅಗತ್ಯ ನೆರವು ನೀಡಲಾಗುವುದು ಎಂದು ತಮಿಳುನಾಡು ಸರ್ಕಾರ ಭರವಸೆ ನೀಡಿದೆ.

Advertisement

“ಪ್ರಸ್ತುತ ಅಮೆರಿಕದಲ್ಲಿ ನೆರೆಮನೆಯವರ ರಕ್ಷಣೆಯಲ್ಲಿರುವ ಗಂಡು ಮಗುವನ್ನು ಶೀಘ್ರ ತಮಿಳುನಾಡಿನಲ್ಲಿರುವ ಅವರ ಕುಟುಂಬಕ್ಕೆ ಹಸ್ತಾಂತರಿಸಲು ಕ್ರಮ ತೆಗೆದುಕೊಳ್ಳಲಾಗುತ್ತದೆ. ಈ ಟ್ಟಿನಲ್ಲಿ ವಿದೇಶಾಂಗ ಸಚಿವಾಲಯದ ಮೂಲಕ ಸಮಸ್ಯೆ ಬಗೆಹರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್‌ ನಿರ್ದೇಶನ ನೀಡಿದ್ದಾರೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಳೆದ ವರ್ಷದ ಮೇನಲ್ಲಿ ಅಮೆರಿಕದ ಮಿಸ್ಸಿಸ್ಸಿಪಿಯಲ್ಲಿ ಮಗುವಿನ ತಂದೆ, ತಾಯಿ ಮೃತಪಟ್ಟಿದ್ದರು. ನೆರೆಮನೆಯವರ ರಕ್ಷಣೆಯಲ್ಲಿರುವ ಮಗುವನ್ನು ಕಾನೂನಾತ್ಮಕವಾಗಿ ತಮ್ಮ ವಶಕ್ಕೆ ಪಡೆಯಲು ಮಗುವಿನ ತಾತಾ, ಅಜ್ಜಿ, ದೊಡ್ಡಮ್ಮ ಇಷ್ಟು ದಿನಗಳಿಂದ ಹೋರಾಟ ನಡೆಸುತ್ತಿದ್ದಾರೆ. ಇದೀಗ ಅವರು ಸರ್ಕಾರದ ಗಮನಕ್ಕೆ ತಂದಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next