Advertisement

BJP ನಾಯಕರ ವಿರುದ್ಧ ಸುಳ್ಳು ಕೇಸ್‌ ಹಾಕಿ ಜೈಲಿಗಟ್ಟಿ; TMC ವಿವಾದ

04:20 PM Sep 04, 2018 | udayavani editorial |

ಕೋಲ್ಕತ : ಬಿಜೆಪಿ ನಾಯಕರ ವಿರುದ್ಧ ಮಾದಕ ದ್ರವ್ಯ ಹೊಂದಿರುವ ಸುಳ್ಳು ಕೇಸು ಹಾಕಿ, ಬಂಧಿಸಿ ಜೈಲಿಗೆ ಅಟ್ಟುವಂತೆ ಟಿಎಂಸಿ ನಾಯಕ ಅನುಬೃತ ಮಂಡಲ್‌ ಅವರು ಪಕ್ಷದ ಕಾರ್ಯಕತರನ್ನು ಕೇಳಿಕೊಂಡಿರುವ ವಿಡಿಯೋ ವೈರಲ್‌ ಆಗಿದ್ದು ರಾಜಕೀಯ ವಲಯಗಳಲ್ಲಿ ವ್ಯಾಪಕ ಟೀಕೆ, ಖಂಡನೆಗೆ ಗುರಿಯಾಗಿದೆ. 

Advertisement

ಟಿಎಂಸಿ ತನ್ನ ರಾಜಕೀಯ ಎದುರಾಳಿಗಳ ವಿರುದ್ದ ಮುಯ್ಯಿ ತೀರಿಸಿಕೊಳ್ಳಲು ಪೊಲೀಸ್‌ ಬಲವನ್ನು ಉಪಯೋಗಿಸಿಕೊಳ್ಳುತ್ತಿದೆ ಎಂದು ವಿರೋಧ ಪಕ್ಷ ಆಪಾದಿಸಿದೆ. 

ಬೀರ್‌ಭೂಮ್‌ ಜಿಲ್ಲೆಯ ಟಿಎಂಸಿ ಘಟಕದ ಅಧ್ಯಕ್ಷರಾಗಿರುವ ಅನುಬೃತ ಮಂಡಲ್‌ ಅವರು ನೆರೆಯ ಪೂರ್ವ ಬರ್‌ದ್ವಾನ್‌ ಜಿಲ್ಲೆಯಲ್ಲಿನ ಔಷ್‌ಗ್ರಾಮ್‌ ವಿಧಾನಸಭಾ ಕ್ಷೇತ್ರದಲ್ಲಿ ಸಭೆಯೊಂದರ ಅಧ್ಯಕ್ಷತೆ ವಹಿಸಿ ಈ ಹೇಳಿಕೆ ನೀಡಿದ್ದಾರೆ. ಇದರ ವಿಡಿಯೋ ವೈರಲ್‌ ಆಗಿದ್ದು ಅದೀಗ ವಿರೋಧ ಪಕ್ಷಕ್ಕೆ ಟೀಕಾಸ್ತ್ರವನ್ನು ಒದಗಿಸಿದೆ. 

ಪಶ್ಚಿಮ ಬಂಗಾಲದಲ್ಲಿ  ಅಫೀಮು, ಗಾಂಜಾ ಮುಂತಾದ ಮಾದಕ ದ್ರವ್ಯವನ್ನು  ಕನಿಷ್ಠ 1 ಕಿಲೋ ಹೊಂದಿದರೂ 6 ತಿಂಗಳ ಜೈಲು ಶಿಕ್ಷೆಗೆ, ಹೆಚ್ಚು ಪ್ರಮಾಣ ಹೊಂದಿದ್ದರೆ 20 ವರ್ಷ ಜೈಲು ಶಿಕ್ಷೆಗೆ ಗುರಿಯಾಗುತ್ತಾರೆ. 

Advertisement

Udayavani is now on Telegram. Click here to join our channel and stay updated with the latest news.

Next